ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನಕ್ಕೆ ತಾವು ಕಾರಣ ಎಂಬ ಗಾಸಿಪ್‌ಗಳಿಂದ ನಟಿ ಸಂಜನಾ ಆನಂದ್ ಬೇಸತ್ತು, ಸ್ಪಷ್ಟನೆ ನೀಡಿದ್ದಾರೆ. ಎಐ ನಿರ್ಮಿತ ನಕಲಿ ಮದುವೆ ಆಮಂತ್ರಣಗಳು ಹರಿದಾಡಿದ್ದರಿಂದ ತೀವ್ರ ತೊಂದರೆಯಾಯಿತೆಂದೂ, ಮದುವೆಯ ಬಗ್ಗೆ ನಂಬಿಕೆ ಕಳೆದುಹೋಗಿದೆಯೆಂದೂ ಅವರು ಹೇಳಿದ್ದಾರೆ. ಸದ್ಯಕ್ಕೆ ಸಿನಿಮಾ, ವೃತ್ತಿಜೀವನದ ಮೇಲೆ ಮಾತ್ರ ಗಮನ ಎಂದಿದ್ದಾರೆ.
ಕಳೆದ ವರ್ಷ ಸ್ಯಾಂಡಲ್ವುಡ್ಗೆ ಬರಸಿಡಿಲಿನಂತೆ ಬಡಿದ ಸುದ್ದಿಗಳಲ್ಲಿ ಒಂದು ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಅವರ ಡಿವೋರ್ಸ್ ವಿಷಯ. ಸದ್ದಿಲ್ಲದೇ, ಯಾವುದೇ ಗಲಾಟೆ ಮಾಡಿಕೊಳ್ಳದೇ ಕೋರ್ಟ್ಗೆ ಹೋಗಿ ಈ ದಂಪತಿ ಡಿವೋರ್ಸ್ ಪಡೆದು ಬಂದಿದ್ದು ಅಭಿಮಾನಿಗಳಿಗೆ ಶಾಕ್ ಆಗಿತ್ತು. ಈ ಸುದ್ದಿ ನಿಜವೋ, ಸುಳ್ಳೋ ಎಂದು ತಡಕಾಡುವಷ್ಟರಲ್ಲಿಯೇ ಇವರು ಡಿವೋರ್ಸ್ ಪಡೆದಾಗಿತ್ತು. ವಿಚ್ಛೇದನ ಪಡೆದ ರೀತಿ ಮಾದರಿ ಎನ್ನಿಸಿದ್ದರೂ, ದಾಂಪತ್ಯ ಜೀವನವನ್ನು ಕೊನೆ ಮಾಡಿರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿಯೇ ಉಳಿಯಿತು. ಈ ಬಗ್ಗೆ ಜೋಡಿ ಕೂಡ ಸೈಲೆಂಟಾಗಿಯೇ ಇರುವ ಕಾರಣ, ಜನರ ಬಾಯಲ್ಲಿ ಇವರ ವಿಚ್ಛೇದನ ಸುದ್ದಿ ಆಹಾರವಾಗಿ ಹೋಯಿತು. ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆಗಳು ಶುರುವಾದವು.
ಆಗ ಚಂದನ್ ಶೆಟ್ಟಿ ಜೊತೆ ಥಳಕು ಹಾಕಿಕೊಂಡಿದ್ದು ಸಲಗ ಚಿತ್ರದ ಖ್ಯಾತಿಯ ನಟಿ, ಸಂಜನಾ ಆನಂದ್ ಅವರ ಹೆಸರು. ಈ ಡಿವೋರ್ಸ್ಗೂ ಕಾರಣ ಸಂಜನಾ ಅವರೇ ಎನ್ನುವಷ್ಟರ ಮಟ್ಟಿಗೆ ಗಾಸಿಪ್ ಹರಡಿತು. ಒಂದು ವಿಷಯ ಕಿಡಿ ಹೊತ್ತಿಕೊಂಡರೆ ಮುಗಿಯಿತಲ್ಲ, ಸುಳ್ಳೋ, ನಿಜನೋ ತಿಳಿಯದೇ ಒಂದಿಷ್ಟು ಸೋಷಿಯಲ್ ಮೀಡಿಯಾಗಳ ಪುಟಗಳಲ್ಲಿ ಇದೇ ನಿಜ ಎನ್ನುವಂತೆ ಬಿಂಬಿಸಲಾಯಿತು. ಅದು ಎಷ್ಟರಮಟ್ಟಿಗೆ ಹೋಯಿತು ಎಂದರೆ, ಚಂದನ್ ಶೆಟ್ಟಿ ಮತ್ತು ಸಂಜನಾ ಅವರ ಎಐ ಚಿತ್ರವನ್ನು ಸೃಷ್ಟಿಸಿ, ಇವರು ಮದುವೆಯಾಗಲಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು. ಮಂಗಳೂರಿನಲ್ಲಿ ಮದುವೆ ಎಂಬಂತೆ ಆಮಂತ್ರಣ ಪತ್ರಿಕೆಯನ್ನೂ ಸೃಷ್ಟಿಸಿಬಿಟ್ಟರು. ಮದುವೆಯ ಮೆನು ಕೂಡ ಹಾಕಲಾಗಿತ್ತು!
ಗುಡ್ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ-ಸುಷ್ಮಾಗೆ ಎದುರಾಯ್ತು ಸಂಕಷ್ಟ: ಕೇಸ್ನ ಭಯದಲ್ಲಿದ್ರೂ ಭರ್ಜರಿ ಡಾನ್ಸ್
ಇಂಥ ವಿಷಯಗಳು ಅದೆಷ್ಟು ಸೂಕ್ಷ್ಮವಾಗಿರುತ್ತದೆ ಎಂದು ಅರಿಯದ ಮನಸ್ಸುಗಳು ಹೀಗೆ ಮಾಡಿದಾಗ, ಅದು ಸಹಜವಾಗಿ ಹೆಣ್ಣುಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೂ ಸೆಲೆಬ್ರಿಟಿಗಳಾಗಿದ್ದರಂತೂ ಮುಗಿದೇ ಹೋಯ್ತು. ಅದೇ ರೀತಿಯ ನೋವು ಅನುಭವಿಸಿದವರು ನಟಿ ಸಂಜನಾ ಆನಂದ್. ಇದೀಗ ಆ ವಿಷಯದ ಬಗ್ಗೆ ಖಾಸಗಿ ಯೂಟ್ಯೂಬ್ ಚಾನೆಲ್ ಒಂದರ ಜೊತೆ ಮಾತನಾಡುವಾಗ ಹೇಳಿದ್ದಾರೆ. ಚಂದನ್ ಮತ್ತು ನಿವೇದಿತಾ ಡಿವೋರ್ಸ್ಗೆ ನಾನೇ ಕಾರಣ ಅನ್ನುವಂತೆ ಬಿಂಬಿಸಿಬಿಟ್ಟರು. ಅದು ಎಷ್ಟು ದೊಡ್ಡದಾಯಿತು ಎಂದರೆ, ನನಗೆ ಗೊತ್ತಿಲ್ಲದೇ ಆ ಸುದ್ದಿ ಎಲ್ಲೆಲ್ಲೋ ಹೋಗಿಬಿಟ್ಟಿತು ಎಂದಿದ್ದಾರೆ ಸಂಜನಾ. ನನ್ನ ಸಂಬಂಧಿಕರೂ, ಸ್ನೇಹಿತರು ಕರೆ ಮಾಡಿ, ಏನೇ ಮದುವೆಯಂತೆ, ನಮಗೆ ಕರೆಯಲೇ ಇಲ್ಲಾ ಎಂದಾಗ ಶಾಕ್ ಅಗಿದ್ದಂತೂ ನಿಜ ಎಂದಿದ್ದಾರೆ.
ಆ ಸುದ್ದಿ ಅಲ್ಲಿಗೇ ಮುಗಿಯತ್ತೆ ಅಂದುಕೊಂಡಾಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಮದುವೆ, ಆಮಂತ್ರಣ ಪತ್ರಿಕೆ, ಊಟದ ಮೆನು ಎಲ್ಲಾ ಮಾಡಿಬಿಟ್ಟಾಗ ಫೋನ್ ಬರುವುದು ಹೆಚ್ಚಾಯಿತು. ಎಲ್ಲರಿಗೂ ಕ್ಲಾರಿಫಿಕೇಷನ್ ಕೊಡಬೇಕಾಯಿತು ಎಂದಿದ್ದಾರೆ. ಯಾರಾದರೂ ಫೋನ್ ಮಾಡಿದಾಗ ಟೆನ್ಷನ್ ಆಗಿದ್ದು ನಿಜ. ಆದರೆ ಕೊನೆಕೊನೆಗೆ ಇದು ಮ್ಯಾಟರೇ ಆಗಲಿಲ್ಲ. ಈ ರೀತಿ ಮಾಡುವವರ ಮನಸ್ಥಿತಿಯನ್ನು ಅದು ತೋರಿಸುತ್ತದೆ ಎಂದು ಸುಮ್ಮನಾದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾರಿಫಿಕೇಷ್ ಕೊಡಲೇಬೇಕಿತ್ತು, ಕೊಟ್ಟೆ ಅಷ್ಟೇ. ಇದನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ. ಸದ್ಯ ಮದುವೆಯ ಬಗ್ಗೆ ಯೋಚಿಸಿಲ್ಲ. ಏನಿದ್ದರೂ ಸಿನಿಮಾ, ನನ್ನಕರಿಯರ್ ಮೇಲಷ್ಟೇ ಚಿಂತೆ. ನಿಜ ಹೇಳಬೇಕು ಎಂದರೆ ಮದುವೆಯೆನ್ನುವ ಕಾನ್ಸೆಪ್ಟ್ ಮೇಲೆ ನಂಬಿಕೆ ಇಲ್ಲ. ನನ್ನ ಸ್ನೇಹಿತೆಯರನ್ನೆಲ್ಲಾ ನೋಡುತ್ತಿದ್ದೇನಲ್ಲ, ಯಾಕಾದ್ರೂ ಮದುವೆ ಆಗಿದ್ದಾರೋ ಎನ್ನಿಸತ್ತೆ. ಮುಂದೆ ಏನು ಅಂತ ನೋಡೋಣ, ಸದ್ಯ ಅದರ ಬಗ್ಗೆ ಯೋಚನೆ ಇಲ್ಲ ಎಂದಿದ್ದಾರೆ ಸಂಜನಾ.
ಮಂಚದಲ್ಲಿನ ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?
