ಹಿರಿಯ ನಟ ದತ್ತಣ್ಣ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿ.ವಿ.ಪುರಂ ಫುಡ್ ಕೋರ್ಟ್‌ನಲ್ಲಿ ಭೇಟಿಯಾಗಿ ವಿವಿಧ ಖಾದ್ಯಗಳನ್ನು ಸವಿದರು. ದತ್ತಣ್ಣನವರು "ಅನಪು" ಎಂಬ ಪದದ ಅರ್ಥ ತಿಳಿಯದೆ ತಲೆ ಕೆಡಿಸಿಕೊಂಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಫುಡ್ ಕೋರ್ಟ್‌ಗೆ ಕರೆದೊಯ್ದು ತಿಂಡಿ ತಿನ್ನಿಸಿದರು. ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಈ ಭೇಟಿಯ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ವುಡ್ ಹಿರಿಯ ನಟ ಎಚ್.ಸಿ ದತ್ತಾತ್ರೇಯ (Sandalwood Senior actor H.C. Dattatreya) ಅಲಿಯಾಸ್ ಅಭಿಮಾನಿಗಳ ಪ್ರೀತಿಯ ದತ್ತಣ್ಣ (Dattanna) ಮತ್ತು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (, director Nagathihalli Chandrashekhar) ಅವರನ್ನು ಒಂದೇ ಫ್ರೇಮ್ ನಲ್ಲಿ ನೋಡುವ ಅವಕಾಶ ಫ್ಯಾನ್ಸ್ ಗೆ ಸಿಕ್ಕಿದೆ. ವಿವಿ ಪುರಂ ಫುಡ್ ಕೋರ್ಟ್ ಗೆ ಲಗ್ಗೆ ಇಟ್ಟಿದ್ದ ಈ ಇಬ್ಬರು ದಿಗ್ಗಜರು, ಬಗೆ ಬಗೆ ಖಾದ್ಯದ ರುಚಿ ಸವಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ.

ದತ್ತಣ್ಣ ಜೊತೆಗಿರುವ ನಾಲ್ಕೈದು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗೆ ಪೋಸ್ಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ಉದ್ದದ ಶೀರ್ಷಿಕೆ ಬರೆದಿದ್ದಾರೆ. ದತ್ತಣ್ಣ ಅವರನ್ನು ಹುಡುಕಿಕೊಂಡು ಅವರ ಮನೆಗೆ ನಾಗತಿಹಳ್ಳಿ ಚಂದ್ರಶೇಖರ್ ಹೋಗಿದ್ದರು. ರಾಶಿ ಪುಸ್ತಕದ ಮಧ್ಯೆ ಕುಳಿತಿದ್ದ ದತ್ತಣ್ಣ, ಒಂದು ಶಬ್ಧದ ಅರ್ಥ ಸಿಗದೆ ಚಡಪಡಿಸುತ್ತಿದ್ದರು. ಅದಕ್ಕೆ ಬ್ರೇಕ್ ನೀಡಿದ ನಾಗತಿಹಳ್ಳಿ ಚಂದ್ರಶೇಖರ್, ದತ್ತಣ್ಣ ಅವರನ್ನು ವಿವಿ ಪುರಂ ಫುಡ್ ಕೋರ್ಟ್ ಗೆ ಕರೆದೊಯ್ದರು. ಅಲ್ಲಿ ಜಿಲೇಬಿ, ಬಾದಾಮಿ ಹಾಲು, ಇಡ್ಲಿ, ಚಿತ್ರಾಹ್ನ ಹೀಗೆ ನಾನಾ ಆಹಾರದ ರುಚಿ ಸವಿದ ಈ ಜೋಡಿ, ಬಂದ ಫ್ಯಾನ್ಸ್ ಗೆ ಸೆಲ್ಫಿ ನೀಡಿದ್ರು. ಇಬ್ಬರು ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದು, ಈಗ ನಾಗತಿಹಳ್ಳಿ ಚಂದ್ರಶೇಖರ್, ದತ್ತಣ್ಣ ತಲೆ ಕೆಡಿಸಿರುವ ಪದದ ಅರ್ಥದ ಹುಡುಕಾಟದಲ್ಲಿದ್ದಾರೆ. ಅಷ್ಟಕ್ಕೂ ಆ ಪದ ಯಾವ್ದು, ದತ್ತಣ್ಣ ಭೇಟಿ ಹೇಗಿತ್ತು ಅನ್ನೋದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದಾರೆ.

ಡಾಲಿ ಧನಂಜಯ್‌ ಬಾತ್‌ರೂಮ್‌ಗೆ ಹೋದಾಗ ಪಕ್ಕದಲ್ಲಿದ್ದ ಪುನೀತ್‌ ರಾಜ್‌ಕುಮಾರ್ ಕೇಳಿದ್ದು ಈ ಒಂದೇ ಪ್ರಶ್ನೆ...

ನಾಗತಿಹಳ್ಳಿ ಚಂದ್ರಶೇಖರ್ ಬರೆದಿರೋದು ಏನು? : ನಿನ್ನೆ ರಾತ್ರಿ ಹನ್ನೊಂದರಲ್ಲಿ ದತ್ತಣ್ಣ ನೆನಪಾದ. ಇನ್ನೂ ಬದುಕಿರಬಹುದು ಎಂಬ ಗುಮಾನಿಯಿಂದ ಅಣ್ಣನ ಕಸದ ತೊಟ್ಟಿಯಂಥ ರೂಮಿಗೆ ಹುಡುಕಿ ಹೋದೆ. ಕುಮಾರವ್ಯಾಸ ಬಳಸಿದ್ದಾನೆ ಎನ್ನಲಾದ “ಅನಪು” ಎಂಬ ಪದದ ಬಗ್ಗೆ ಅಣ್ಣ ತಲೆ ಕೆಡಿಸಿಕೊಂಡು ಕೂತಿದ್ದ. ಕುಮಾರವ್ಯಾಸ ಹಾಳು ಬಿದ್ದು ಹೋಗಲಿ ಬಾ ಏನಾದರೂ ಕೊಡಿಸ್ತೀನಿ ಎಂದು ವಿವಿ ಪುರಂನ ಫುಡ್ ಕೋರ್ಟಿಗೆ ಕರೆದುಕೊಂಡು ಹೋದರೆ ಒಂದು ಕಡೆ ಕೂತು ತಿನ್ನದ ಚಪಲ ಚಿತ್ತ. ಅವರೆಬೇಳೆ ದೋಸೆ, ಇಡ್ಲಿ, ಚಿತ್ರಾನ್ನ, ಪಲಾವ್, ಜಿಲೇಬಿ, ಬಾದಾಮಿ ಹಾಲು, ಬೀಡಾ..ಒಂದೊಂದು ಅಂಗಡಿಯಲ್ಲಿ ಒಂದೊಂದು ತಿನ್ನಬೇಕಂತೆ. ತಿಂಡಿಪೋತ. ಚೆನ್ನಾಗಿ ಚಚ್ಚಿದೆವು. ಅಣ್ಣನಿಗೆ ನಟ್ಟಿರುಳಲ್ಲೂ ಅಭಿಮಾನಿಗಳು. ರಿಬೇಟು. ಸೆಲ್ಫಿಗಳಿಗೆ ಮುಖ ಆನಿಸಿ ಸುಸ್ತಾಗಿ ರಾತ್ರಿ ಒಂದರಲ್ಲಿ ಅಣ್ಣನನ್ನು ಅವನ ಕಸದ ತೊಟ್ಟಿಗೆ ಬಿಸಾಕುವಾಗ ಅಣ್ಣನ ಅಂತಿಮ ಪ್ರಶ್ನೆಃ “ಅನಪು ಅಂದ್ರೇನು?”. ಮುಂಜಾನೆ ಎದ್ದು ಕುಮಾರವ್ಯಾಸನನ್ನು ಓದಬೇಕಿದೆ. ಓದಿ ಅರ್ಥ ಹೇಳಬೇಕಿದೆ. ಹೀಗಂತ ನಾಗತಿಹಳ್ಳಿ ಚಂದ್ರಶೇಖರ್ ಶೀರ್ಷಿಕೆ ಹಾಕಿದ್ದಾರೆ. 

6ತಿಂಗಳ ಬಳಿಕ RRನಗರ ಬಂಗಲೆಗೆ ದರ್ಶನ್, ಶಾಪಗ್ರಸ್ತ ನಿವಾಸದಲ್ಲಿ ದಾಸನ ವಾಸ! ಸರಿ

ನಾಗತಿಹಳ್ಳಿ ಚಂದ್ರಶೇಖರ್ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಇಂಥ ಜೋಡಿಯನ್ನು ವರ್ಣಿಸೋದು ಕಷ್ಟ ಎಂದಿದ್ದಾರೆ. ಹಾಗೆಯೇ ಅನಪುಗೆ ಅರ್ಥ ಹೇಳುವ ಪ್ರಯತ್ನವನ್ನೂ ಮಾಡಿದ್ದಾರೆ. 82 ವರ್ಷದ ದತ್ತಣ್ಣ ಈಗ್ಲೂ ಸಿನಿಮಾದಲ್ಲಿ ಸಕ್ರಿಯವಾಗಿದ್ದಾರೆ. ಸಿನಿಮಾ, ಧಾರಾವಾಹಿಯಲ್ಲಿ ನಟಿಸುತ್ತಿರುವ ಅವರು ತಮ್ಮ 45ನೇ ವರ್ಷದಲ್ಲಿ ವೃತ್ತಿ ಜೀವನ ಶುರು ಮಾಡಿದ್ರು. ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ನಿವೃತ್ತಿ ನಂತ್ರ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಜೊತೆ ಕೆಲಸ ಮಾಡಿರುವ ದತ್ತಣ್ಣ, ಈ ವಯಸ್ಸಿನಲ್ಲೂ ಯುವಕರನ್ನು ನಾಚಿಸುವಷ್ಟು ಆಕ್ಟಿವ್ ಆಗಿದ್ದಾರೆ. ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆಯುಳ್ಳವರು. ಕಥೆಗಾರ, ಕಾದಂಬರಿಗಾರ, ಅಂಕಣಕಾರ, ಪ್ರಕಾಶಕ ಹೀಗೆ ನಾನಾ ಪಾತ್ರಗಳನ್ನು ಅವರು ನಿರ್ವಹಿಸುತ್ತಿದ್ದು, ದತ್ತಣ್ಣನ ಭೇಟಿಯನ್ನು ಅವರು ವರ್ಣಿಸಿದ ರೀತಿ ಅಭಿಮಾನಿಗಳನ್ನು ಸೆಳೆದಿದೆ.