ಡಾಲಿ ಧನಂಜಯ್‌ಗೆ ಟಗರು ಸಿನಿಮಾ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆಗಿನ ಒಡನಾಟವನ್ನು ಅವರು ನೆನಪಿಸಿಕೊಂಡಿದ್ದಾರೆ. ಯುವರತ್ನ ಚಿತ್ರದ ಪ್ರಚಾರದಲ್ಲಿ ಪುನೀತ್, ಧನಂಜಯ್‌ರನ್ನು ಪ್ರೋತ್ಸಾಹಿಸಿದರು. ನಟನಾಗುವ ಮುನ್ನ ಪುನೀತ್ ಅವರನ್ನು ಭೇಟಿಯಾಗಿದ್ದು, ಅವರು ನೀಡಿದ ಬೆಂಬಲವನ್ನು ಧನಂಜಯ್ ಸ್ಮರಿಸಿದ್ದಾರೆ. ನೆನಪುಗಳೇ ದೊಡ್ಡ ಸಂಪಾದನೆ ಎಂದು ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ನಟ ಹಾಗೂ ನಿರ್ಮಾಪಕ ಡಾಲಿ ಧನಂಜಯ್ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್‌ ಟಗರು ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಟಗರು ಚಿತ್ರದಲ್ಲಿ ನಟಿಸಿ ಡಾಲಿ ಬಿರುದು ಪಡೆದರು. ಅದಾದ ಮೇಲೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಯುವರತ್ನ ಸಿನಿಮಾದಲ್ಲಿ ನಟಿಸಿದ್ದರು. ಆಗ ಇಡೀ ಕರ್ನಾಟಕ ಟೂರ್ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಇಡೀ ಟೂರ್‌ನಲ್ಲಿ ಧನಂಜಯ್‌ ಅವರನ್ನು ಪಕ್ಕದಲ್ಲಿ ಇರಿಸಿಕೊಂಡಿದ್ದರು. ಆಗ ಕ್ಲಿಕ್ ಆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಲೂ ವೈರಲ್.

'ನನ್ನ ಮೊದಲ ಡೈರೆಕ್ಟರ್ ಸ್ಪೆಷಲ್ ಸಿನಿಮಾ ಪ್ರೀಮಿಯರ್‌ ಶೋ ಅಪ್ಪು ಸರ್‌ಗೆ ಎಂದು ಮಾಡಲಾಗಿತ್ತು. ಸಿನಿಮಾದ ನಿರ್ದೇಶಕರು ಗುರು ಪ್ರಸಾದ್ ನನ್ನನ್ನು ಪರಿಚಯಿಸಿಕೊಟ್ಟರು ಇಂಟರ್ವಲ್‌ ಬಂದಾಗ ಬಾತ್‌ರೂಮ್‌ಗೆ ಹೋಗಿದ್ದ ಅಲ್ಲಿ ಅಪ್ಪು ಸರ್ ಪಕ್ಕದಲ್ಲಿದ್ದರು. ನೀವು ಅಕ್ಟಿಂಗ್ ಶುರು ಮಾಡಿದ್ದು ಎಂದು ಕೇಳಿದರು ಆಗ ನಾನು ನಾಟಕಗಳನ್ನು ಮಾಡುತ್ತಿದ್ದೀನಿ ಎಂದಿದ್ದೆ...ಆಗ ನಿಮಗೆ ಒಳ್ಳೆ ಭವಿಷ್ಯ ಇದೆ ಎಂದು ಹೇಳಿದ್ದರು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಧನಂಜಯ್ ಮಾತನಾಡಿದ್ದಾರೆ. ಧನಂಜತ್ ನಟನಾಗುವ ಮುನ್ನ ಖಾಸಗಿ ಜಾಹೀರಾತು ಚಿತ್ರೀಕರಣ ಸಮಯದಲ್ಲಿ ಅಪ್ಪು ಭೇಟಿ ಮಾಡಿದ್ದಾರೆ. ಟಿಸಿಎಸ್‌ ಮ್ಯಾರೆಥಾನ್‌ಗೆ ಪುನೀತ್ ರಾಜ್‌ಕುಮಾರ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು ಅದರ ಫೋಟೋಶೂಟ್‌ಗೆ ಸಿನಿಮ್ಯಾಟೋಗ್ರಾಫರ್ ಮಹೇಂದ್ರ ಸಿಂಹ ಅವರೊಟ್ಟಿಗೆ ಹೋಗಿದ್ದೆ. ಅಲ್ಲಿ ಪುನೀತ್ ರಾಜ್‌ಕುಮಾರ್‌ ಅವರೊಟ್ಟಿಗೆ ಫೋಟೋ ತೆಗೆದುಕೊಂಡು ಮೊದಲ ಸಲ ಮಾತನಾಡಿಸಿದ್ದು ಎಂದು ಡಾಲಿ ಹಳೆ ನೆನಪು ಹಂಚಿಕೊಂಡಿದ್ದಾರೆ. 

ಮಾಳವಿಕಾ ಫೋನ್‌ ರಿಂಗ್‌ ಆದ್ರೂ ನಾನು ಮುಟ್ಟಲ್ಲ, ಮದ್ವೆ ಆದ್ಮೇಲೆ ಸ್ಪೇಸ್‌ ಬೇಕು: ನಟ ಅವಿನಾಶ್

'ಯುವರತ್ನ ಸಿನಿಮಾ ರಿಲೀಸ್‌ ಸಮಯದಲ್ಲಿ ನಡೆದ ರ್ಯಾಲಿಯಲ್ಲಿ ಅಪ್ಪು ಸರ್‌ ಜೊತೆ ಭಾಗಿಯಾಗಿದ್ದೆ. ಇಡೀ ಕರ್ನಾಟಕ ಅವರೊಟ್ಟಿಗೆ ಒಂದು ರೌಂಡ್‌ ಹೋಗಿ ಬಂದಿದ್ದೀನಿ. ನೆನಪುಗಳೇ ಅದ್ಭುತವಾದ ಕಲೆಕ್ಷನ್. ಹಾಸಿಗೆ ಹಿಡಿದಾಗಲೂ ನೆನಪು ಬರುವುದು ಆ ಅಮೂಲ್ಯ ಕ್ಷಣಗಳು ಅಷ್ಟೇ. ನೆನಪುಗಳೇ ದೊಡ್ಡ ಸಂಪಾದನೆ. ಇರೋದು ಒಂದು ಜೀವನ ಅದನ್ನು ಚೆನ್ನಾಗಿ ಖರ್ಚು ಮಾಡಿ ಒಳ್ಳೆ ನೆನಪುಗಳನ್ನು ಸಂಪಾದನೆ ಮಾಡಬೇಕು' ಎಂದು ಧನಂಜಯ್ ಹೇಳಿದ್ದಾರೆ. ಈಗಲೂ ಧನಂಜಯ್ ಶಿವರಾಜ್‌ಕುಮಾರ್‌ ಅವರನ್ನು ಅಣ್ಣ ಅಣ್ಣ ಎಂದು ಮಾತನಾಡಿಸುತ್ತಾರೆ. ಅಂದು ಅಣ್ಣ ಕೊಟ್ಟ ಅವಕಾಶ ಮತ್ತು ಸ್ಪೂರ್ತಿ ನಮ್ಮನ್ನು ಇಲ್ಲಿವರೆಗೂ ಬೆಳೆಸಿಕೊಂಡು ಬಂದಿದೆ ಎಂದಿದ್ದಾರೆ. 

ಅಪ್ಪು ಅಗಲಿದಾಗ 2 ದಿನ ನಿದ್ರೆ ಮಾಡಿಲ್ಲ, ಯಜಮಾನ್ರು ಊಟ ಬಿಟ್ಟಿದ್ದರು; ಯಶ್ ತಾಯಿ ಪುಷ್ಪ ಭಾವುಕ