ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಸೇರಿದಂತೆ 17 ಆರೋಪಿಗಳು ಸೆಷೆನ್ಸ್ ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ. ದರ್ಶನ್ ಆರ್.ಆರ್. ನಗರದ ಬಂಗಲೆಗೆ ವಾಪಸ್ಸಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಜ್ಯೋತಿಷಿಗಳ ಸಲಹೆಯಂತೆ ದೂರವಿದ್ದರೂ, ಮತ್ತೆ ಆಗಮಿಸಿರುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಇದೇ ಮನೆಯಿಂದ ದರ್ಶನ್ ಬಂಧನವಾಗಿತ್ತು.
ವರದಿ: ಅಮಿತ್ ದೇಸಾಯಿ, ಏಷ್ಯಾನೆಟ್ ಸುವರ್ಣನ್ಯೂಸ್
ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರೋ ದರ್ಶನ್ ಸಹಿತ 17 ಆರೋಪಿಗಳು ಇವತ್ತು ಸೆಷೆನ್ಸ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಎಪ್ರಿಲ್ 8ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಅಚ್ಚರಿ ಅಂದ್ರೆ ದರ್ಶನ್ ಆರ್.ಆರ್. ನಗರ ಬಂಗಲೆಗೆ ಶಿಫ್ಟ್ ಆಗಿದ್ದು ಅಲ್ಲಿಂದಲೇ ಕೋರ್ಟ್‌ಗೆ ಹೋಗಿದ್ದಾರೆ. ಇಷ್ಟು ದಿನ ಪತ್ನಿ ಮನೆಯಲ್ಲಿದ್ದ ದರ್ಶನ್ ಮತ್ತೆ ಆರ್.ಆರ್. ನಗರ ಮನೆಗೆ ಮರಳಿರೋದು ಹಲವು ಅನುಮಾನಗಳನ್ನ ಹುಟ್ಟಿಹಾಕಿದೆ. ದಾಸನ ಆರ್.ಆರ್ ನಗರ ಗೃಹಪ್ರವೇಶದ ಹಿಂದಿನ ಅಸಲಿ ರಹಸ್ಯ ಇಲ್ಲಿದೆ.
6 ತಿಂಗಳ ಬಳಿಕ RRನಗರ ಬಂಗಲೆಯಲ್ಲಿ ದರ್ಶನ್:
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ ದರ್ಶನ್, ಬೇಲ್ ಪಡೆದು ಆಚೆ ಬಂದ ಮೇಲೂ ಆರ್. ಆರ್ ನಗರ ಮನೆಗೆ ಬಂದಿರಲಿಲ್ಲ. ಒಂದೂವರೇ ತಿಂಗಳು ಆಸ್ಪತ್ರೆಯಲ್ಲಿ ದಿನ ಕಳೆದ ದಾಸ ಆ ನಂತರ ಹೋಗಿದ್ದು ಪತ್ನಿ ನೆಲೆಸಿರೋ ಹೊಸಕೆರೆಹಳ್ಳಿಯ ಆಪಾರ್ಟ್ಮೆಂಟ್ಗೆ.
ಮೈಸೂರಿನ ಫಾರ್ಮ್ ಹೌಸ್ ಗೆ ಹೋದರೂ ಆರ್. ಆರ್. ನಗರ ಮನೆ ಬಳಿ ಮಾತ್ರ ದರ್ಶನ್ ಬಂದಿರಲಿಲ್ಲ. ಆದ್ರೆ ಅಚ್ಚರಿ ಅಂದ್ರೆ ಇವತ್ತು ದರ್ಶನ್ ಈ ಆರ್ ಆರ್ ನಗರದ ತೂಗುದೀಪ ನಿವಾಸದಲ್ಲಿ ದರ್ಶನ ಕೊಟ್ಟಿದ್ದಾರೆ. ಮನೆ ಮುಂದೆ ದರ್ಶನ್ ಕಾರ್ ನಿಂತಿರೋದು ಕಂಡು ಅನೇಕ ಅಭಿಮಾನಿಗಳು ಕುತೂಹಲದಿಂದ ಮನೆ ಮುಂದೆ ಸೇರಿದ್ದಾರೆ. ಮನೆಯಿಂದ ಹೊರಬಂದು ಕಾರ್ ಏರಿದ ದಾಸ, ಅದಕ್ಕೂ ಮುನ್ನ ಅಭಿಮಾನಿಗಳ ಕೈ ಕುಲುಕಿದ್ದಾರೆ. ಅಚಾನಕ್ ಆಗಿ ದಾಸ ಆರ್.ಆರ್ ನಗರದಲ್ಲಿ ದರ್ಶನ ಕೊಟ್ಟಿದ್ದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಪವಿತ್ರಾ ಗೌಡ ರೆಡಿಯಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!
RRನಗರದ ಮನೆಗೆ ಹೋಗದಂತೆ ಎಚ್ಚರಿಸಿದ್ರಾ ಜ್ಯೋತಿಷಿಗಳು?
ದರ್ಶನ್ ಅರೆಸ್ಟ್ ಆಗಿ ಬೇಲ್ ಗಾಗಿ ಪರದಾಡ್ತಾ ಇದ್ದ ವೇಳೆ, ದರ್ಶನ್ ಪತ್ನಿ ಅನೇಕ ಜ್ಯೋತಿಷಿಗಳ ಮನೆ ಬಾಗಿಲಿಗೂ ಅಲೆದಾಡಿದ್ರು, ಆಗ ಕೆಲ ಜ್ಯೋತಿಷಿಗಳು ದಾಸ ವಾಸ ಮಾಡ್ತಾ ಇರೋ ಆರ್.ಆರ್ ನಗರ ಬಂಗಲೆಯ ವಾಸ್ತು ಸರಿಯಿಲ್ಲ. ಅದೇ ಕಾರಣಕ್ಕೆ ಅವರು ಪದೇ ಪದೇ ವಿವಾದಕ್ಕೆ ಸಿಲುಕ್ತಾ ಇದ್ದಾರೆ. ಹೀಗಾಗಿ ಬೇಲ್ ಮೇಲೆ ಆಚೆ ಬಂದ ಮೇಲೂ ಅವರನ್ನ ಆ ಮನೆಗೆ ಕಳುಹಿಸಿಬೇಡಿ ಎಂದು ವಿಜಯಲಕ್ಷ್ಮೀಗೆ ಎಚ್ಚರಿಕೆ ಕೊಟ್ಟಿದ್ದರಂತೆ. ಅಂತೆಯೇ ವಿಜಯಲಕ್ಷ್ಮೀ ತಾವು ಮಗನ ಜೊತೆ ನೆಲೆಸಿರೋ ಅಪಾರ್ಟ್ಮೆಂಟ್ ನಲ್ಲೇ ದರ್ಶನ್‌ನನ್ನು ಇರಿಸಿಕೊಂಡಿದ್ದರು.
ಆದ್ರೆ ಈಗ ಅಚಾನಕ್ ಆಗಿ ದರ್ಶನ್ ಮತ್ತೆ ಆರ್ ಆರ್ ನಗರ ಮನೆಗೆ ಬಂದಿದ್ದು ವಾಸ್ತುದೋಷ ಮುಕ್ತಾಯವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಅಥವಾ ಪತ್ನಿ ಜೊತೆಗೆ ಮತ್ತೆ ಕಿರಿಕ್ ಮಾಡಿಕೊಂಡು ದರ್ಶನ್ ಇಲ್ಲಿಗೆ ವಾಪಾಸ್ ಬಂದ್ರಾ ಎಂಬ ಅನುಮಾನವೂ ಕಾಡ್ತಾ ಇದೆ.
ಅಯ್ಯೋ ದೇವ್ರೆ.....ವಿಜಯಲಕ್ಷ್ಮಿ ಧರಿಸಿರುವ ಈ ಸೀರೆ ಬೆಲೆಗೆ ಒಂದು ಮನೆ ಲೀಸ್‌ಗೆ ಹಾಕೋಬೋದಿತ್ತು ನೋಡಿ!
ಪ್ರೀತಿಯಿಂದ ಕಟ್ಟಿದ ಮನೆಯಲ್ಲಿ ನೆಲೆಸಲೇ ಇಲ್ಲ ನೆಮ್ಮದಿ!:
ಆರ್. ಆರ್ ನಗರದಲ್ಲಿ ತುಂಬಾನೇ ಇಷ್ಟಪಟ್ಟು ಈ ಮನೆಯನ್ನ ಕಟ್ಟಿಸಿದ್ರು ನಟ ದರ್ಶನ್. ಸ್ಟಾರ್ ಆದ ಮೇಲೆ ತನಗೆ ಅಂತ ಕಟ್ಟಿಕೊಂಡ ಐಷಾರಾಮಿ ಬಂಗಲೆ ಇದು. ಅರಮನೆಯಂತಹಃ ಈ ಮನೆಯಲ್ಲಿ ತನ್ನ ಇಷ್ಟದ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ನಿಲ್ಲಿಸಿ ದರ್ಶನ್ ರಾಜನಂಂತೆ ಮೆರಿತಿದ್ರು.
ಆದ್ರೆ ಈ ಮನೆ ಕಟ್ಟಿಸಿದ ಮೇಲೆ ಬಹಳ ಕಾಲ ದರ್ಶನ್ ಬದುಕಿನಲ್ಲಿ ನೆಮ್ಮದಿ ನೆಲೆಸಲಿಲ್ಲ. ವಿಜಯಲಕ್ಷ್ಮೀ ಜೊತೆ ಕಿತ್ತಾಡಿಕೊಂಡು ಹಲ್ಲೆ ಮಾಡಿ ಜೈಲು ಸೇರಿದ್ರು. ದರ್ಶನ್ ಮೊದಲ ಬಾರಿ ಅರೆಸ್ಟ್ ಆಗಿದ್ದು ಕೂಡ ಇದೇ ಮನೆಯಿಂದ. ವಿಜಯಲಕ್ಷ್ಮೀ ಕೇಸ್ ವಾಪಾಸ್ ಪಡೆದ ಮೇಲೆ ದರ್ಶನ್ ವಾಪಾಸ್ ಇದೇ ಮನೆಯಲ್ಲಿ ನೆಲೆಸಿದ್ರು. ಆದ್ರೆ ಇಬ್ಬರ ನಡುವಿನ ದಾಂಪತ್ಯ ಸರಿಹೋಗಲೇ ಇಲ್ಲ. ಬಳಿಕ ವಿಜಯಲಕ್ಷ್ನೀ ಹೊಸಕೆರೆಹಳ್ಳಿಯಲ್ಲಿ ಅಪಾರ್ಟ್ಮೆಂಟ್ ವೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡತೊಡಗಿದ್ರು.
ಇನ್ನೂ ಈ ಮನೆಯನ್ನ ಕಟ್ಟಿರೋದು ರಾಜಕಾಲುವೆ ಜಾಗದ ಮೇಲೆ ಅನ್ನೋ ಆರೋಪ ಇದೆ. ಈ ಬಗ್ಗೆ ಕೇಸ್ ಕೂಡ ನಡೆಯುತ್ತಿದೆ. ಈ ನಡುವೆ ಈ ಮನೆಯ ವಾಸ್ತು ಸರಿಯಿಲ್ಲ. ಈ ಮನೆಯಲ್ಲಿ ನೆಲೆಸುವವರಿಗೆ ಸಮಸ್ಯೆ ತಪ್ಪಲ್ಲ ಅಂತ ಅನೇಕರು ಎಚ್ಚರಿಸಿದ್ರಂತೆ. ಆದ್ರೆ ಅದಕ್ಕೆ ತಲೆಕೆಡಿಸಿಕೊಳ್ಳದ ದರ್ಶನ್ ಇದೇ ಮನೆಯಲ್ಲಿ ವಾಸ ಮಾಡ್ತಾ ಇದ್ರು. ಈ ನಡುವೆ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಮನೆಯೊಡೆಯ ಜೈಲು ಸೇರಿದ. ಈ ಮನೆ ಕೂಡ ದೂಳು ತಿಂತಾ ಕುಳಿತಿತ್ತು.
ಇದೀಗ ಮತ್ತೆ ಒಡೆಯ ಮನೆಗೆ ಮರಳಿದ್ದಾನೆ. ಮನೆಯ ದೋಷ ಪರಿಹಾರವಾಯ್ತಾ? ಗೊತ್ತಿಲ್ಲ. ಆದ್ರೆ ದಾಸನಿಗೆ ಅಂಟಿರೋ ದೋಷಗಳಂತೂ ಇನ್ನೂ ಪರಿಹಾರ ಆಗಿಲ್ಲ. ಕೋರ್ಟ್ ಕಟಕಟೆಯಲ್ಲಿ ದಾಸ ನಿಲ್ಲೋದು ತಪ್ಪಿಲ್ಲ!
