ಉಪೇಂದ್ರ ತಲೆಗೆ 'ಉಲ್ಟಾ ಐಡಿಯಾ' ಬಂದಿದೆ, ಆ ಸಿನಿಮಾ 'ದಡ್ಡರಿಗಾಗಿ ಮಾತ್ರ' ಇರಬಹುದೇ?

ಉಪೇಂದ್ರ ನಟನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಯುಐ ಸಿನಿಮಾ ಜಗತ್ತಿನಾದ್ಯಂತ 2200ಕ್ಕೂ ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡು ಬಹಳಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಾಮಾಜಿಕ ಕಳಕಳಿ ಮೆರೆದಿರುವ ಯುಐ ಸಿನಿಮಾ, ಸದ್ಯ ಟ್ರೆಂಡ್ ಸೆಟ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ...

Sandalwood Real Star Upendra talks about the different movie to come

'ನನಗೊಂದು ಆಸೆ ಇದೆ, ಅದೇನೆಂದ್ರೆ ಒಂದು ಸಿನಿಮಾ ಕಥೆನಾ ಫುಲ್ ಜನಕ್ಕೆ ಹೇಳ್ಬಿಡ್ಬೇಕು.. ಲೈವ್‌ ನಲ್ಲಿ ಇಡೀ ಸಿನಿಮಾ ಕಥೆನಾ ಹೇಳಿ, ಆಮೇಲೆ ಅದನ್ನು ಸಿನಿಮಾ ಮಾಡ್ಬೇಕು ಅಂತ.. ಚೆನ್ನಾಗಿ ಇರುತ್ತೆ ಅಲ್ವಾ? ನಾವು ಪ್ರೊಡ್ಯೂಸರ್‌ಗೆ ಹೇಗೆ ಫುಲ್ ಕಥೆ ಹೇಳ್ತಿವೋ ಹಾಗೆ ಕಥೆ ಹೇಳ್ಬಿಟ್ಟು.. ಎಂದಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಅಗ ಪತ್ರಕರ್ತರೊಬ್ಬರು 'ಹಾಗೆ ಮೊದಲೇ ಹೇಳಿದ್ರೆ ಸಿನಿಮಾ ನೋಡೋಕೆ ಕ್ಯೂರಿಯಾಸಿಟಿ ಇರಲ್ಲ' ಎಂದಿದ್ದಾರೆ. ಆದರೆ, ಅದಕ್ಕೂ ಕೂಡ ಉಪ್ಪಿ (Real Star Upendra) ಬಳಿ ಉತ್ತರವಿದೆ. ಅವರು ಅದೇನು ಹೇಳಿದ್ದಾರೆ ಗೊತ್ತಾ?

'ಇಲ್ಲ ಕಥೆ ಪೂರ್ತಿ ಹೇಳಿ, ಸಿನಿಮಾ ನೋಡಿ ಅಂದಾಗ್ಲೂ ಕೂಡ ಕ್ಯೂರಿಯಾಸಿಟಿ ಇದ್ದೇ ಇರುತ್ತೆ.. ಯಾಕೆ ಅಂದ್ರೆ, ಇವ್ರು ಹೇಳಿದ ಕಥೆನೇ ಸಿನಿಮಾ ಮಾಡಿದಾರೋ ಅಥವಾ ಏನಾದ್ರೂ ಚೇಂಜ್ ಮಾಡಿದಾರಾ ಅಂತ' ಎಂದಿದ್ದಾರೆ ಉಪೇಂದ್ರ. ಉಪೇಂದ್ರ ಅವರು ಪ್ರೆಸ್‌ಮೀಟ್‌ನಲ್ಲಿ ಹೇಳಿರುವ ಈ ಮಾತಿನ ತುಣುಕು ಇದೀಗ ಶಾಟ್ಸ್‌ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಬಹಳಷ್ಟು ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. 

ಜೀನಿಯಸ್ ಡೈರೆಕ್ಟರ್ ಉಪೇಂದ್ರ ಹೇಳಿರೋ ಈ ಮಾತನ್ನು ಯಾರೂ ಮರೆಯಬೇಡಿ!

ಕೆಲವರಂತೂ 'ಉಪ್ಪಿ ಅವರು ಮಾಸ್ಟರ್ ಪೀಸ್' ಎಂದಿದ್ದಾರೆ. ಇನ್ನೂ ಕೆಲವರು 'ನಿಮ್ಮ ಕೈನಲ್ಲಿ ಬಿಟ್ರೆ ಇನ್ಯಾರ ಕೈನಲ್ಲೂ ಆಗಲ್ಲ ಸರ್' ಎಂದಿದ್ದಾರೆ. ಇನ್ನು ಹಲವರು 'ಅದಕ್ಕೆಲ್ಲಾ ನಿಮ್ಮನ್ನು ಬಿಟ್ರೆ ಇನ್ಯಾರಿಗೂ ಧೈರ್ಯ ಇಲ್ಲ ಸರ್..' ಎಂದಿದ್ದಾರೆ. ಕೆಲವರಂತೂ 'ನೀವು ಹೇಳಿದ್ದೀರಾ ಅಂದ್ರೆ ಮಾಡ್ತೀರಾ ಬಿಡಿ ಸರ್' ಎಂದಿದ್ದಾರೆ. ಒಟ್ಟಿನಲ್ಲಿ ನಟ-ನಿರ್ದೇಶಕ ಉಪೇಂದ್ರ ಅವರು ಹೊಸಹೊಸ ಸಾಹಸಕ್ಕೆ ಅಣಿಯಾಗುತ್ತಲೇ ಇರುತ್ತಾರೆ.

ಮುಂದಿನ ದಿನಗಳಲ್ಲಿ ಕಥೆ ಮೊದಲೇ ಹೇಳಿ, ಅದರಲ್ಲೇನೋ ಚೇಂಜ್ ಮಾಡಿ ಸಿನಿಮಾ ಮಾಡುವ ಐಡಿಯಾ ಇದೆ ಉಪೇಂದ್ರ ಅವರಿಗೆ ಎಂದ ಹಾಗಾಯ್ತು! ಆದಷ್ಟು ಬೇಗ ಆ ಸಿನಿಮಾ ತೆರೆಯ ಮೇಲೆ ಬರಲಿ ಎನ್ನುತ್ತಿದ್ದಾರೆ ಉಪ್ಪಿ ಅಭಿಮಾನಿಗಳು ಹಾಗು ಸಮಸ್ತ ಕನ್ನಡಿಗರು. ಅಂದಹಾಗೆ, ಇನ್ನು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿದ್ದಾರೆ. ಉಪ್ಪಿ ನಟನೆ-ನಿರ್ದೇಶನದ 'ಯುಐ' ಸಿನಿಮಾ ತನ್ನ ವಿಭಿನ್ನತೆಯಿಂದ ಜನಮನ ಸೂರೆಗೊಂಡಿದ್ದು ಈಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ವಿಭಿನ್ನ ಪ್ರೆಸೆಂಟೇಶನ್ ಕೊಟ್ಟು 'UI'ನಲ್ಲಿ ಗೆದ್ದ ಗ್ರೇಟ್ ಡೈರೆಕ್ಟರ್ ಉಪೇಂದ್ರ!

ತುಂಬಾ ವರ್ಷಗಳ ಬಳಿಕ ಉಪೇಂದ್ರ ನಟನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಯುಐ ಸಿನಿಮಾ ಜಗತ್ತಿನಾದ್ಯಂತ 2200ಕ್ಕೂ ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡು ಬಹಳಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಾಮಾಜಿಕ ಕಳಕಳಿ ಮೆರೆದಿರುವ ಯುಐ ಸಿನಿಮಾ, ಸದ್ಯ ಟ್ರೆಂಡ್ ಸೆಟ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. 

Latest Videos
Follow Us:
Download App:
  • android
  • ios