ವಿಭಿನ್ನ ಪ್ರೆಸೆಂಟೇಶನ್ ಕೊಟ್ಟು 'UI'ನಲ್ಲಿ ಗೆದ್ದ ಗ್ರೇಟ್ ಡೈರೆಕ್ಟರ್ ಉಪೇಂದ್ರ!

ಉಪೇಂದ್ರ ಅವರು ಕನ್ನಡದ ಗ್ರೇಟ್ ಡೈರೆಕ್ಟರ್. ಅವರ ನಿರ್ದೇಶನದ ಓಂ, ಎ, ಉಪೇಂದ್ರ ಹಾಗೂ ಶ್ ಚಿತ್ರಗಳೇ ಅದಕ್ಕೆ ಬೇಕಾದಷ್ಟು ಸಾಕ್ಷಿ ಒದಗಿಸುತ್ತವೆ. ಜೊತೆಗೆ, ಹೆಚ್‌ಟುಓ, ಹಾಲಿವುಡ್ ಹಾಗೂ ಉಪ್ಪಿ 2 ಸಿನಿಮಾಗಳು ಕೂಡ ಸಾಕಷ್ಟು ವಿಭಿನ್ನ ಪ್ರಯತ್ನ ಹಾಗೂ ಹೊಸತನ ಹೊಂದಿದ ಸಿನಿಮಾ ಎಂದು ಜನಮೆಚ್ಚುಗೆ ಪಡೆದಿವೆ...

What happend to Real star Upendra UI movie collection in box office srb

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಟನೆ (Real Star Upendra) ಹಾಗೂ ನಿರ್ದೇಶನದ ಯುಐ (UI) ಸಿನಿಮಾ ಹಿಟ್ ಆಗಿದೆ. ಈ ಸಿನಿಮಾವನ್ನು ಬಹಳಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಕೆಲವರು ಮಾತ್ರ ಅರ್ಥವೇ ಆಗಿಲ್ಲ, ಮತ್ತೊಮ್ಮೆ ನೋಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಓವರ್‌ಆಲ್‌ ಆಗಿ 'ಯುಐ'  ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಚೆನ್ನಾಗಿಯೇ ಇದೆ. ಸಿನಿಮಾ ಗಳಿಕೆ ಬಗ್ಗೆ 'ಯುಐ' ನಿರ್ಮಾಪಕರು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಹೀಗಾಗಿ ಯುಐ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ನಿಖರವಾಗಿ ಮಾತನಾಡೋದು ಸದ್ಯಕ್ಕೆ ಕಷ್ಟ. 

ಹೊಸತನದ ಕಥೆ, ಚಿತ್ರಕತೆ ಹೊತ್ತು ತೆರೆಗೆ ಬಂದಿರುವ ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಯುಐ ಸಿನಿಮಾ, ಇದೀಗ ಸಾಕಷ್ಟು ಕ್ರೇಜ್ ಸೃಷ್ಟಿಸಿದೆ. ಹಲವರು ಇಂಥ ಸಿನಿಮಾ ಕನ್ನಡದಲ್ಲಿ ಈ ಮೊದಲು ಬಂದಿರಲೇ ಇಲ್ಲ ಎನ್ನುತ್ತಿದ್ದಾರೆ. ಸಾಮಾಜಿಕ ಕಳಕಳಿ ಜೊತೆಗೆ, ಈ ಚಿತ್ರದಲ್ಲಿ ಜಗತ್ತಿನಲ್ಲಿ ಅನುಸರಿಸಲಾಗುತ್ತಿರುವ ಅನೇಕ ಕೆಟ್ಟ ಪದ್ಧತಿಗಳ ವಿರುದ್ಧ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾವನ್ನು ಕೇವಲ ಮನರಂಜನೆ ದೃಷ್ಟಿಯಿಂದ ನೋಡದೇ, ಸಮಾಜ ಸುಧಾರಣೆ ದೃಷ್ಟಿಯಿಂದ ನೋಡಿದರೆ, ಇದೊಂದು ಅತ್ಯುತ್ತಮ ಚಿತ್ರ ಎಂಬುದು ಅರಿವಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಇದೊಂದು ಮಾಸ್ಟರ್ ಫೀಸ್ ಎನ್ನಬಹುದು.

ಬಡತನ ಪುರುಷನನ್ನು ಬೆತ್ತಲೆ ಮಾಡಿದರೆ ಹಣ ಮಹಿಳೆಯನ್ನು....; ಅರ್ಥವಾಯ್ತಾ?

ಯುಐ ಸಿನಿಮಾ ಗಳಿಕೆ ಕನ್ನಡದಲ್ಲಿ ಉತ್ತಮವಾಗಿಯೇ ಇದೆ. ಮೊದಲ ವಾರದಲ್ಲಿಯೇ 10 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಈ ಸಿನಿಮಾ. ಆದರೆ, ಸಿನಿಮಾ ಬಜೆಟ್ ಜಾಸ್ತಿ ಇರುವ ಕಾರಣಕ್ಕೆ ಬಿಡಗಡೆಯಾದ ಎಲ್ಲಾ ಭಾಷೆಗಳಲ್ಲೂ ಅದು ಹಿಟ್ ಆಗಬೇಕಾಗಿದ್ದು ಅನಿವಾರ್ಯ ಎನ್ನಬಹುದು. ಆದರೆ, ಕನ್ನಡ ಸೇರಿದಂತೆ ನೆರೆಯ ಆಂಧ್ರದಲ್ಲಿ ಕೂಡ ನಟ-ನಿರ್ದೇಶಕ ಉಪೇಂದ್ರ ಅವರ ಹವಾ ಕೆಲಸ ಮಾಡಿದೆ. ಕಲೆಕ್ಷನ್ ದಿನದಿನಕ್ಕೂ ಹೆಚ್ಚು ಸುಧಾರಣೆ ಕಾಣುತ್ತಿದೆ ಎನ್ನಲಾಗಿದೆ. 

ಉಪೇಂದ್ರ ಅವರು ಕನ್ನಡದ ಗ್ರೇಟ್ ಡೈರೆಕ್ಟರ್ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮೊದಲು ಅವರು ಕೊಟ್ಟಿರುವ ಓಂ, ಎ, ಉಪೇಂದ್ರ ಹಾಗೂ ಶ್ ಚಿತ್ರಗಳೇ ಅದಕ್ಕೆ ಬೇಕಾದಷ್ಟು ಸಾಕ್ಷಿ ಒದಗಿಸುತ್ತವೆ. ಜೊತೆಗೆ, ಹೆಚ್‌ಟುಓ, ಹಾಲಿವುಡ್ ಹಾಗೂ ಉಪ್ಪಿ 2 ಸಿನಿಮಾಗಳು ಕೂಡ ಸಾಕಷ್ಟು ವಿಭಿನ್ನ ಪ್ರಯತ್ನ ಹಾಗೂ ಹೊಸತನ ಹೊಂದಿದ ಸಿನಿಮಾ ಎಂದು ಜನಮೆಚ್ಚುಗೆ ಪಡೆದಿವೆ. ಈ ಕಾರಣಕ್ಕೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾವನ್ನುನೋಡಲು ಇಡೀ ಇಂಡಿಯಾದ ಸಿನಿಪ್ರಿಯರು ಕಾಯುತ್ತಾರೆ.

ಅಪ್ಪನ ಮೇಲಿರೋ ಪ್ರೀತಿ ತಡೆಯೋಕಾಗ್ದೇ ಸ್ವಲ್ಪ ಜಾಸ್ತಿನೇ ಮಾತಾಡ್ಬಿಟ್ರಾ ಆಯುಷ್?

ಬಜೆಟ್ ಹಾಗೂ ಗಳಿಕೆ ಬಗ್ಗೆ ನಿರ್ಮಾಪಕರು ಬಾಯಿ ಬಿಡುವ ತನಕ ಯಾವುದೇ ಮಾಹಿತಿಯನ್ನು 'ಸತ್ಯ ಸಂಗತಿ' ಎನ್ನುವಂತಿಲ್ಲ. ಯುಐ ಸಿನಿಮಾ ಗಳಿಕೆ ದಿನದಿನಕ್ಕೂ ಏರಿಕೆ ಕಾಣುತ್ತಿದ್ದು ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. ಇನ್ನೂ ಬಹಳಷ್ಟು ಥಿಯೇಟರ್‌ಗಳಲ್ಲಿ ಯುಐ ಚಿತ್ರ ಅಬ್ಬರಿಸುತ್ತಿದ್ದು, ಈ ಚಿತ್ರವನ್ನು ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಲು ಮುಗಿಬೀಳುತ್ತಿದ್ದಾರೆ. ಕಾರಣ, ಮತ್ತೆ ಮತ್ತೆ ನೋಡಿದಾಗಲೂ ಇದು ಹೊಸ ಹೊಸ ಸಂಗತಿಗಳನ್ನು ಮನದಟ್ಟು ಮಾಡುವಂತಿದೆ. 

'ಸಾಮಾಜಿಕ ಕಳಕಳಿ ಹೊಂದಿರುವ ಉಪೇಂದ್ರ ಅವರು ತಮ್ಮ ಸಿನಿಮಾದ ಸಬ್ಜೆಕ್ಟ್‌ ಆಯ್ಕೆಯನ್ನು ಸರಿಯಾಗಿ ಮಾಡಿಕೊಂಡಿದ್ದಾರೆ. ವಿಭಿನ್ನ ಚಿತ್ರಕಥೆ ರೂಪದಲ್ಲಿ ಪ್ರೇಕ್ಷಕರಿಗೆ ಅದನ್ನು ತೋರಿಸಲು ಹೋಗಿ, ಅಲ್ಲಿ ಯಶಸ್ವಿಯೂ ಆಗಿದ್ದಾರೆ. ನಟ-ನಿರ್ದೇಶಕ ಉಪೇಂದ್ರ ಅವರು ಪ್ರೇಕ್ಷಕರ ನಿರೀಕ್ಷೆಯನ್ನು ನಿಜ ಮಾಡುವಲ್ಲಿ ಸಫಲರಾಗಿದ್ದಾರೆ. ದಿನದಿನಕ್ಕೂ ಯುಐ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದು, ಬುದ್ಧಿವಂತರು ಮಾತ್ರವಲ್ಲ, ಎಲ್ಲರೂ ನೋಡತೊಡಗಿದ್ದಾರೆ. ಒಟ್ಟಿನಲ್ಲಿ, ಯುಐ ಚಿತ್ರದ ಕಮಾಲ್ ಮುಂದುವರಿದಿದೆ. 

'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!

Latest Videos
Follow Us:
Download App:
  • android
  • ios