ಜೀನಿಯಸ್ ಡೈರೆಕ್ಟರ್ ಉಪೇಂದ್ರ ಹೇಳಿರೋ ಈ ಮಾತನ್ನು ಯಾರೂ ಮರೆಯಬೇಡಿ!

ಯಾರ್ ತರ ಆಗ್ಬೇಕು ಅಂತ ಇದ್ದೀಯಾ ನೀನು? ಒಬ್ಬ ಚಿಕ್ಕ ಹುಡುಗನಿಗೆ ಕೇಳ್ತಾರೆ, ಅದಕ್ಕೆ ಆ ಒಬ್ಬ ಹುಡುಗ, ನಾನು ರಾಜ್‌ಕುಮಾರ್ ತರ ಆಗ್ಬೇಕು ಅಂತ ಇದೀನಿ... ಅಂತಾನೆ.  ಇನ್ನೊಬ್ಬ ಹುಡುಗ, 'ನಾನು ಸುಭಾಶ್ಚಂದ್ರ ಭೋಸ್ ತರ ಆಗ್ಬೇಕು ಅಂತ ಇದೀನಿ .. ಅಂತಾನೆ. ಆಗ ಅಲ್ಲಿದ್ದ ಮಹನೀಯರು..

Sandalwood real star upendra talks about society and present parenting srb

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಮಕ್ಕಳನ್ನು ನಾವು ಹೇಗೆ ಬೆಳೆಸಬೇಕು ಎಂಬ ಬಗ್ಗೆ ಮಾತನ್ನಾಡಿದ್ದಾರೆ. ಉಪ್ಪಿ ಅವರ ಮಾತುಗಳನ್ನು ಕೇಳುತ್ತಿದ್ದರೆ, ಹೌದು ನಿಜವಾಗಿಯೂ ಪೋಷಕರು ಮಕ್ಕಳನ್ನು ಬೆಳೆಸುತ್ತಿರುವ ರೀತಿ ಸರಿಯಾಗಿ ಇದೆಯೇ ಎಂಬ ಬಗ್ಗೆ ಪ್ರಶ್ನೆ ಮೂಡುತ್ತದೆ. ನಮ್ಮ ಸುತ್ತಮುತ್ತಲೂ ಇರುವಜನರನ್ನು ನೋಡಿದಾಗ, ನಮ್ಮ ಇಂದಿನ ಸಮಾಜವನ್ನು ನೋಡಿದಾಗ, ಖಂಡಿತ ಈ ಪ್ರಶ್ನೆ ಮೂಡುವುದು ಸಹಜ ಎನ್ನಲೇಬೇಕು. 

ಈ ಬಗ್ಗೆ ಉಪೇಂದ್ರ ಅವರು 'ನಾನು ಒಂದು ಕಡೆ ಕೇಳಿರುವ ಸಂಗತಿ ಇದು.. ಒಬ್ಬರು, ಯಾರ್ ತರ ಆಗ್ಬೇಕು ಅಂತ ಇದ್ದೀಯಾ ನೀನು? ಒಬ್ಬ ಚಿಕ್ಕ ಹುಡುಗನಿಗೆ ಕೇಳ್ತಾರೆ, ಅದಕ್ಕೆ ಆ ಒಬ್ಬ ಹುಡುಗ, ನಾನು ರಾಜ್‌ಕುಮಾರ್ ತರ ಆಗ್ಬೇಕು ಅಂತ ಇದೀನಿ... ಅಂತಾನೆ.  ಇನ್ನೊಬ್ಬ ಹುಡುಗ, 'ನಾನು ಸುಭಾಶ್ಚಂದ್ರ ಭೋಸ್ ತರ ಆಗ್ಬೇಕು ಅಂತ ಇದೀನಿ .. ಅಂತಾನೆ. ಆಗ ಅಲ್ಲಿದ್ದ ಮಹನೀಯರು ತುಂಬಾ ಚೆನ್ನಾಗಿ ಹೇಳಿದ್ರು, 'ದಯವಿಟ್ಟು ಈ ಮೈಂಡ್‌ಸೆಟ್‌ನಿಂದ ಹೊರಗೆ ಬನ್ನಿ.. ನೀವು ನೀವೇ ಆಗಿರಿ.. ಅಂದ್ರೆ ನೀವು ರಮೇಶ್ ಆಗಿದ್ರೆ ರಮೇಶ್ ಆಗಿರಿ, ಸುರೇಶ್ ಆಗಿದ್ರೆ ಸುರೇಶ್ ಆಗಿರಿ.. ನೀವು ಇಸ್ಮಾಯಿಲ್ ಆಗಿದ್ರೆ ಇಸ್ಮಾಯಿಲ್ ಆಗಿರಿ.. 

ವಿಭಿನ್ನ ಪ್ರೆಸೆಂಟೇಶನ್ ಕೊಟ್ಟು 'UI'ನಲ್ಲಿ ಗೆದ್ದ ಗ್ರೇಟ್ ಡೈರೆಕ್ಟರ್ ಉಪೇಂದ್ರ!

ಒಟ್ಟಿನಲ್ಲಿ ನೀವೇನು ಆಗಿದ್ದೀರೋ ಅದೇ ಆಗಿರಿ.. ನಮ್ಮನ್ನ ದೇವರು ಇಂಡಿವ್ಯೂಸವಲ್ ಆಗಿ ಸೃಷ್ಟಿ ಮಾಡಿದಾರೆ. ಏನೋ ಒಂದು ಅದ್ಭುತವಾಗಿ ಇಟ್ಟೇ ಸೃಷ್ಟಿ ಮಾಡಿದಾನೆ ದೇವ್ರು.. ಆದ್ರೆ ನಾವೆಲ್ಲಾ ಹೇಗೆ ಇದೀವಿ ಅಂದ್ರೆ, ಬೇರೆಯವ್ರನ್ನ ನೋಡಿ ಅವ್ರು ಹಾಗಿದಾರೆ, ಇವ್ರು ಹೀಗಿದಾರೆ, ನಾವು ಅವ್ರ ಥರ ಆಗ್ಬೇಕು, ಇವ್ರ ಥರ ಆಗ್ಬೇಕು ಅಂತ ಯೋಚ್ನೆ ಮಾಡ್ತೀವಿ.. ನಂಗೆ ನಿಜವಾಗ್ಲೂ ಗೊತ್ತಿಲ್ಲ, ಯಾಕೆ ನಾವು ಹಾಗೆ ಯೋಚ್ನೆ ಮಾಡ್ತೀವಿ ಅಂತ.. ಬಹುಶಃ ನಮ್ ಎಜ್ಯುಕೇಶನ್ ಸಿಸ್ಟಮ್ ಆ ತರ ಬಂದಿದ್ಯೋ, ಅಥವಾ ಅದೇ ನೇಚರ್ ಸ್ಪೆಷಾಲಿಟಿನೋ, ಏನೋ..! 

ನಾವು ನಮ್ಮ ಮಕ್ಕಳಿಗೆ ಯಾರನ್ನೋ ತೋರಿಸಿಬಿಟ್ಟು 'ನೋಡಿ, ಇವ್ರ ಥರ ಆಗ್ಭೆಕು' ಅಂತೀವಿ.. ಆ ಮಗು ಏನಕ್ಕೆ ಹುಟ್ಟಿದೆ ಅನ್ನೋ ಯೋಚ್ನೆ ನಮ್ಮಲ್ಲೇ ಇರಲ್ಲ.. ಆ ನಮ್ ಮಗೂನೇ ಗ್ರೇಟೆಸ್ಟ್ ವ್ಯಕ್ತಿ ಆಗಿ ಎಲ್ಲರಿಗೂ ಎಕ್ಸಾಂಪಲ್ ಆಗ್ಬಹುದು..' ಎಂದಿದ್ದಾರೆ ನಟ, ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ. ಹೌದು, ಇಂದಿನ ಸಮಾಜದಲ್ಲಿ ಎಲ್ಲ ಮಕ್ಕಳನ್ನು ಒಂದೇ ತರಹ ಪ್ಲಾಸ್ಟಿಕ್ ಡಬ್ಬದ ರೀತಿ ಆಗುವಂತೆ ಬೆಳೆಸುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ವಿಶೇಷ ಹಾಗೂ ವಿಭಿನ್ನ ಗುಣವಿಶೇಷಗಳು ಇರುತ್ತವೆ. ಆದರೆ, ಅದನ್ನು ನಾವು ಗಮನಿಸುವುದೇ ಇಲ್ಲ. 

'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!

ಅಂದಹಾಗೆ, ನಟ ಉಪೇಂದ್ರ ಅವರು ಸದ್ಯ ತಮ್ಮ ನಟನೆ-ನಿರ್ದೇಶನದ 'ಯುಐ' ಸಿನಿಮಾದ ಸಕ್ಸಸ್‌ ಮೂಡ್‌ನಲ್ಲಿದ್ದಾರೆ. ಡಿಸೆಂಬರ್ 20ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಯುಐ ಸಿನಿಮಾ ಹೊಸತನ ಹಾಗೂ ವಿಭಿನ್ನ ಕಂಟೆಂಟ್ ಸಿನಿಮಾ ಎನ್ನಿಸಿಕೊಂಡಿದೆ. ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಯುಐ ಸಿನಿಮಾ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ ಆಗುತ್ತಿದೆ. ತುಂಬಾ ವರ್ಷಗಳ ಕಾಲ ನಿರ್ದೇಶನದಿಂದ ದೂರವಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು, ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ, ಯುಐ ಜನಮನ ಗೆದ್ದಿದೆ.

Latest Videos
Follow Us:
Download App:
  • android
  • ios