ಪ್ರೇಕ್ಷಕರು ಥಿಯೇಟರ್‌ಗೆ ಬಾರದಿರುವ ಸೀಕ್ರೆಟ್ ರಿವೀಲ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ!

ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ನಟ ಉಪೇಂದ್ರ ಅವರು ಜನ ಥಿಯೇಟರ್‌ಗೆ ಬರೋದಿಲ್ಲ ಎಂದು ಜನರನ್ನು ದೂಷಣೆ ಮಾಡುವುದು ತಪ್ಪು ಎಂದಿದ್ದಾರೆ. 

Sandalwood Real Star Upendra talk about Mobile and Cinema audience Coincident srb

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಇಂದಿನ ಕಾಲಘಟ್ಟದ ತುಂಬಾ ಮುಖ್ಯವಾದ ವಿಷಯವೊಂದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇತ್ತೀಚೆಗೆ ಎಲ್ಲರೂ ಹೇಳುತ್ತಿರುವ ಒಂದು ಮಾತು ಎಂದರೆ, 'ಜನ ಥಿಯೇಟರ್‌ಗೆ ಬರ್ತಾ ಇಲ್ಲ' ಎಂಬ ದೋಷಾರೋಪ. ಈ ಬಗ್ಗೆ ನಟ ಉಪೇಂದ್ರ ಮಾರ್ಮಿಕವಾದ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ನಟ ಉಪೇಂದ್ರ ಅವರು ಜನ ಥಿಯೇಟರ್‌ಗೆ ಬರೋದಿಲ್ಲ ಎಂದು ಜನರನ್ನು ದೂಷಣೆ ಮಾಡುವುದು ತಪ್ಪು ಎಂದಿದ್ದಾರೆ. 

ಹಾಗಿದ್ದರೆ ಜನರು ಯಾಕೆ ಥಿಯೇಟರ್‌ ಕಡೆ ಮುಖ ಮಾಡುತ್ತಿಲ್ಲ? ಅದಕ್ಕೆ ಉಪ್ಪಿ ಹೇಳಿರುವ ಕಾರಣವೇನು? ನಟ ಉಪೇಂದ್ರ 'ಇತ್ತೀಚೆಗೆ ಜನರು ಅಥವಾ ಸಿನಿಪ್ರೇಕ್ಷಕರು ಥಿಯೇಟರ್‌ ಕಡೆ ಬರದಿರಲು ಮುಖ್ಯ ಕಾರಣ ಮೊಬೈಲ್. ಇಂದು ಸ್ಮಾಟ್‌ ಫೋನ್ ಎಲ್ಲರ ಬಳಿಯೂ ಇದೆ. ಅದರಲ್ಲೆ ಎಲ್ಲ ಥರದ ಮನರಂಜನೆ ಜೊತೆಗೆ ಓಟಿಟಿ ಸಿನಿಮಾಗಳನ್ನು ಕೂಡ ನೋಡಬಹುದು. ಬೇಕಾದಾಗ ನೋಡಬಹುದು. ಸ್ವಲ್ಪ ನೋಡಿ ಬ್ರೇಕ್ ಮಾಡಿ ಮತ್ತೆ ನೋಡಬಹುದು. ಅರ್ಧ ಸಿನಿಮಾ ಅಥವಾ ವೀಡಿಯೋ ನೋಡಿ ಇಷ್ಟವಾಗಿಲ್ಲ ಎಂದರೆ ಬಿಡಬಹುದು. 

ವಿಷ್ಣುವರ್ಧನ್-ಭಾರತಿ ಮೊದಲು ಭೇಟಿಯಾಗಿದ್ದು ಎಲ್ಲಿ; ಲವ್‌ ಆಗಿದ್ದು ಯಾವಾಗ?

ಆದರೆ, ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದು ಹಾಗಲ್ಲ. ಹಣ ಕೊಟ್ಟು ನಿರ್ಧಿಷ್ಟ ಸಮಯಕ್ಕೆ ಕಾಯಬೇಕು. ಮನೆಯಿಂದ ಅಷ್ಟು ಸಮಯ ಹೊರಗೆ ಇರಲು ಸಾಧ್ಯವಾಗಬೇಕು. ಹೀಗಾಗಿ ಜನರು ಸುಲಭ ಸಾಧ್ಯ ಎಂಬ ಕಾರಣಕ್ಕೆ ಎಲ್ಲವನ್ನೂ ಮೊಬೈಲ್‌ನಲ್ಲೇ ನೋಡುತ್ತಾರೆ. ಆದರೆ, ಸಿನಿಮಾ ಉದ್ಯಮ ಸಿನಿಪ್ರೇಕ್ಷಕರಿಗೆ ಮೊಬೈಲ್‌ನಲ್ಲಿ ಲಭ್ಯವಿರುವ ಕಂಟೆಂಟ್‌ಗಿಂತ ಚೆನ್ನಾಗಿರುವುದನ್ನು ಕೊಡಬೇಕು. ಅದು ಮೇಕಿಂಗ್ ಆಗಿರಬಹುದು, ಸ್ಟೋರಿಯೇ ಆಗಿರಬಹುದು. 

ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?

ಒಟ್ಟಿನಲ್ಲಿ, ಮೊಬೈಲ್‌ನಲ್ಲಿ ಸಿಗಲಾರದ್ದು ಸಿನಿಮಾ ಮೂಲಕ ಸಿಗುತ್ತದೆ ಎಂದರೆ ಸಿನಿಮಾ ಪ್ರಿಯರು ಖಂಡಿತವಾಗಿಯೂ ಸಿನಿಮಾ ನೋಡಲು ಥಿಯೇಟರ್‌ಗೆ ಬಂದೇ ಬರುತ್ತಾರೆ. ಥಿಯೇಟರ್‌ಗೆ ಜನರು ಬರುತ್ತಿಲ್ಲ ಎಂದು ಜನರನ್ನು ದೂಷಿಸುವುದು ಖಂಡಿತ ತಪ್ಪು. ಒಟಿಟಿ, ಮೊಬೈಲ್ ಕಂಟೆಂಟ್ ಮೀರಿದ ಸಿನಿಮಾ ಕೊಡುವುದು ಸಿನಿಮಾ ತಯಾರಕರ ಜವಾಬ್ದಾರಿ ಎಂಬುದನ್ನು ಅರಿತರೆ ಸಾಕು' ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 

ಲೈಫ್‌ನಲ್ಲಿ ಯಾವುದು ತುಂಬಾ ಮುಖ್ಯ ಎಂಬ ಸೀಕ್ರೆಟ್ ಹೇಳಿದ ಅಲ್ಲು ಅರ್ಜುನ್!

Latest Videos
Follow Us:
Download App:
  • android
  • ios