ವಿಷ್ಣುವರ್ಧನ್-ಭಾರತಿ ಮೊದಲು ಭೇಟಿಯಾಗಿದ್ದು ಎಲ್ಲಿ; ಲವ್‌ ಆಗಿದ್ದು ಯಾವಾಗ?

'ಮನೆ ಬೆಳಗಿದ ಸೊಸೆ' ಚಿತ್ರದ ಹೆಸರಿನಂತೆ ನಟಿ ಭಾರತಿ ಈ ಚಿತ್ರದ ನಂತರ ವಿಷ್ಣುವರ್ಧನ್ ಮನೆಯ ಸೊಸೆಯಾಗಿ ಮನೆ ಬೆಳಗಿದರು. ಬಳಿಕ, ವಿಷ್ಣುವರ್ಧನ್-ಭಾರತಿ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. 

Vishnuvardhan and Bharathi first meeting in Doorada Betta Movie Shooting srb

ಸ್ಯಾಂಡಲ್‌ವುಡ್ ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ (Vishnuvardhan) ಹಾಗೂ ನಟಿ ಭಾರತಿ ವಿಷ್ಣುವರ್ಧನ್ (Bharathi Vishnuvardhan)ರಿಯಲ್ ಲೈಫ್‌ನಲ್ಲಿ ಗಂಡ-ಹೆಂಡತಿ ಎಂಬುದು ಗೊತ್ತು. ಅವರಿಬ್ಬರದು ಲವ್ ಮ್ಯಾರೇಜ್. ಹಾಗಿದ್ದರೆ, ಈ ದಂಪತಿಗಳ ಮೊಟ್ಟ ಮೊದಲ ಭೇಟಿ ಆಗಿದ್ದು ಎಲ್ಲಿ ಎಂಬ ಕುತೂಹಲ ಖಂಡಿತವಾಗಿಯೂ ಹಲವರಿಗೆ ಇದ್ದೇ ಇರುತ್ತೆ. ಈ ಪ್ರೇಮ್ ಕಹಾನಿ ಶುರುವಾಗಿದ್ದು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

'ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ 'ದೂರದ ಬೆಟ್ಟ' ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆ ಚಿತ್ರದ ಹೀರೋ ನಟ ಡಾ ರಾಜ್‌ಕುಮಾರ್ ತಮ್ಮ ಪಾತ್ರದ ಶೂಟಿಂಗ್ ಮುಗಿಸಿ ಮನೆಗೆ ಹೊರಟಿರುತ್ತಾರೆ. ಆಗ ದೂರದ ಬೆಟ್ಟ ಚಿತ್ರದ ನಾಯಕಿಯಾಗಿದ್ದ ನಟಿ ಭಾರತಿ ಅವರು ಅಲ್ಲೇ ಇದ್ದಿದ್ದರಿಂದ ಅವರನ್ನು ತಮ್ಮ 'ನಾಗರಹಾವು' ಚಿತ್ರದ 'ನೂರನೇ ದಿನ'ದ ಸೆಲೆಬ್ರೇಶನ್‌ಗೆ ಇನ್‌ವೈಟ್ ಮಾಡಲು ನಟ ವಿಷ್ಣುವರ್ಧನ್ ಅಲ್ಲಿಗೆ ಬಂದಿರುತ್ತಾರೆ. ಅಂದು ಅವರಿಬ್ಬರ ಮೊದಲ ಭೇಟಿಯಾಗಿತ್ತು. 

ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?

ಬಳಿಕ, ನಟ ವಿಷ್ಣುವರ್ಧನ್ ಹಾಗು ನಟಿ ಭಾರತಿ ಅವರಿಬ್ಬರೂ 'ಮನೆ ಬೆಳಗಿದ ಸೊಸೆ' ಎಂಬ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದರು. ಅದೇ ಅವರಿಬ್ಬರ ಜೋಡಿಯ ಮೊದಲ ಚಿತ್ರ. ನಟಿ ಭಾರತಿ ಹಾಗೂ ನಟ ವಿಷ್ಣುವರ್ಧನ್ ಸ್ನೇಹ ಈ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿತು ಎನ್ನಲಾಗಿದೆ. ಭಾರತಿ-ವಿಷ್ಣುವರ್ಧನ್ ಸಂಗೀತ ಪ್ರೇಮ ಅವರಿಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ತಂದಿತು. ಭಾರತಿ ಸಂಗೀತ ಕಲಿಯುತ್ತಿದ್ದರು, ಅದಕ್ಕೆ ವಿಷ್ಣುವರ್ಧನ್‌ ಕೂಡ ಆಸಕ್ತಿ ತೋರಿಸುತ್ತಿದ್ದರು. ಹೀಗಾಗಿ ಅವರಿಬ್ಬರೂ ಕೆಲವೇ ದಿಗಳಲ್ಲಿ ತುಂಬಾ ಆತ್ಮೀಯರಾದರು. ಬಳಿಕ ಅದು ಪ್ರೇಮಕ್ಕೆ ತಿರುಗಿತು.

ಲೈಫ್‌ನಲ್ಲಿ ಯಾವುದು ತುಂಬಾ ಮುಖ್ಯ ಎಂಬ ಸೀಕ್ರೆಟ್ ಹೇಳಿದ ಅಲ್ಲು ಅರ್ಜುನ್!
 
'ಮನೆ ಬೆಳಗಿದ ಸೊಸೆ' ಚಿತ್ರದ ಹೆಸರಿನಂತೆ ನಟಿ ಭಾರತಿ ಈ ಚಿತ್ರದ ನಂತರ ವಿಷ್ಣುವರ್ಧನ್ ಮನೆಯ ಸೊಸೆಯಾಗಿ ಮನೆ ಬೆಳಗಿದರು. ಬಳಿಕ, ವಿಷ್ಣುವರ್ಧನ್-ಭಾರತಿ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. 17 ಫೆಬ್ರವರಿ 1975ರಂದು ವಿಷ್ಣುವರ್ಧನ್-ಭಾರತಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಬಳಿಕ, ನಟಿ ಭಾರತಿ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ವಿಷ್ಣುವರ್ಧನ್‌ ತಮ್ಮ ನಟನೆಯ ಜರ್ನಿ ಮುಂದುವರೆಸಿದರು. 30 ಡಿಸೆಂಬರ್ 2009ರಲ್ಲಿ ನಟ ವಿಷ್ಣುವರ್ಧನ್ ತಮ್ಮ 59ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 

Latest Videos
Follow Us:
Download App:
  • android
  • ios