ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಸೂಪರ್‌ ಹಿಟ್‌ ಸಿನಿಮಾ ‘ಉಪೇಂದ್ರ’ ಸೆ.18ರ ಉಪೇಂದ್ರ ಜನ್ಮದಿನದಂದು ಮರು ಬಿಡುಗಡೆಯಾಗಲಿದೆ. 25 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಾಯಕಿಯರಾಗಿ ನಟಿಸಿದ್ದರು.

ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಸೂಪರ್‌ ಹಿಟ್‌ ಸಿನಿಮಾ ‘ಉಪೇಂದ್ರ’ ಸೆ.18ರ ಉಪೇಂದ್ರ ಜನ್ಮದಿನದಂದು ಮರು ಬಿಡುಗಡೆಯಾಗಲಿದೆ. 25 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಾಯಕಿಯರಾಗಿ ನಟಿಸಿದ್ದರು. ವ್ಯಕ್ತಿಯೊಬ್ಬನ ಜೀವನದಲ್ಲಿ ಹಣ, ಜವಾಬ್ದಾರಿ ಹಾಗೂ ಪ್ರೀತಿ ಎಷ್ಟು ಮುಖ್ಯ ಎಂಬ ಕಥಾಹಂದರ ಈ ಸಿನಿಮಾದಲ್ಲಿತ್ತು. ಮಾರಿಮುತ್ತು ವಿಲನ್ ಪಾತ್ರದಲ್ಲಿ ನಟಿಸಿದ್ದರು. 

‘ಉಪೇಂದ್ರ’ ಸಿನಿಮಾದಲ್ಲಿ ನಾಯಕ ಉಪೇಂದ್ರ ನಾನು ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಾಯಕಿಯರಾಗಿ ನಟಿಸಿದ್ದರು. ವ್ಯಕ್ತಿಯೊಬ್ಬನ ಜೀವನದಲ್ಲಿ ಹಣ, ಜವಾಬ್ದಾರಿ ಹಾಗೂ ಪ್ರೀತಿ ಎಷ್ಟು ಮುಖ್ಯ ಹಾಗೂ ಅವುಗಳು ವಹಿಸುವ ಪಾತ್ರಗಳ ಬಗ್ಗೆ ಕತೆಯ ಮೂಲಕ ಉಪೇಂದ್ರ ಹೇಳಿದ್ದರು. ಸಿನಿಮಾವನ್ನು ಶಿಲ್ಪಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು, ಗುರುಕಿರಣ್ ನಿರ್ದೇಶನ ಮಾಡಿದ್ದರು. 

ಉಪೇಂದ್ರ, ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಎರಡನೇ ಸಿನಿಮಾ ಇದಾಗಿತ್ತು. ಈ ಸಿನಿಮಾಕ್ಕೆ ವಿರೋಧ ವ್ಯಕ್ತವಾಗಿದ್ದರೂ ಆ ಕಾಲದಲ್ಲೇ ಈ ಚಿತ್ರ ಸುಮಾರು 10 ಕೋಟಿ ರು. ಕಲೆಕ್ಷನ್ ಸಹ ಮಾಡಿತ್ತು. ಈ ಚಿತ್ರದ ‘ಮಸ್ತ್‌ ಮಸ್ತ್‌ ಹುಡುಗಿ ಬಂದ್ಲು’ ಸೇರಿ ಎಲ್ಲ ಹಾಡುಗಳೂ ಸೂಪರ್‌ ಹಿಟ್‌ ಆಗಿದ್ದವು. 25 ವರ್ಷಗಳ ಹಿಂದೆ ಉಪೇಂದ್ರ ಜನ್ಮದಿನದಂದೇ ಈ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಮತ್ತೆ ಅದೇ ದಿನ ಮರು ಬಿಡುಗಡೆಯಾಗುತ್ತಿರುವುದು ವಿಶೇಷ.

ಟ್ರೆಂಡಿಂಗ್‌ನಲ್ಲಿರುವ ರಫೆಲ್‌ ಸೀರೆಯುಟ್ಟು ಬಿಂದಾಸ್‌ ಲುಕ್‌ ಕೊಟ್ಟ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ ನಾಣಯ್ಯ

ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಕ್ಲಾಸಿಕ್‌ ಕಲ್ಟ್‌ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್‌ ಆಗಿದೆ. ಅಲ್ಲಿ ಹಳೆಯ ಸಿನಿಮಾಗಳನ್ನು ಥಿಯೇಟರ್‌ಗೆ ರೀರಿಲೀಸ್‌ ಮಾಡಿರುವ ನಿರ್ಮಾಪಕರು ಭರ್ಜರಿ ಲಾಭ ಮಾಡಿದ್ದಾರೆ. ಅದೇ ಹವಾ ಕನ್ನಡದಲ್ಲೂ ಮುಂದುವರಿಯುವ ಸೂಚನೆ ಸಿಕ್ಕಿದೆ. ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜಾಕಿ’ ಸಿನಿಮಾ ಅಪ್ಪು ಜನ್ಮದಿನದಂದು ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡಿತ್ತು. ಅದರ ಬೆನ್ನಲ್ಲೇ ‘ಅಂಜನೀಪುತ್ರ’, ‘ಪವರ್‌’ ಸಿನಿಮಾಗಳು ಬಿಡುಗಡೆಯಾದವು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಳೆ ಹಾಡುಗಳ ರೀಲ್ಸ್‌ ಸಖತ್‌ ಟ್ರೆಂಡಿಂಗ್‌ ಆಗುತ್ತಿದೆ. ಅದರಂತೇ ಹಳೇ ಸಿನಿಮಾಗಳೂ ಮತ್ತೆ ಟ್ರೆಂಡ್‌ ಸೆಟ್ಟರ್‌ಗಳಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ.