ಅಪಘಾತದಿಂದಾಗಿ ತೀವ್ರ ಗಾಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೊಡಕ್ಷನ್‌ ಮ್ಯಾನೇಜರ್‌ ಅಚ್ಯುತ್‌ ರಾವ್‌ ಏ.27ರಂದು ಬೆಳಗ್ಗಿನ ಜಾವ 4 ಗಂಟೆಗೆ ಮೃತರಾಗಿದ್ದಾರೆ.

ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೃತರ ಅಂತ್ಯಕ್ರಿಯೇ ಮೈಸೂರಿನಲ್ಲಿ ನಡೆದಿದೆ. ಅಚ್ಯುತ್‌ ರಾವ್‌ ನಿಧನಕ್ಕೆ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

ಜನತಾ ಕರ್ಫ್ಯೂ: ಬಿಗ್‌ಬಾಸ್‌ಗಿಲ್ಲ ತೊಂದರೆ, ಧಾರಾವಾಹಿಗಳ ಕಥೆ ಏನು ?

ಹಲವು ವರ್ಷಗಳಿಂದ ನೂರಾರು ಚಿತ್ರಗಳಿಗೆ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದ ಅಚ್ಯುತ್‌ ರಾವ್‌ ಅವರು ನಾಲ್ಕೈದು ದಿನಗಳ ಹಿಂದೆ ತಮ್ಮ ಪುತ್ರ ತಂದಿದ್ದ ಹೊಸ ಬೈಕ್‌ ಅನ್ನು ಓಡಿಸುವಾಗ ಆಕ್ಸಿಡೆಂಟ್‌ ಆಗಿತ್ತು. ಕೂಡಲೇ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.