ಕೊರೋನಾದಿಂದ ತತ್ತರಿಸಿರುವ ಚಿತ್ರರಂಗ ಡಿಸೆಂಬರ್‌ನಲ್ಲಿ ಚೇತರಿಸಿಕೊಳ್ಳುವ ಲಕ್ಷಣಗಳು ಎಲ್ಲಾ ಕಾಣಿಸುತ್ತಿವೆ. ಡಿ.25ಕ್ಕೆ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್‌ ಬಿಡುಗಡೆ ಫಿಕ್ಸ್‌ ಆಗಿದೆ. ವರ್ಷಾಂತ್ಯಕ್ಕೆ ದರ್ಶನೋತ್ಸವ ಜೋರಾಗಿ ನಡೆಯಲಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ಕಾಂಬಿನೇಷನ್‌ನ ಈ ಚಿತ್ರದ ಮೇಲೆ ಆರಂಭದಿಂದಲೂ ಚಿತ್ರಪ್ರೇಮಿಗಳ ಕಣ್ಣಿದೆ. ಪೋಸ್ಟರ್‌ಗಳಿಂದ ಹಿಡಿದು ಹಾಡಿನವರೆಗೂ ಎಲ್ಲವೂ ಸೂಪರ್‌ಹಿಟ್‌ ಆಗಿದೆ.

Happy Birthday ವಸಿಷ್ಠ ಸಿಂಹ: ಮಾಲಿವುಡ್‌, ಟಾಲಿವುಡ್‌ನಲ್ಲೂ ಕನ್ನಡ ನಟನ ಕಂಪು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗೆಟಪ್ಪು, ಹೀರೋಯಿನ್‌ ಆಶಾ ಭಟ್‌ ಲುಕ್ಕು, ಅರ್ಜುನ್‌ ಜನ್ಯಾ ಮ್ಯೂಸಿಕ್ಕು ಎಲ್ಲವೂ ಸೇರಿ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ಕಿಕ್ಕು ಕೊಟ್ಟಿತ್ತು. ಹಾಗಾಗಿಯೇ ಈ ಚಿತ್ರಕ್ಕೆ ಭಾರಿ ಡಿಮ್ಯಾಂಡು. ದರ್ಶನ್‌ ಅಭಿಮಾನಿಗಳಂತೂ ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಈ ಸಿನಿಮಾ ರಿಲೀಸ್‌ ಆಗುತ್ತಿರುವುದು ಅಭಿಮಾನಿಗಳ ಪಾಲಿಗೆ ದೊಡ್ಡ ರಿಲ್ಯಾಕ್ಸೇಶನ್‌. ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದರೆ ಇಡೀ ಚಿತ್ರರಂಗಕ್ಕೆ ಎನರ್ಜಿ ಸಿಗಲಿದೆ.

‘ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಇದೆ. ಸಿನಿಮಾ ಕೂಡ ನಾವು ಅಂದುಕೊಂಡಂತೆ ಬಂದಿದ್ದು, ದರ್ಶನ್‌ ಅವರ ಅಭಿಮಾನಿಗಳಿಗೆ ಹಾಗೂ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಇದು. ಈಗಾಗಲೇ ಚಿತ್ರದ ಹಾಡು, ಪೋಸ್ಟರ್‌ ಹಾಗೂ ಟೀಸರ್‌ಗೆ ಯಶಸ್ಸು ಸಿಕ್ಕಿದೆ. ಅದೇ ರೀತಿ ಚಿತ್ರಕ್ಕೂ ಗೆಲುವು ದೊರೆಯಲಿದೆ ಎನ್ನುವ ವಿಶ್ವಾಸ ಇದೆ’ ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ.

HDK ಫೋನ್ ಸಂಭಾಷಣೆ ಲೀಕ್, ರೈಲು ಚಾಲಕಿಯಾದ ಬ್ಯೂಟಿ ಕ್ವೀನ್; ಅ.18ರ ಟಾಪ್ 10 ಸುದ್ದಿ!

ಡಿಸೆಂಬರ್‌ ನಾಲ್ಕನೇ ವಾರ ಶುಭ ವಾರ. ಅಲ್ಲದೆ ಚಿತ್ರಮಂದಿರಗಳಿಗೆ ದೊಡ್ಡ ಚಿತ್ರಗಳು ಬಂದು ತುಂಬಾ ತಿಂಗಳುಗಳು ಆಗಿವೆ. ಪ್ರೇಕ್ಷಕರು ಕೂಡ ಸ್ಟಾರ್‌ ಚಿತ್ರಗಳಿಗೆ ಎದುರು ನೋಡುತ್ತಿದ್ದಾರೆ. ಈ ಭರವಸೆಯಲ್ಲಿ ಚಿತ್ರವನ್ನು ಡಿಸೆಂಬರ್‌ 25ಕ್ಕೆ ತೆರೆಗೆ ತರಲು ನಿರ್ಧರಿಸಿದ್ದೇವೆ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.