ಮಂಗಳೂರಿನ ಭಯಾನಕ ಘಟನೆಯನ್ನು ಆಧರಿಸಿದ "ನಿಮಿತ್ತ ಮಾತ್ರ" ಚಿತ್ರವು ಪ್ರೇಕ್ಷಕ ಪ್ರಶಂಸೆ ಗಳಿಸುತ್ತಿದೆ. ರೋಷನ್ ಡಿಸೋಜ ನಿರ್ದೇಶನದ ಈ ಥ್ರಿಲ್ಲರ್, ಪ್ಯಾರಸೈಕಾಲಜಿ ಪ್ರಯೋಗದ ದುಷ್ಪರಿಣಾಮಗಳನ್ನು ಚಿತ್ರಿಸುತ್ತದೆ. ಕ್ಲೈಮ್ಯಾಕ್ಸ್ ದೃಶ್ಯಗಳು, ಹಿನ್ನೆಲೆ ಸಂಗೀತ ಮತ್ತು ರಾಜೀವ್ ಅವರ ಸಂಗೀತ ಗಮನ ಸೆಳೆಯುತ್ತಿದೆ. ಪೂರ್ಣಚಂದ್ರ ಮೈಸೂರು ಮತ್ತು ಅರಿವಿಂದ್ ಕುಪ್ಲಿಕರ್ ಅಭಿನಯ ಮೆಚ್ಚುಗೆ ಗಳಿಸಿದೆ. ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ.

'ನಿಮಿತ್ತ ಮಾತ್ರ' ಚಿತ್ರವು (Nimitta Matra) ಕಳೆದ ವಾರ ಬಿಡುಗಡೆಗೊಂಡು ಎಲ್ಲಾ ಕಡೆಗಳಿಂದಲೂ ಪ್ರಶಂಸೆ ಗಳಿಸುತ್ತಿದೆ. ಪ್ಯಾರಸೈಕಾಲಜಿ ಪ್ರಯೋಗದ ನಂತರ ಪರಿಣಾಮಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುತ್ತದೆ. ಕಥೆಯು ಮಂಗಳೂರಿನಲ್ಲಿ ಹದಿನೈಷು ವರ್ಷಗಳ ಹಿಂದೆ ನಡೆದ ಒಂದು ಭಯಾನಕ ಘಟನೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. 

ಮರೆತು ಹೋದ, ರಹಸ್ಯ ಹಾಗೂ ಕ್ರೂರ ಪ್ರಯೋಗಗಳ ನಂತರದ ಪರಿಣಾಮಗಳನ್ನು ಅನ್ವೇಷಿಸುವ ಸನ್ನಿವೇಶಗಳು, 15 ನಿಮಿಷಗಳ ಕ್ಲೈಮಾಕ್ಸ್ ದೃಶ್ಯಗಳು ನೋಡುಗರಿಗೆ ಹಿಂದೆದೂ ಕಾಣದ ಅನುಭವವನ್ನು ನೀಡುತ್ತಿದೆ. ವರ್ಷದ ಮೊದಲ ಹಿಟ್ ಸಿನಿಮಾ ಆಗುವ ಲಕ್ಷಣಗಳು ಗೋಚರಿಸುತ್ತಿವೆ.

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

ಲಾಸ್ ಏಂಜಲೀಸ್‌ದಲ್ಲಿ ಫಿಲಂ ಪದವಿ ಪಡೆದಿರುವ ರೋಷನ್ ಡಿಸೋಜ ಅವರು ಥ್ರಿಲ್ಲರ್ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಮಾಡಿದ್ದಾರೆ. ಪತ್ರಕರ್ತರುಗಳಿಂದಲೂ ಪ್ರಶಂಸೆ ಬಂದಿರುವುದರಿಂದ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ಬುಕ್ ಮೈ ಷೋದಲ್ಲಿ ರೇಟಿಂಗ್ ಒಂಬತ್ತಕ್ಕೆ ಬಂದಿರುವುದು ಹೆಮ್ಮೆಯ ವಿಷಯವೆಂದು ನಿರ್ಮಾಪಕರು ಸಂತಸವನ್ನು ಹಂಚಿಕೊಂಡಿದ್ದಾರೆ. ರಷ್ಯಾ ಮತ್ತು ಚೆನ್ನೈ ತಂತ್ರಜ್ಘರು ಹಿನ್ನಲೆ ಸಂಗೀತ ಒದಗಿಸಿವುದು ಪ್ಲಸ್ ಪಾಯಿಂಟ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಚಂದದಾರವನ್ನು ಹೊಂದಿರುವ ಸಂಗೀತ ರಾಜೀವ್ ನಾಯಕಿ. ಅಲ್ಲದೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಗೂ ಇವರ ಅಭಿನಯ ನೋಡುಗರನ್ನು ಮಂತ್ರಮುಗ್ದಗೊಳಿಸಿದೆ. ಆಡಿಯೋ ವಿಷುಯಲ್ ಟ್ರೇಟ್ ಆಗಿದ್ದು, ಚಿತ್ರಮಂದಿರಗಳಲ್ಲಿ ತಲ್ಲೀನಗೊಳಿಸುವ, ವೇಗದ ಗತಿಯ ನಿರೂಪಣೆ ಸೀಟ್ ತುದಿಯಲ್ಲಿ ಕೂರುವಂತೆ ಮಾಡಿ ಥ್ರಿಲ್ ಅನುಭವ ನೀಡುವಲ್ಲಿ ಸಪಲವಾಗಿದೆ. 

ಬಾಲ್ಯ ವಿವಾಹದಿಂದ ಹೊರಗೆ ಬಂದ ಸರಿತಾ, ಮತ್ತೆ ಸಮಸ್ಯೆ ಸುಳಿಯಲ್ಲಿ... ಯಾಕೆ ಹೀಗೆಲ್ಲಾ?

ಇದೆಲ್ಲಾದರ ಫಲಿತಾಂಶ, ಮುಂದಿನ ವಾರದಿಂದ ಇನ್ನು ಹೆಚ್ಚಿನ ಕೇಂದ್ರಗಳಲ್ಲಿ ಸಿನಿಮಾವು ಬಿಡುಗಡೆಯಾಗುತ್ತಿದೆ. 'ಡೇರ್ ಡೆವಿಲ್ ಮುಸ್ತಫಾ' ಖ್ಯಾತಿಯ ಪೂರ್ಣಚಂದ್ರ ಮೈಸೂರು ನಾಯಕನಾಗಿ ತನಿಖಾ ಪತ್ರಕರ್ತರಾಗಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಅರಿವಿಂದ್ ಕುಪ್ಲಿಕರ್ ಪೋಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಒಟ್ಟಿನಲ್ಲಿ ನಿಮಿತ್ತ ಮಾತ್ರ ಸಿನಿಮಾ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸೌಂಡ್ ಮಾಡತೊಡೊಗಿದೆ.