ಬಾಲ್ಯ ವಿವಾಹದಿಂದ ಹೊರಗೆ ಬಂದ ಸರಿತಾ, ಮತ್ತೆ ಸಮಸ್ಯೆ ಸುಳಿಯಲ್ಲಿ... ಯಾಕೆ ಹೀಗೆಲ್ಲಾ?
ಚೆನ್ನೈನ ಗಂಡನ ಮನೆ ಬಿಟ್ಟು ಓಡಿ ಬಂದ ಸರಿತಾ ವಿರುದ್ಧ ಆಂಧ್ರ ಪ್ರದೇಶದ ಗಂಡ ಕೋರ್ಟಿನಲ್ಲಿ ಕೇಸ್ ಹಾಕ್ತಾರೆ. ತಮ್ಮ ಹೆಂಡತಿಯನ್ನು ವಾಪಸ್ ಕಳಿಸಿಕೊಡಿ ಎಂದು ಸರಿತಾ ಗಂಡ ಹಾಕಿದ್ದ ಕೇಸ್ ತನಿಖೆ ಮಾಡಿದ ಕೋರ್ಟ್, ಅದನ್ನು..

ನಟಿ ಸರಿತಾ (Saritha) ಅವರು ಕನ್ನಡ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರು. ಚಲಿಸುವ ಮೋಡಗಳು, ಹೊಸ ಬೆಳಕು, ಭಕ್ತ ಪ್ರಹ್ಲಾದ ಸೇರಿದಂತೆ ಕನ್ನಡದ ಬಹಳಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿ ಸರಿತಾ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಡಾ ರಾಜ್‌ಕುಮಾರ್ ಅವರ ಜೊತೆಗೇ ಹೆಚ್ಚಾಗಿ ನಟಿಸಿದ್ದಾರೆ ಸರಿತಾ. ಹೊಸ ಬೆಳಕು ಚಿತ್ರದ 'ತೆರೆದಿದೆ ಮನೆ ಓ ಬಾ ಅತಿಥಿ..' ಹಾಡನ್ನಂತೂ ಯಾರೂ ಮರೆಯಲು ಸಾಧ್ಯವಿಲ್ಲ. ಸ್ವಲ್ಪ ಕಪ್ಪಗಿದ್ದರೂ ಪ್ರೇಕ್ಷಕರನ್ನು ಸೆಳೆಯಬಲ್ಲ ನಟನೆ ಅವರಿಗೆ ಸಿದ್ಧಿಸಿತ್ತು.
ಅಂಥ ನಟಿ ಸರಿತಾ ಅವರಿಗೆ 15 ವಯಸ್ಸಿಗೇ ಮದುವೆ ಆಗಿತ್ತು. ಅದನ್ನೀಗ ಬಾಲ್ಯ ವಿವಾಹ ಅಂತಾರೆ. 35 ವರ್ಷದವೆಂಟಕಸುಬ್ಬಯ್ಯ ಎನ್ನುವವರೊಂದಿಗೆ (1975-76) ನಟಿ ಸರಿತಾಗೆ ಮದುವೆ ಮಾಡಲಾಗಿತ್ತು. ವಯಸ್ಸಿನಲ್ಲಿ ಬಹಳ ಅಂತರ ಇದ್ದ ಕಾರಣಕ್ಕೆ, ಸಹಜವಾಗಿಯೇ ಸಂಸಾರದಲ್ಲಿ ಸರಿಗಮ ಕಾಣಲಿಲ್ಲ. ಸ್ವಲ್ಪ ಕಾಲದ ಬಳಿಕ ನಟಿ ಸರಿತಾ ಅವರು ಗಂಡನನ್ನು ಬಿಟ್ಟು ತವರುಮನೆ ಸೇರಿಕೊಂಡರು.
ಚೆನ್ನೈನ ಗಂಡನ ಮನೆ ಬಿಟ್ಟು ಓಡಿ ಬಂದ ಸರಿತಾ ವಿರುದ್ಧ ಆಂಧ್ರ ಪ್ರದೇಶದ ಗಂಡ ಕೋರ್ಟಿನಲ್ಲಿ ಕೇಸ್ ಹಾಕ್ತಾರೆ. ತಮ್ಮ ಹೆಂಡತಿಯನ್ನು ವಾಪಸ್ ಕಳಿಸಿಕೊಡಿ ಎಂದು ಸರಿತಾ ಗಂಡ ಹಾಕಿದ್ದ ಕೇಸ್ ತನಿಖೆ ಮಾಡಿದ ಕೋರ್ಟ್, ಅದನ್ನು ಬಾಲ್ಯ ವಿವಾಹ ಅಂತ ಪರಿಗಣಿಸಿ ಆ ಮದುವೆಯನ್ನೇ ಅನೂರ್ಜಿತಗೊಳಿಸಿ ಆದೇಶ ಹೊರಡಿಸಿತ್ತು. ಹೀಗಾಗಿ ನಟಿ ಸರಿತಾ ಅವರು ಆ ಮದುವೆಯಿಂದ ಕೊನೆಗೂ ಬಚಾವ್ ಆದ್ರು.
ಆದರೆ, ಎಷ್ಟು ಕಾಲ ಹಾಗೆ ಒಂಟಿಯಾಗಿ ಇರಲಾಗುತ್ತೆ? ಹೀಗಾಗಿ ಬಳಿಕ ಮುಖೇಶ್ ಎನ್ನುವರನ್ನು ಲವ್ ಮಾಡಿ 1988 ರಿಂದ 2011ರವರೆಗೂ ಸಂಸಾರ ಮಾಡಿದ್ದಾರೆ. ಅದ್ಯಾಕೋ ನಟಿ ಸರಿತಾ ಅವರ ಸಾಂಸಾರಿಕ ಜೀವನ ಸರಿ ಹೋಗಲೇ ಇಲ್ಲ. ಫ್ಯಾಮಿಲಿ ಲೈಫ್‌ನಲ್ಲಿ ಅವರಿಗೆ ಬಹಳಷ್ಟು ನೋವು ಕಾಡಿತ್ತು. ಅವರು ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ ಒಳ್ಳೆಯ ಯಶಸ್ಸು ಪಡೆದಿದ್ದರೂ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ನೋವು ಅನುಭವಿಸಿದ್ದಾರೆ. ಈಗಲೂ ಕೂಡ ನಟಿ ಸರಿತಾ ನಟನೆ ಮುಂದುವರಿಸಿದ್ದಾರೆ.