ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?
ಹೆಚ್‌ಡಿ ಕುಮಾರಸ್ವಾಮಿ ಅವರು ಸಿನಿಮಾ ಪ್ರೇಮಿಯಾಗಿ ಸಿನಿಮಾ ನೋಡುವುದು ಅಷ್ಟೇ ಅಲ್ಲ, ನಿರ್ಮಾಣವನ್ನೂ ಕೂಡ ಮಾಡಿದ್ದಾರೆ. ವಿಷ್ಣುವರ್ಧನ್ ನಟನೆಯ 'ಸೂರ್ಯವಂಶ' ಹಾಗೂ ಮಗ ನಿಖಿಲ್ ನಟನೆಯ 'ಜಾಗ್ವಾರ್' ನಿರ್ಮಾಣದ ಜೊತೆಗೆ, ಸಾಕಷ್ಟು.. ಅಣ್ಣಾವ್ರ ಬಗ್ಗೆ..

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಅವರು ಸಿನಿಮಾ ಬಗ್ಗೆ ಮಾತನ್ನಾಡಿದ್ದು ಇದೀಗ ವೈರಲ್ ಆಗುತ್ತಿದೆ. ಯಾವತ್ತೋ ಹೆಚ್‌ಡಿಕೆಸಂದರ್ಶನದಲ್ಲಿ ಹೇಳಿದ್ದ ಆ ಒಂದು ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಸುತ್ತುತ್ತಿದೆ. ಕುಮಾರಸ್ವಾಮಿ ಅವರು ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ನಿರ್ಮಾಣವನ್ನು ಕೂಡ ಮಾಡಿದ್ದಾರೆ. ಹಾಗಿದ್ರೆ ಅದೇನು ಹೇಳಿದ್ದಾರೆ ಕುಮಾರಸ್ವಾಮಿಯವರು ಎಂಬುದು ಇಲ್ಲಿದೆ, ನೋಡಿ..
'ರಾಜಕೀಯಕ್ಕೆ ಬರುವ ಮೊದಲಿನಿಂದಲೂ ನನಗೆ ಸಿನಿಮಾ ನೋಡುವ ಹುಚ್ಚು.. ಅದರಲ್ಲೂ ವಿಶೇಷವಾಗಿ ಡಾ ರಾಜ್‌ಕುಮಾರ್ (Dr Rajkumar) ಅಭಿನಯದ ಚಿತ್ರಗಳನ್ನು ನೋಡುವ ಹುಚ್ಚು. ಈಗಲೂ ನಾನು ಡಾ ರಾಜ್‌ಕುಮಾರ್ ಅವರ ಬ್ಲಾಕ್ & ವೈಟ್ ಚಿತ್ರಗಳನ್ನು ರಾತ್ರಿ 11 ಗಂಟೆಗ ನೋಡಲು ಶುರು ಮಾಡುತ್ತೇನೆ. ಏಕೆಂದರೆ ನಾವು ಚಿಕ್ಕ ವಯಸ್ಸನಿಂದಲೂ ಮಾನವೀಯತೆ, ತಾಯಿ ಹೃದಯ ಎಂಬುದನ್ನು ಬೆಳೆಸಿಕೊಂಡು ಬಂದಿದ್ದೇವೆ.
ಮೈಸೂರು ಗಲಭೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಬೇಡ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಅದು ನಮ್ಮ ತಂದೆ-ತಾಯಿ ಕಲಿಸಿರುವಂಥದ್ದು. ಇಂದಿಗೂ ನನಗೆ ಸಿನಿಮಾ ನೋಡುವ ಅಭ್ಯಾಸವಿದೆ.. ಡಾ ರಾಜ್‌ಕುಮಾರ ನಟನೆಯ 'ಕಲ್ಲಾದೆ ಏಕೆಂದು ಬಲ್ಲೆ..' ಎಂಬ ಹಾಡು ನನಗೆ ತುಂಬಾ ಇಷ್ಟ. ಪಿಬಿ ಶ್ರೀನಿವಾಸ್ ಹಾಡಿಗೆ ಡಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಇದೆಲ್ಲವನ್ನೂ ನಾನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ' ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ.
ಹೆಚ್‌ಡಿ ಕುಮಾರಸ್ವಾಮಿ ಅವರು ಸಿನಿಮಾ ಪ್ರೇಮಿಯಾಗಿ ಸಿನಿಮಾ ನೋಡುವುದು ಅಷ್ಟೇ ಅಲ್ಲ, ನಿರ್ಮಾಣವನ್ನೂ ಕೂಡ ಮಾಡಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಸೂರ್ಯವಂಶ' ಹಾಗೂ ಮಗ ನಿಖಿಲ್ ನಟನೆಯ 'ಜಾಗ್ವಾರ್' ಸಿನಿಮಾ ನಿರ್ಮಾಣದ ಜೊತೆಗೆ, ಸಾಕಷ್ಟು ಸಿನಿಮಾಗಳನ್ನು ವಿತರಣೆ ಕೂಡ ಮಾಡಿದ್ದಾರೆ ಕುಮಾರಸ್ವಾಮಿ ಅವರು.
ಬಾಲ್ಯ ವಿವಾಹದಿಂದ ಹೊರಗೆ ಬಂದ ಸರಿತಾ, ಮತ್ತೆ ಸಮಸ್ಯೆ ಸುಳಿಯಲ್ಲಿ... ಯಾಕೆ ಹೀಗೆಲ್ಲಾ?
ಈ ಹಿಂದೆ ಬಹಳಷ್ಟು ಸಿನಿಮಾಗಳು 'ಕುಮಾರಸ್ವಾಮಿ ಅರ್ಪಿಸುವ, ಕುಮಾರಸ್ವಾಮಿ ಆಶೀರ್ವಾದದೊಂದಿಗೆ..' ಅಂತ ತೆರೆಯಲ್ಲಿ ಬರುವುದನ್ನು ಬಹಳಷ್ಟು ಜನರು ನೋಡಿದ್ದಾರೆ, ನೆನಪಿನಲ್ಲಿ ಇಟ್ಟುಕೊಂಡಿರಬಹುದು. ಸಾಕಷ್ಟು ಸಂದರ್ಶನದಲ್ಲಿ ಕುಮಾರಸ್ವಾಮಿ ಅವರು ತಮ್ಮ ಸಿನಿಮಾ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹೀಗೆ ಯಾವುದೋ ಸಂದರ್ಶನದಲ್ಲಿ ಅವರು ತಮ್ಮ ಡಾ ರಾಜ್‌ಕುಮಾರ್ ಅಭಿನಯದ ಸಿನಿಮಾ ನೋಡುವ ಹುಚ್ಚಿನ ಬಗ್ಗೆ ಹೇಳಿಕೊಂಡಿದ್ದಾರೆ. ಅದೀಗ ವೈರಲ್ ಆಗ್ತಿದೆ.