ಚಡ್ಡಿ ದೋಸ್ತ್ ಸಿನಿಮಾ ನೋಡಿದ್ರೆ ಚಿನ್ನದ ನಾಣ್ಯ
- ಚಡ್ಡಿ ದೋಸ್ತ್ ಸಿನಿಮಾ ನೋಡಿದ್ರೆ ಚಿನ್ನದ ನಾಣ್ಯ
- ಸಿನಿಮಾ ನೋಡುಗರಿಗೆ ನಿರ್ಮಾಪಕರಿಂದ ವಿಶೇಷ ಆಫರ್
‘ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ’ ಸಿನಿಮಾ ನೋಡುವ ಒಬ್ಬ ಅದೃಷ್ಟವಂತರಿಗೆ ಚಿನ್ನದ ನಾಣ್ಯದ ಕೊಡುಗೆ ನೀಡುತ್ತೇನೆ’ ಎಂದು ಚಿತ್ರದ ನಿರ್ಮಾಪಕ ಸೆವೆನ್ ರಾಜ್ ತಿಳಿಸಿದ್ದಾರೆ.
‘ಪ್ರತೀ ದಿನ ಈ ಥಿಯೇಟರ್‌ನಲ್ಲಿ ಚಡ್ಡಿ ದೋಸ್ತ್ ಚಿತ್ರದ ಎರಡು ಶೋಗಳು ನಡೆಯುತ್ತವೆ. ಪ್ರತೀ ಶೋ ಬಳಿಕ ಲಕ್ಕಿಡಿಪ್ ಡ್ರಾ ನಡೆಯಲಿದೆ. ವಿಜೇತರಿಗೆ ಅರ್ಧ ಗ್ರಾಮ್‌ನ ಬಂಗಾರದ ನಾಣ್ಯ ನೀಡುತ್ತೇವೆ. ಎಷ್ಟುದಿನ ಥಿಯೇಟರ್‌ನಲ್ಲಿ ಸಿನಿಮಾ ಓಡುತ್ತೋ ಅಷ್ಟೂದಿನ ಈ ಕೊಡುಗೆ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.
‘ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕಾಏಕಿ ನಮ್ಮ ಗಮನಕ್ಕೂ ತರದೇ ಚಿತ್ರ ಪ್ರದರ್ಶನದ ಸಮಯ ಬದಲಾವಣೆ ಮಾಡುತ್ತಿದ್ದಾರೆ. ಇದರಿಂದ ಹಲವರು ಥಿಯೇಟರ್‌ಗೆ ಬಂದು ವಾಪಾಸ್ ಹೋಗುವಂತಾಗಿದೆ. ಆದರೆ ಎಲ್ಲೆಡೆ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದ್ದಾರೆ. ನಿರ್ದೇಶಕ ಆಸ್ಕರ್ ಕೃಷ್ಣ, ನಟ ಲೋಕೇಂದ್ರ ಸೂರ್ಯ, ನಾಯಕಿ ಗೌರಿ ನಾಯರ್ ಉಪಸ್ಥಿತರಿದ್ದರು.
ಚಿತ್ರ ವಿಮರ್ಶೆ: ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ
ನಿರ್ಮಾಪಕ ಸೆವೆನ್ ರಾಜ್ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆ ಮಾಡಿದ್ದು, ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಅವರು ಹಾಡಿದ್ದಾರೆ. ಗಗನ್ ಕ್ಯಾಮೆರಾ ಹಿಡಿದಿದ್ದಾರೆ. ‘ನನ್ನ ಕುಟುಂಬದಲ್ಲಿ ನಾನು 7ನೇ ಮಗ. ನನ್ನ ಲಕ್ಕಿ ನಂಬರ್ 7. ಅದಕ್ಕೆ ನನ್ನ ಹೆಸರು ಸೆವ್‌ರಾಜ್. ಅಲ್ಲದೆ 17 ತಾರೀಕು ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದರ ಹಿಂದೆ ನನ್ನ ಲಕ್ಕಿ ನಂಬರ್ ಇದೆ. ಈ ಚಿತ್ರದ ನಂತರ ಕನ್ನಡದಲ್ಲಿ 7 ಸಿನಿಮಾ ಮಾಡಬೇಕು ಎನ್ನುವ ಕನಸು ಇದೆ. ನಾನು ವಿಲನ್ ಆಗಲು ಬಂದಾಗ ನನ್ನ ಬೇಡ ಎಂದವರಿಗೆ ನಾನೇನು ಅಂತ ಸಾಬೀತು ಮಾಡಕ್ಕೆ ಈ ಚಿತ್ರ ಮಾಡಿದೆ’ ಎಂದು ಸೆವೆನ್ ರಾಜ್ ಹೇಳಿಕೊಂಡರು.
58 ವರ್ಷದ ಸೆವೆನ್ ರಾಜ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಎರಡು ಕಾರಣಗಳಿಗಾಗಿ ಖಳನಾಯಕನಾಗಿ ನಟಿಸುವುದು ಸುಲಭ. ಒಂದು, ಇದು ಅಭಿವ್ಯಕ್ತಿಗೆ ವಿಶಾಲ ವ್ಯಾಪ್ತಿಯನ್ನು ಹೊಂದಿದೆ ಮತ್ತು ನಿಮ್ಮ ನೈಜ ಪ್ರತಿಭೆಯನ್ನು ಹೊರತರಲು ಸಹಾಯ ಮಾಡುತ್ತದೆ. ಎರಡನೆಯದಾಗಿ, ಕಾಲ್ ಶೀಟ್‌ಗಳು ಚಿಕ್ಕದಾಗಿರುತ್ತವೆ. ನೀವು ನಿಮ್ಮ ಶೆಡ್ಯೂಲ್ ಬೇಗ ಮುಗಿಸಬಹುದು ಎಂದಿದ್ದಾರೆ.
ಚಿತ್ರವು ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ. ನಾನು ಎಮ್‌ಎಲ್‌ಎ ಪಾತ್ರ ಮಾಡುತ್ತೇನೆ. ಅದರಲ್ಲಿ ಕೆಟ್ಟವನು. ನಾನು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ನಾನು ತರಬೇತಿ ಪಡೆದ ಡ್ಯಾನ್ಸರ್. ಈ ಚಿತ್ರವು ಕಾಲು ಅಲುಗಾಡಿಸಲು ನನಗೆ ಅವಕಾಶವನ್ನು ನೀಡಿತು ಎಂದು ಅವರು ಹೇಳುತ್ತಾರೆ. ಅವರು ಸಿನಿಮಾ ಕೆಂಪು ಮತ್ತು ಬಿಳಿ ಬಣ್ಣದ ಉಡುಗೆ ಮಾತ್ರ ಧರಿಸುತ್ತಾರೆ.