Asianet Suvarna News Asianet Suvarna News

ಚಿತ್ರ ವಿಮರ್ಶೆ: ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟ್ಟ

ಜಗತ್ತಲ್ಲಿ ಹೇಳದೇ ಉಳಿದಿರುವ ಕತೆಗಳೇ ಇಲ್ಲ. ಇರುವ ಕತೆಗಳನ್ನೇ ಹೊಸದಾಗಿ ರೂಪಿಸುವುದು ನಮ್ಮ ಕೆಲಸ.

Kannada film Chaddi Dosth Kaddi Alladusbutta film review vcs
Author
Bangalore, First Published Sep 18, 2021, 9:55 AM IST
  • Facebook
  • Twitter
  • Whatsapp

ಪೀಕೆ

ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾದ ಕತೆ ಸ್ನೇಹದ್ದು, ಪ್ರೇಮದ್ದು, ಇಬ್ಬರು ಸ್ನೇಹಿತರ ನಡುವೆ ಹುಡುಗಿಯೊಬ್ಬಳು ಬಂದಾಗ ಆಗುವ ಅನಾಹುತದ್ದು. ಇದನ್ನು ನೀವು ಲಕ್ಷಾಂತರ ಸಲ ಕೇಳಿರಬಹುದು, ಆದರೆ ಇಲ್ಲಿ ಹೊಸತಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಕತೆಗೆ ರೌಡಿಸಂನ ಬ್ಯಾಗ್ರೌಂಡ್‌ ಇದೆ, ಒಂದು ಹಿಸ್ಟರಿ ಇದೆ. ಅದನ್ನು ಕಚ್ಚಾ ಮಾದರಿಯಲ್ಲಿ ನಿರೂಪಿಸಿದ್ದಾರೆ. ಅದು ಈ ಸಿನಿಮಾಕ್ಕೆ ಬೇಕಾದದ್ದೇ. ಹಾಸ್ಯವೂ ಇದೆ.ಬಹುಶಃ ಅದ್ಭುತ ನಟರಿದ್ದರೆ, ಸ್ಕಿ್ರಪ್ಟ್‌ ಮೇಲೆ ಇನ್ನೊಂದಿಷ್ಟುಕೆಲಸ ಮಾಡಿದ್ದರೆ ಚಿತ್ರ ಮತ್ತೊಂದು ಲೆವೆಲ್‌ಗೆ ಹೋಗುತ್ತಿತ್ತೇನೋ. ಇಲ್ಲಿ ಮುಖ್ಯ ಪಾತ್ರದ ಆಯ್ಕೆಯಲ್ಲೇ ಆದ ಎಡವಟ್ಟು ಆ ಸಾಧ್ಯತೆಯನ್ನು ತಳ್ಳಿ ಹಾಕಿದೆ. ಜೊತೆಗೆ ಫಸ್ಟ್‌ ಹಾಫ್‌ನಲ್ಲಿ ಕೆಲವೆಡೆ ಕಿವಿಗೆ, ಕಣ್ಣಿಗೆ ಫಿಲ್ಟರ್‌ ಹಾಕೋದು ಕಡ್ಡಾಯ ಅನಿಸುತ್ತದೆ.

ತಾರಾಗಣ: ಆಸ್ಕರ್‌ ಕೃಷ್ಣ, ಲೋಕೇಂದ್ರ ಸೂರ್ಯ, ಗೌರಿ ನಾಯರ್‌, ಸೆವೆನ್‌ರಾಜ್‌

ನಿರ್ದೇಶನ: ಆಸ್ಕರ್‌ ಕೃಷ್ಣ

ನಿರ್ಮಾಪಕ: ಸೆವೆನ್‌ ರಾಜ್‌

ರೇಟಿಂಗ್‌: 2

‘ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟ್ಟ’ ಅನ್ನೋ ಟೈಟಲ್‌ ಕೇಳಿದರೆ ಇದು ಬಾಲ್ಯ ಸ್ನೇಹಿತನ ದ್ರೋಹದ್ದೇ ಕತೆ ಅಂದ್ಕೊಂಡುಬಿಡ್ತೀವಿ. ಇಲ್ಲಿರೋದು ಚಡ್ಡಿದೋಸ್ತ್‌ಗಳೇ ಆಗಿದ್ದರೂ, ನಾವು ಗೆಸ್‌ ಮಾಡಿದ್ದಕ್ಕಿಂತ ಕಥೆ ಭಿನ್ನವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಗಡಾರಿ ಪಾತ್ರದ ಲೋಕೇಂದ್ರ ಸೂರ್ಯ ನಟನೆ ಮನಸ್ಸು ಆದ್ರ್ರಗೊಳಿಸುತ್ತೆ. ಇಡೀ ಸಿನಿಮಾದಲ್ಲಿ ನಮ್ಮನ್ನು ಅಲ್ಲಾಡಿಸುವ ಭಾಗ ಇದೊಂದೇ.

ಚಿತ್ರ ವಿಮರ್ಶೆ: ಗ್ರೂಫಿ

ಇಬ್ಬರು ಕ್ರಿಮಿನಲ್‌ ಹಿನ್ನೆಲೆಯ ಚಡ್ಡಿದೋಸ್ತ್‌ಗಳು. ಒಬ್ಬ ಗಡಾರಿ ಎಂಬ ಹೆಣ್ಣುಬಾಕ, ಇನ್ನೊಬ್ಬ ರಾಜ, ನಟೋರಿಯಸ್‌ ಆಗಿದ್ರೂ ಡೀಸೆಂಟ್‌, ಗೆಳೆಯನ ರಕ್ಷಣೆಯೇ ತನ್ನ ಗುರಿ ಎಂದು ನಂಬಿರುವವ. ರಾಜನ ಸಪೋರ್ಟ್‌ ನಡುವೆಯೂ ಲೋಕಲ್‌ ಎಂಎಲ್‌ಎಯ ಕುತಂತ್ರದ ಜೊತೆಗೆ ತನ್ನ ಐಬಿನಿಂದ ಸಂಕಷ್ಟಕ್ಕೆ ಸಿಲುಕುವ ಗಡಾರಿಯ ಕತೆ ಕೊನೆಗೆ ಏನಾಗುತ್ತೆ ಅನ್ನೋದೇ ಸಸ್ಪೆನ್ಸ್‌. ನಿರ್ದೇಶನದಲ್ಲಿ ವೃತ್ತಿಪರತೆಯ ಅಗತ್ಯ ಎದ್ದು ಕಾಣುತ್ತದೆ. ಕ್ಯಾಮರ ವರ್ಕ್ ಬಗೆಗೂ ಹೆಚ್ಚಿನ ನಿರೀಕ್ಷೆ ಬೇಡ. ರಾಜ ಪಾತ್ರಕ್ಕೆ ಮಿನಿಮಮ್‌ ಅಭಿನಯವಾದರೂ ಬೇಕಿತ್ತು. ಗಡಾರಿ ಪಾತ್ರ ಲೋಕೇಂದ್ರ ಸೂರ್ಯ ಅವರದು ಉತ್ತಮ ಪರ್ಫಾಮೆನ್ಸ್‌. ಗೌರಿ ನಟನೆ ಚೆನ್ನಾಗಿದೆ. ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೇ ಹೋದಲ್ಲಿ ಸಣ್ಣ ಮಟ್ಟಿನ ಮನರಂಜನೆ ಈ ಚಿತ್ರದಿಂದ ಸಿಗಬಹುದು.

Follow Us:
Download App:
  • android
  • ios