ಬೆಂಗಳೂರು (ಮಾ. 06): ನಿರ್ದೇಶಕ ಮಂಸೋರೆ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಮಾಡಲಿದ್ದು, ಇದಕ್ಕೆ ಟಿಕೆ ದಯಾನಂದ ಕತೆ ಹಾಗೂ ಸಂಭಾಷಣೆಗಳನ್ನು ಬರೆಯುತ್ತಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ‘ಬೆಲ್‌ ಬಾಟಂ’ ಸಿನಿಮಾ ಯಶಸ್ಸು ಕಂಡ ಮೇಲೆ ಕತೆಗಾರ ದಯಾನಂದಗೆ ಬೇಡಿಕೆ ಬಂದಿದ್ದು, ಈಗ ಮಂಸೋರೆ ನಿರ್ದೇಶನಕ್ಕೆ ಕತೆ ಜತೆಗೆ ಸಂಭಾಷಣೆಗಳನ್ನೂ ರೂಪಿಸುತ್ತಿದ್ದಾರೆ.

ಭದ್ರಾವತಿ ಹುಡುಗಿ ಆಶಾಭಟ್‌ ಬಾಲಿವುಡ್‌ಗೆ

ನೈಜ ಘಟನೆಗಳ ಪ್ರೇಮ ಕತೆ

ಇದೊಂದು ಶುದ್ಧ ಪ್ರೇಮ ಕತೆಯ ಸಿನಿಮಾ. ಮತ್ತೊಂದು ವಿಶೇಷ ಅಂದರೆ ಇದು ರಾಜ್ಯದಲ್ಲಿ ನಡೆದ ನೈಜ ಘಟನೆಗಳನ್ನು ಗ್ರೌಂಡ್‌ ರಿಪೋರ್ಟಿಂಗ್‌ ಅನ್ನು ಅಧ್ಯಯನ ಮಾಡಿದ ಮೇಲೆ ಸಾಕಷ್ಟುಕುತೂಹಲಕಾರಿ ಅಂಶಗಳನ್ನು ಪತ್ತೆ ಹಚ್ಚಿ ದಯಾನಂದ ಅವರು ಈ ಕತೆ ಬರೆದಿದ್ದಾರೆ. ಒಂದು ಅಧ್ಯಯನ ತಂಡವನ್ನೇ ಕಟ್ಟಿಕೊಂಡು ಇದರ ಕತೆ ರೂಪಿಸಿದ್ದಾರೆ. ಅಲ್ಲದೆ ತಾವೇ ಬರೆದ ಕತೆಗೆ ಸಂಭಾಷಣೆಗಳನ್ನು ಬರೆಯುತ್ತಿದ್ದಾರೆ.

’ಕುರುಕ್ಷೇತ್ರ’ ರಿಲೀಸ್‌ಗೆ ಡೇಟ್ ಪಕ್ಕಾ!

‘ಪಕ್ಕಾ ನೆಲದ ಸೊಗಡನ್ನು ಬಿಂಬಿಸುವ ಪ್ರೇಮ ಕತೆಯನ್ನು ಕಮರ್ಷಿಯಲ್ಲಾಗಿ ಹೇಳುವುದಕ್ಕೆ ಹೊರಟಿದ್ದೇವೆ. ಮಂಸೋರೆ ಸಿನಿಮಾ ಎಂದಾಗ ಒಂದು ವರ್ಗಕ್ಕೆ ಸೀಮಿತ ಮಾಡಿ ನೋಡಲಾಗುತ್ತದೆ. ಆದರೆ, ಈ ಚಿತ್ರ ಹಾಗಲ್ಲ. ಹಾಡು, ಡ್ಯಾನ್ಸ್‌, ಫೈಟ್ಸ್‌ಗಳನ್ನು ಒಳಗೊಂಡು ಕಮರ್ಷಿಯಲ್‌ ಸಿನಿಮಾ. ಇದಕ್ಕೆ ನೈಜ ಘಟನೆಯೇ ಸ್ಫೂರ್ತಿ’ ಎನ್ನುತ್ತಾರೆ ಟಿಕೆ ದಯಾನಂದ.

’ಇವರಿಗೆ ಕಿಸ್ ಕೊಡೋಕೆ ಚಾನ್ಸ್ ಸಿಕ್ರೆ ಬಿಡೋದೇ ಇಲ್ಲ’: ಮಿಲ್ಕ್ ಬ್ಯೂಟಿ

ನಿರ್ದೇಶಕರ ಪ್ಯಾಕ್‌ ಸಿನಿಮಾ

‘ಬೆಲ್‌ ಬಾಟಂ’ ಚಿತ್ರದಲ್ಲಿ ಮಾಡಿದ ಪ್ರಯೋಗ ಇಲ್ಲೂ ಮುಂದುವರಿಯಲಿದೆ. ಈ ಚಿತ್ರದ ಬಹುಮುಖ್ಯ ಪಾತ್ರಗಳಲ್ಲಿ ಐದಾರು ಜನ ನಿರ್ದೇಶಕರು ನಟಿಸಲಿದ್ದಾರೆ. ಸದ್ಯಕ್ಕೆ ಮಂಸೋರೆ, ದಯಾನಂದ ಜತೆಗೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಲು ವೀರು ಮಲ್ಲಣ್ಣ ಕೂಡ ಸೇರಿಕೊಂಡಿದ್ದಾರೆ. ಅಲ್ಲಿಗೆ ಮೂರು ಮಂದಿ ನಿರ್ದೇಶಕರು ಈಗ ಜತೆಯಾದಂತಾಗಿದೆ. ಅಲ್ಲದೆ ಈ ಚಿತ್ರದ ಮೂಲಕ ಹೊಸ ನಾಯಕ, ನಾಯಕಿಯನ್ನು ಪರಿಚಯಿಸುವ ಸಾಹಸಕ್ಕೆ ಚಿತ್ರತಂಡ ಮುಂದಾಗಿದೆ. ಆ ನಿಟ್ಟಿನಲ್ಲಿ ಚಿತ್ರಂಡ ಆಡಿಷನ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ.

 

ಒಂದು ವಿಶೇಷವಾದ ಕಾಂಬಿನೇಷನ್‌ ಜತೆಗೂಡಿ ಈ ಸಿನಿಮಾ ಮಾಡುತ್ತಿದ್ದೇವೆ. ನಾನು ಇಲ್ಲಿವರೆಗೂ ಮಾಡಿದ ಸಿನಿಮಾ ಬೇರೆ, ಈ ಚಿತ್ರದ ನೆಲೆಗಟ್ಟೇ ಬೇರೆ. ಹೀಗಾಗಿಯೇ ವೀರು, ದಯಾನಂದ ಅವರು ಜತೆಯಾಗಿದ್ದೇವೆ. ದೊಡ್ಡ ಮಟ್ಟದ ಕಮರ್ಷಿಯಲ್‌ ಸಿನಿಮಾ ಇದು. ಯಾವುದು ಕಲ್ಪನೆಯ ದೃಶ್ಯ, ಕಲ್ಪನೆಯ ಕತೆ ಇಲ್ಲಿ ಇರಲ್ಲ. ಕತೆ, ಸಂಭಾಷಣೆಗಳೂ ನೈಜ ಘಟನೆಗಳನ್ನೇ ಆಧರಿಸಿದೆ.

- ಮಂಸೋರೆ