ನಟಿ ತಾರಾ ತಾಯಿ 76 ವರ್ಷದ ಪುಷ್ಪ ಟಿ ನಿಧನ ಶೂಟಿಂಗ್‌ ವೇಳೆ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆ ದಾಖಲು  ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನಲ್ಲಿ ನಿಧನ

ಮೈಸೂರು(ಏ.27): ಕನ್ನಡ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟಿ ತಾರಾ ಅವರ ತಾಯಿ ಇಂದು(ಏ.27) ನಿಧನರಾಗಿದ್ದಾರೆ. 76 ವರ್ಷದ ಪುಷ್ಪ ಟಿ ಆರೋಗ್ಯದಲ್ಲಿ ದಿಡೀರ್ ಏರುಪೇರಾದ ಕಾರಣ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧರಾಗಿದ್ದಾರೆ.

ನಟಿ ತಾರಾ ಅವರ ಜೊತೆ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್‌ನಲ್ಲಿ ಪುಷ್ಟ ಟಿ ಪಾಲ್ಗೊಂಡಿದ್ದರು. ಈ ವೇಳೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಪುಷ್ಪಾ ಟಿ ನಿಧನರಾಗಿದ್ದಾರೆ.

ತಾರಾ ಅವರ ಮೂಲ ಹೆಸರು ಅನುರಾಧ. ಆದರೆ ತಾರಾ ಎಂದೇ ಕರ್ನಾಟಕದ ಮನೆ ಮಾತಾಗಿದ್ದಾರೆ. 1986ರಲ್ಲಿ ತುಳಸಿದಳ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ತಾರಾ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ನಾಯಕಿಯಾಗಿ, ಹಿರಿಯ ಪಾತ್ರಧಾರಿಯಾಗಿ, ವಿಭಿನ್ನ ಪಾತ್ರಗಳ ಮೂಲಕ ತಾರಾ ಮನಗೆದ್ದಿದ್ದಾರೆ. ತಾರಾ ಸಾಧನೆಗೆ ಅವರ ತಾಯಿ ಪುಷ್ಪಾ ಟಿ ಸದಾ ಬೆನ್ನೆಲುಬಾಗಿದ್ದರು. ತಾರಾ ಪ್ರತಿ ಶೂಟಿಂಗ್ ವೇಳೆ ಖುದ್ದು ಹಾಜರಿದ್ದು ಅವರಿಗೆ ಧೈರ್ಯ ನೀಡುತ್ತಿದ್ದರು.