ಪ್ರೇಮ್ ಮತ್ತು ಸುದೀಪ್ ಯಾವಾ ಒಂದಾಗ್ತಾರೆ..? ಇವರಿಬ್ಬರ ಕಾಂಬಿನೇಷನ್‌ನಲ್ಲಿ ರೆಡಿಯಾದ ಸಿನಿಮಾ ನೋಡೋದ್ಯಾವಾಗ ಅನ್ನೋ ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅದೂ ಕಿಚ್ಚನ ಬರ್ತ್‌ಡೇ ದಿನ ಅನ್ನೋದು ವಿಶೇಷ.

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ಗೆ ಖ್ಯಾತ ನಿರ್ದೇಶಕ ಪ್ರೇಮ್ ಕೊಟ್ಟ ಬರ್ತ್‌ಡೇ ಗಿಫ್ಟ್ ಏನು ಗೊತ್ತಾ..? ಕಿಚ್ಚನಿಗೆ ಮಾತ್ರವಲ್ಲ, ಇದು ಸಿನಿಪ್ರಿಯರಿಗೆಲ್ಲ ಕೊಟ್ಟ ಬಂಪರ್ ಗಿಫ್ಟ್.

ಬರ್ತ್‌ಡೇ ದಿನ ಕಿಚ್ಚ ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡ್ತಿದ್ದಾರೆ ಅಪ್ಪು..!

ಎಲ್ಲರೂ ನನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಕೇಳ್ತಾ ಯಾವಾಗ ಕಿಚ್ಚ ಸುದೀಪ್ ಜೊತೆ ಕೆಲ್ಸ ಮಾಡ್ತೀನಿ ಅಂತ ಕೇಳ್ತಾ ಇದ್ರು. ಸುದೀಫ್ ಬರ್ತ್‌ಡೇ ದಿನ ನನ್ನ ನೆಕ್ಸ್ಟ್‌ ಪ್ರಾಜೆಕ್ಟ್ ಅವರ ಜೊತೆ ಮಾಡ್ತಿದ್ದೀನಿ ಅನ್ನೋದನ್ನು ಹೇಳ್ತಾ ಇದ್ದೇನೆ. ಅದೂ ಇದುವರೆಗೂ ನೀವು ಕಾಣದ ಅವತಾರದಲ್ಲಿ. ವನ್ಸ್ ಎಗೈನ್ ಹ್ಯಾಪಿ ಬರ್ತ್‌ಡೇ ಎಂದು ಸ್ಯಾಂಡಲ್‌ವುಡ್ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ರಿಲೀಸ್ ಆಯ್ತು ಕೋಟಿಗೊಬ್ಬ 3 ಟೀಸರ್; ನೋಡಿ ಕಣ್ತುಂಬಿಕೊಳ್ಳಿ ಕಿಚ್ಚನ ಖದರ್!

ಇನ್‌ಸ್ಟಾಗ್ರಾಂನಲ್ಲಿ ಕಿಚ್ಚನ ಜೊತೆಗಿನ ಫೋಟೋ ಶೇರ್ ಮಾಡಿಕೊಂಡ ಪ್ರೇಮ್ ಈ ಸಿಹಿ ಸುದ್ದಿಯನ್ನು ಸ್ಯಾಂಡಲ್‌ವುಡ್ ಪ್ರಿಯರ ಜೊತೆ ಹಂಚಿಕೊಂಡಿದ್ದಾರೆ. ಸಿನಿಮಾ ಹೆಸರೇನು..? ಬಜೆಟ್ ಎಷ್ಟು..? ಯಾರು ನಿರ್ಮಿಸ್ತಾರೆ, ಏನು ಕಥೆ, ಸಂಗೀತ ಯಾರದ್ದು, ಮುಖ್ಯವಾಗಿ ಹೀರೊಯಿನ್ ಯಾರು ಅನ್ನೋ ವಿಚಾರಗಳೆಲ್ಲ ಇನ್ನೂ ಡಿಸೈಡ್ ಆಗಿಲ್ಲ.

ಸುದೀಪ್‌ 47ನೇ ವರ್ಷದ ಹುಟ್ಟುಹಬ್ಬ ಸಂದರ್ಭದಲ್ಲಿಯೇ ಕೋಟಿಗೊಬ್ಬ 3 ಟೀಸರ್‌ ರಿಲೀಸ್ ಮಾಡಲಾಗಿದ್ದು ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಇನ್ನು ಕಿಚ್ಚ ಸುದೀಪ್ ಅವರ ಬಯೋಗ್ರಫಿಯೂ ಬಿಡುಗಡೆಯಾಗುತ್ತಿದ್ದು, ಬರ್ತ್‌ಡೇಗೆ ತ್ರಿಬಲ್ ಧಮಾಕಾ ಸಿಕ್ಕಂತಾಗಿದೆ.