ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಇಂದು 47ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದರ ಪ್ರಯುಕ್ತ ಕೋಟಿಗೊಬ್ಬ 3 ಟೀಸರ್‌ ರಿಲೀಸ್ ಮಾಡಲಾಗಿದೆ. ಸಿಕ್ಕಾಪಟ್ಟೆ ಕಾಮಿಡಿ ಆಲ್ವೇಸ್‌ ಬಿ ಹ್ಯಾಪಿ ಅಂತ ಹೇಳುವ ಟೀಸರ್‌ ವೀಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಮಧ್ಯರಾತ್ರಿ ಕಿಚ್ಚನ ಮನೆ ಬಳಿ ಬಂದವರಿಗೆ ಲಾಠಿ ರುಚಿ..!

ಆನಂದ್ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆದ ಟೀಸರ್‌ ಕೆಲವೇ ನಿಮಿಷಗಳಲ್ಲಿ ಟ್ರೆಂಡ್‌ನಲ್ಲಿ ಲಿಸ್ಟ್ ಸೇರಿದೆ. ಅದರಲ್ಲೂ ಟೀಸರ್‌ನಲ್ಲಿ ಬ್ಯಾಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿರುವ 'ಟಚ್‌ ಆದ್ರೆ ಬೈಕೋಬೇಡಿ ಸಾರಿ' ಹಾಡು ತುಂಬಾನೇ ಕ್ರಿಯೇಟಿವ್ ಅಗಿ ಮೂಡಿ ಬಂದಿದೆ.

 

ಮಾಸ್‌ ಆಂಡ್‌ ಕ್ಲಾಸ್‌ ಆಗಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್‌ ಜೊತೆ ರವಿಶಂಕರ್, ನವಾಬ್‌ ಶಾ, ಮಡೋನ ಸೆಬಾಸ್ಟಿಯನ್, ಶ್ರದ್ಧಾ ದಾಸ್‌, ಶಿವದಾಸಾನಿ ಹಾಗೂ ತಬಲ ನಾಣಿ ಕಾಣಿಸಿಕೊಂಡಿದ್ದಾರೆ. ಸೂರಪ್ಪ ಬಾಬು ನಿರ್ಮಾಣ, ಶಿವಕಾರ್ತಿಕ್  ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮಾಡಿದ್ದಾರೆ.  

ಹ್ಯಾಪಿ ಬರ್ತಡೇ ಕಿಚ್ಚ ಸುದೀಪ್; 'ಕೋಟಿಗೊಬ್ಬ' 3 ಟೀಸರ್‌ ರಿಲೀಸ್‌!

ಈ ಹಿಂದೆ ಯುಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾದ  ಮೊದಲ ಹಾಡು ಕೆಲವೇ ದಿನಗಳಲ್ಲಿ 5.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಬರ್ತಡೇಯನ್ನು  ಸಂಭ್ರಮಿಸುತ್ತಿರುವ ಅಭಿಮಾನಿಗಳು ಈ ಟೀಸರ್‌ ದಾಖಲೆ ಮಾಡಿಸುವುದರಲ್ಲಿ ಅನುಮಾನವಿಲ್ಲ.