ಬೆಂಗಳೂರು(ಜ.24): ಸ್ಯಾಂಡಲ್‌ವುಡ್ ಹೆಸರಾಂತ ನಿರ್ದೇಶಕ ಎಂ.ಶಿವಕುಮಾರ್ ಇಂದು ಬೈಕ್‌ ಆಪಘಾತದಿಂದ  ವಿಧಿವಶರಾಗಿದ್ದಾರೆ. 

ನಿನ್ನ 4.30 ರ ಹೊತ್ತಿಗೆ ಸುಮನ ಹಳ್ಳಿ ಸಿಗ್ನಲ್‌ ಬಳಿ ಶಿವಕುಮಾರ್ ಅವರ ಬುಲೆಟ್,  ಬಸ್‌ಗೆ ಡಿಕ್ಕಿ ಹೊಡೆದು ಶಿವಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಬಿಎಂಟಿಸಿ ಚಾಲಕ ರಾಜೇಂದ್ರ ಎಂಬುವವರನ್ನು ಬಂಧಿಸಲಾಗಿದೆ.  

ಕನ್ನಡ ಚಿತ್ರರಂಗದ ಖ್ಯಾತ ಮೇಕಪ್‌ ಆರ್ಟಿಸ್ಟ್‌ ಕೃಷ್ಣ ಇನ್ನಿಲ್ಲ!

ಶಿವಕುಮಾರ್ ಅವರು ಬಿಡ್ಲ್ಯೂಎಸ್‌ ಎಸ್‌ಬಿ ಗುತ್ತಿಗೆದಾರರಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ  ಗುರುವಾರ ಸಂಜೆ ಮಾಳಗಾಳದ ಸರ್ವೀಸ್‌ ರಸ್ತೆ ಮಾರ್ಗವಾಗಿ ಬಂದಿದ್ದ ರಾಜೇಂದ್ರ ಅವರು ಸ್ನೇಹಿತರೊಬ್ಬರಿಗೆ ಸುಮ್ಮನಹಳ್ಳಿ ಜಂಕ್ಷನ್‌ ಕಡೆ ಬಳಿ ಕಾಯುತ್ತಾ ನಿಂತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ವೇಗವಾಗಿ ಬಂದ ಬನಶಂಕರಿಯಿಂದ ಯಶವಂತಪುರ ಕಡೆ ಹೋಗುವ ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ. 

ಅಭಿಮಾನಿಗೆ ಮಾತೃ ವಿಯೋಗ: ಫ್ಯಾನ್‌ ಮನೆಗೆ ಶಿವರಾಜ್ ಕುಮಾರ್ ಭೇಟಿ!

ಶಿವಕುಮಾರ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.  ಆನಂತರ ಮಳವಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸಹೋದರ ಜಯರಾಮ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.