ಬೆಂಗಳೂರು (ಜ.13):  ಕನ್ನಡ ಚಿತ್ರರಂಗದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಿಗೆ ಮೇಕಪ್ ಮ್ಯಾನ್‌ ಅಗಿ ಕಾರ್ಯ ನಿರ್ವಹಿಸಿದ್ದ ಕೃಷ್ಣ ಅವರು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ.

ಕೃಷ್ಣ ಅವರಿಗೆ 55 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 

ಹಿರಿಯ ಸಾಹಿತಿ ಚಿದಾನಂದ ಮೂರ್ತಿ ಇನ್ನಿಲ್ಲ

ಕೃಷ್ಣ ಅವರು ಬಾಲಿವುಡ್‌ ಕಲಾವಿದರಿಗೂ ಮೇಕಪ್‌ ಮಾಡಿ ತಮ್ಮ ಅದ್ಭುತ ಕಲೆಗೆ ಸೈ ಎನಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ರಾಜ್‌ ಕುಟುಂಬಕ್ಕೂ ತುಂಬಾ ಹತ್ತಿರವಾಗಿದ್ದರು ಕೃಷ್ಣ. ದೂರದರ್ಶನದಲ್ಲಿ ಡಾ.ರಾಜ್‌ಕುಮಾರ್ ಅವರ ಸಂದರ್ಶನ ಮಾಡಿದ್ದು, ಆ ಕಾಲದಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಚಿತ್ರರಂಗದಲ್ಲಿ ಇವರು 'ಮೇಕಪ್ ಕೃಷ್ಣ' ಅಂತಾನೇ ಫೇಮಸ್ ಆಗಿದ್ದರು.