Asianet Suvarna News Asianet Suvarna News

ಮಂದಣ್ಣ ಹೋದ್ರು, ಮಂದಾನ ಬಂದ್ರು, ಇಷ್ಟೇ ಲೈಫ್; ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಪೋಸ್ಟ್ ವೈರಲ್

ಸ್ಮೃತಿ ಮಂದಾನ ಆರ್ ಸಿ ಬೆಗೆ ಬಂದ ಬೆನ್ನಲ್ಲೇ ಚಿತ್ರಸಾಹಿತಿ  ಕವಿರಾಜ್ ಮಾಡಿದ ಪೋಸ್ಟ್ ವೈರಲ್ ಆಗಿದೆ. 

sandalwood director and lyricist Kaviraj about Smriti Mandhana coming to RCB sgk
Author
First Published Feb 15, 2023, 4:43 PM IST

ಇದೇ ಮೊದಲ ಬಾರಿಗೆ  ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಇತ್ತೀಚಿಗಷ್ಟೆ ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಖ್ಯಾತ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಆರ್‌ಸಿಬಿ ಪಾಲಾಗಿದ್ದಾರೆ. 3.4 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿದೆ. ಸ್ಮೃತಿ ಮಂದಾನ ಖರೀದಿಗೆ RCB ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಸ್ಮೃತಿ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.

ಸ್ಮೃತಿ ಮಂದಾನ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಮೃತಿ ಪೋಟೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಈ ಬಗ್ಗೆ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ಕವಿರಾಜ್ ನಟಿ ರಶ್ಮಿಕಾ ಮಂದಣ್ಣ ಕಾಲೆಳೆದು ಸ್ಮೃತಿ ಮಂದಾನರನ್ನು ಸ್ವಾಗತಿಸಿದ್ದಾರೆ. ಕವಿರಾಜ್ ಬರೆದ ಸಾಲುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕವಿರಾಜ್ ಆರ್‌ಸಿಬಿಯ ಡೈ ಹಾರ್ಟ್ ಫ್ಯಾನ್. ಇದೀಗ ಮಹಿಳಾ ತಂಡ ಕೂಡ ಅಖಾಡಕ್ಕೆ ಇಳಿದಿರುವುದು ಕವಿರಾಜ್ ಅವರಿಗೆ ಮತ್ತಷ್ಟು ಸಂತಸ ತಂದಿದೆ. ಅದರಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳ ಹೊಂದಿರುವ ಸ್ಮೃತಿ ಮಂದಾನ ಆರ್ ಸಿಬಿಗೆ ಬಂದಿರುವುದು ಖುಷಿ ಮತ್ತಷ್ಟು ಹೆಚ್ಚಾಗಿದೆ. ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಕವಿರಾಜ್  'ಮಂದಣ್ಣ ಹೋದ್ರು, ಮಂದಾನ ಬಂದಿದ್ದಾರೆ' ಎಂದು ಹೇಳಿದ್ದಾರೆ. 

WPL Auction ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಕನ್ನಡದಲ್ಲಿ ಸ್ಮೃತಿ ಮಂಧಾನ ಸಂದೇಶ!

'ಮಂದಣ್ಣ ಹೋದ್ರು. ಮಂದಾನ ಬಂದ್ರು. ಇಷ್ಟೇ ಲೈಫ್. ಕಳ್ಕೊಂಡಾಗ ಕುಗ್ಗಬಾರದು' ಎಂದು ಹೇಳಿದ್ದಾರೆ. ಜೀವನ ಪ್ರತಿಯೊಬ್ಬರಿಗೂ ಉತ್ತಮ ಆಫರ್ ನೀಡುತ್ತದೆ' ಎಂದು ಹೇಳಿದ್ದಾರೆ. ಜೊತೆಗೆ 'ಕೇವಲ ತಮಾಷೆಗಾಗಿ. ಏನೇ ಆದರೂ ಮಂದಣ್ಣ ಅವರ ಸಾಧನೆಯೂ ದೊಡ್ಡದು. ನೆಗೆಟಿವ್ ಕಾಮೆಂಟ್ ಗಳಿಗೆ ಅವಕಾಶವಿಲ್ಲ ಎಂದು ಸಹ ವಿವರಿಸಿದ್ದಾರೆ. ಕವಿರಾಜ್ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಮಂದಾನ ಅವರನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.

ಕನ್ನಡ ಹಾಡಿಗೆ ಜಾಮಿಂಗ್ ಮಾಡೋಕೆ ಬಂದ ಹಿಂದಿ ಗಾಯಕ; ಚಿತ್ರರಂಗದ ರೇಂಜ್‌ ಬಗ್ಗೆ ಕವಿರಾಜ್ ಮಾತು

ನೆಟ್ಟಿಗರ ಕಾಮೆಂಟ್ 

ಆರ್ ಸಿ ಬಿ ಕಾಮನ್ ಟ್ಯಾಗ್ 'ಈ ಸಲ್ ಕಮ್ ನಮ್ದೆ' ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು, 'ಪುರುಷರಂತ ಇದುವರೆಗೂ ಕಪ್ ಗೆದ್ದಿಲ್ಲ ಮಹಿಳೆಯರಾದ್ರು ಗೆಲ್ಲಲಿ' ಎಂದು ಹೇಳುತ್ತಿದ್ದಾರೆ. 'ಮಂದಣ್ಣ ಹೋಗುವಾಗ ಹೇಳಿದ್ಲಂತೆ ಬ್ರೋ.. ನನಗಿಂತ ಚೆನ್ನಾಗಿರೋರು ಬರ್ತಾರೆ ಬಿಡು ಅಂತ' ಎಂದು ಕಾಮೆಂಟ್ ಮಾಡಿ ರಶ್ಮಿಕಾ ಕಾಲೆಳೆಯುತ್ತಿದ್ದಾರೆ.

Follow Us:
Download App:
  • android
  • ios