ಸ್ಯಾಂಡಲ್‌ವುಡ್ ಕ್ರಿಕೆಟ್ ಹಬ್ಬ, ನ.28ರಿಂದ 6ನೇ ಆವೃತ್ತಿ ಡಾ.ರಾಜ್ ಕಪ್ ಆರಂಭ!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಇದರ ನಡುವೆ ಕರ್ನಾಟಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗುತ್ತಿದೆ. ಕಾರಣ ನವೆಂಬರ್ 28 ರಿಂದ 6ನೇ ಆವೃತ್ತಿ ಡಾ.ರಾಜ್ ಕಪ್ ಆರಂಭಗೊಳ್ಳುತ್ತಿದೆ.

ಬೆಂಗಳೂರು(ಅ.30) ಸ್ಯಾಂಡಲ್ ವುಡ್ ನಲ್ಲಿಯೂ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗುತ್ತಿದೆ. ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದೆ. ಇದಕ್ಕಾಗಿ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಕ್ರಿಕೆಟ್ ಪಂದ್ಯಾವಳಿ ಕುರಿತು ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ ಸೇರಿದಂತೆ ಸೇರಿದಂತೆ ತಂಡದ ಮಾಲೀಕರು ಪಾಲ್ಗೊಂಡಿದ್ದಾರೆ. ನವೆಂಬರ್ 28ರಿಂದ ಡಿಸೆಂಬರ್ 10ರವೆಗೆ ಡಾ.ರಾಜ್ ಕಪ್ ಸೀಸನ್-6 ನಡೆಯುತ್ತಿದ್ದು, ಸ್ಥಳ ಹಾಗೂ ತಂಡದ ಓನರ್ ಹಾಗೂ ಇನ್ನಿತರ ಅಪ್ ಡೇಟ್ ಬಗ್ಗೆ ರಾಜೇಶ್ ಬ್ರಹ್ಮಾವರ ಮಾಹಿತಿ ನೀಡಿದರು.
ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, ಇಷ್ಟು ವರ್ಷ ನಡೆದಿದ್ದ ರಾಜ್ ಕಪ್ ಬೇರೆ. ಈ ವರ್ಷ ಆಗುತ್ತಿರುವುದೇ ಬೇರೆ. ಇದಕ್ಕೆ ಕಾರಣ ಆನಂದ್ ಆಡಿಯೋ.. ಎಂಟರ್ ಟೈನ್ಮೆಂಟ್ ನಲ್ಲಿ ಪರ್ಮಿಷನ್ ಸಿಗದೇ ಇದಿದ್ದಕ್ಕೆ ರಾಜ್ ಕಪ್ ಗೆ ತೊಂದರೆ ಆಗಬಾರದು ಎಂದು ಸ್ಪೋರ್ಟ್ ಚಾನೆಲ್ ಮಾಡಿ ಲೈವ್ ಮಾಡುತ್ತಿದ್ದಾರೆ. ಎಲ್ಲಾ ರೀತಿಯಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ. ರಾಜ್ ಕಪ್ ಸಂಸ್ಥಾಪಕರಾದ ಎಲ್ಲರೂ ಬೆಂಬಲ ಕೊಡುತ್ತಿದ್ದಾರೆ. ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿ. 3 ಮತ್ತು 4 ಸಿಂಗಾಪಿರ್, ಡಿ. 7 ಮತ್ತು 8 ಮಸ್ಕತ್ ನಲ್ಲಿ ಲೀಗ್ ಮ್ಯಾಚ್, ಫೈನಲ್ ಕರ್ನಾಟಕದಲ್ಲಿ ಮಾಡುತ್ತೇವೆ. ಇನ್ನೂ ದುಬೈನಲ್ಲಿ ಲೈವ್ ಕಾಯುತ್ತಿದ್ದೇವೆ. ಅಲ್ಲಿ ಸಿಕ್ಕಿದ್ರೆ ಮಾಡುತ್ತೇವೆ ಎಂದರು.
ಈಗಲೂ ನಿಮ್ ಮೇಲೆ ಲವ್ವಾಗುತ್ತೆ; ಹೊಸ ಲುಕ್‌ನಲ್ಲಿರುವ ನಟಿ ಯಾರು ಗೆಸ್ ಮಾಡಿ?
ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿದೆ. ಸಮೃದ್ದಿ ಫೈಟರ್ಸ್ ತಂಡಕ್ಕೆ ಸಮೃದ್ಧಿ ಮಂಜುನಾಥ್ ಓನರ್ ಆಗಿದ್ದು, DX ಮ್ಯಾಕ್ಸ್ ಲೈನ್ಸ್ ತಂಡಕ್ಕೆ ದಯಾನಂದ್ ಓನರ್, ರಾಮನಗರ ರಾಕರ್ಸ್ ತಂಡಕ್ಕೆ ಮಹೇಶ್ ಗೌಡ ಓನರ್, ELV ಲಯನ್ ಕಿಂಗ್ಸ್ ತಂಡಕ್ಕೆ ಪುರುಷೋತ್ತಮ್ ಭಾಸ್ಕರ್ ಓನರ್, AVR ಟಸ್ಕರ್ಸ್ ತಂಡಕ್ಕೆ ಅರವಿಂದ್ ರೆಡ್ಡಿ ಓನರ್, KKR ಕಿಂಗ್ಸ್ ತಂಡಕ್ಕೆ ಲಕ್ಷ್ಮೀ ಕಾಂತ್ ರೆಡ್ಡಿ ಓನರ್, Rabit ರೇಸರ್ಸ್ ತಂಡಕ್ಕೆ ಅರು ಗೌಡ ಓನರ್, ಮಯೂರ ರಾಯಲ್ಸ್ ತಂಡಕ್ಕೆ ಸೆಂಥಿಲ್ ಓನರ್, ರಾಯಲ್ ಕಿಂಗ್ಸ್ ತಂಡಕ್ಕೆ ಶ್ರೀರಾಮ್ ಮತ್ತು ಮುಖೇಶ್ ಓನರ್, ಕ್ರಿಕೆಟ್ ನಕ್ಷತ್ರ ತಂಡಕ್ಕೆ ನಕ್ಷತ್ರ ಮಂಜು ಓನರ್, ಅಶು ಸೂರ್ಯ ಸೂಪರ್ ಸ್ಟಾರ್ ತಂಡಕ್ಕೆ ರಂಜಿತ್ ಪಯಾಜ್ ಖಾನ್ ಓನರ್ ಹಾಗೂ ರುಚಿರಾ ರೇಂಜರ್ಸ್ ತಂಡಕ್ಕೆ ರಾಮ್ ಒಡೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ ಮಸ್ಕತ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಫ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ. ಡಾ,ರಾಜ್ ಕಪ್ ಗಾಗಿ ಆನಂದ್ ಆಡಿಯೋ ಹೊಸ ಹೆಜ್ಜೆ ಇಟ್ಟಿದ್ದು, ಈ ಪಂದ್ಯಾವಳಿಗಾಗಿ ಸ್ಪೋರ್ಟ್ ಯೂಟ್ಯೂಬ್ ಪ್ರಾರಂಭ ಮಾಡ್ತಿದ್ದು, ಲೈವ್ ಮ್ಯಾಚ್ ಗಳನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.
ಜೀನ್ಸ್ ಟಾಪ್ನಲ್ಲಿ ಸೆಕ್ಸಿಯಾಗಿ ಮಿಂಚಿದ Pranitha: ಮಮ್ಮಿಯಾದ್ರೂ ನೀವು ಹಾಟ್ ಫಿಗರ್ ಎಂದ ಫ್ಯಾನ್ಸ್!