ಚಿತ್ರದಲ್ಲಿನ ಅಭಿನಯಕ್ಕಾಗಿ ನಾಯಕಿ ಪಾವನಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಪೋಸ್ಟರ್‌ ಪ್ರಶಸ್ತಿಯೂ ‘ರುದ್ರಿ’ ಪಾಲಾಗಿದೆ.

ವಾರಗಳ ಹಿಂದೆಯೇ ಇಟಲಿ ಒನಿರೋಸ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡವನ್ನು ಪ್ರತಿನಿಧಿಸಿದ್ದ ‘ರುದ್ರಿ’ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಸ್ಟರ್‌ ಹಾಗೂ ಮೊದಲ ಅತ್ಯುತ್ತಮ ನಿರ್ದೇಶಕ ಎನ್ನುವ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮಿನೇಟ್‌ ಆಗಿತ್ತು. ಈ ಪೈಕಿ ಈಗ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಪೋಸ್ಟರ್‌ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿದ್ದನ್ನು ಚಿತ್ರದ ನಿರ್ದೇಶಕ ಬಡಿಗೇರ್‌ ದೇವೇಂದ್ರ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಹೊಸ ಫಸಲು: ಸದ್ದಿಲ್ಲದೇ ಸುದ್ದಿಯಲ್ಲಿರುವ ಪಾವನಾ!

‘ಎರಡು ವಿಭಾಗಗಳಲ್ಲಿ ಪ್ರಶಸ್ತಿ ಬಂದಿದೆ. ಸಹಜವಾಗಿಯೇ ನಮ್ಮ ಖುಷಿ ದುಪ್ಪಟ್ಟಾಗಿದೆ. ಇಷ್ಟೇ ಮೆಚ್ಚುಗೆ ಪ್ರೇಕ್ಷಕರಿಂದಲೂ ಸಿಕ್ಕರೆ ಶ್ರಮ ಸಾರ್ಥಕವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಬಡಿಗೇರ್‌ ದೇವೇಂದ್ರ. ಈ ಚಿತ್ರದ ನಿರ್ಮಾಣಕ್ಕೆ ಸಿ.ಆರ್‌. ಮಂಜುನಾಥ್‌ ಬಂಡವಾಳ ಹೂಡಿದ್ದಾರೆ.