ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಇದೇ ಡಿಸಂಬರ್ 27 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಪಂಚಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು ಭಾರೀ ನಿರೀಕ್ಷಿ ಮೂಡಿಸಿದೆ. 

ಅವನೇ ಶ್ರೀಮನ್ನಾರಾಯಣ ಸಿಗ್ನೇಚರ್ ಸ್ಟೆಪ್ ಸ್ಟೆಪ್ 'ಹ್ಯಾಂಡ್ಸ್ ಅಪ್' ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಶಾನ್ವಿ ಶ್ರೀವಾಸ್ತವ್ 'ಹ್ಯಾಂಡ್ಸ್ ಅಪ್' ಸ್ಟೆಪ್ ಹಾಕಿ ಬೇರೆಯವರಿಗೆ ಖೋ ಕೊಟ್ಟಿದ್ದಾರೆ. ಇದಕ್ಕೆ  ಸೆಲಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ರಕ್ಷಿತ್ ಶೆಟ್ಟಿ ಲೈಫಲ್ಲಿ ಬಂದ್ಲು ಮತ್ತೊಂದು ಸುಂದರಿ; ಫ್ಯಾನ್ಸ್ ರಿವೀಲ್‌ ಮಾಡಿದ್ರು ಲವ್ ಕಹಾನಿ!

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 'ಅವನೇ ಶ್ರೀಮನ್ನಾರಾಯಣ' ತೆರೆಗೆ ಬರುತ್ತಿದೆ. ಟೀಸರ್, ಪೋಸ್ಟರ್‌ನಿಂದ ಸಾಕಷ್ಟು ಗಮನ ಸೆಳೆದಿದ್ದು ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  ಈಗಾಗಲೇ ಪ್ರಮೋಶನ್ ಜೋರಾಗಿ ನಡೆಯುತ್ತಿದೆ. ಕ್ಯಾಶ್ ಪ್ರೈಸ್ ಚಾಲೆಂಜ್, ರೈಲಿನಲ್ಲಿ ಪೋಸ್ಟರ್ ಪ್ರಮೋಶನ್ ಜೋರಾಗಿದೆ. 

ಶಾನ್ವಿ ಶ್ರೀವಾಸ್ತವ್ 'ಹ್ಯಾಂಡ್ಸ್ ಅಪ್' ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿ ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ #HandsUpChallenge ಎಂಬ ಟ್ಯಾಗ್ ಹಾಕಿ ರಕ್ಷಿತ್ ಶೆಟ್ಟಿ, ಆಕಾಂಕ್ಷ ಸಿಂಗ್, ಆಶಿಕಾ ರಂಗನಾಥ್, ಮನೋರಂಜನ, ವಿಕ್ರಂ ರವಿಚಂದ್ರನ್‌ಗೆ ಚಾಲೆಂಜ್ ನೀಡಿದ್ದರು. 

ಹೆಸರು ಬದಲಾಯಿಸಿಕೊಂಡ ಶಾನ್ವಿ ಶ್ರೀವಾಸ್ತವ್; ಇದಕ್ಕೆ 'ಅವನೇ' ಕಾರಣ!

ಇದಕ್ಕೆ ಅವರ ಪ್ರತಿಕ್ರಿಯೆ ಹೀಗಿದೆ. 

 

 
 
 
 
 
 
 
 
 
 
 
 
 

Haha damn cute !!! Any one would handsup with this! 😘😘 #handsupsongchallenge #ASN @asmita_s

A post shared by Lakshmi from Amaravathi... (@shanvisri) on Dec 16, 2019 at 8:50am PST