ರಕ್ಷಿತ್ ಶೆಟ್ಟಿ - ಶಾನ್ವಿ ಶ್ರೀವಾಸ್ತವ್ ಕಾಂಬಿನೇಶನ್‌ನಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಇದೇ ಡಿ. 27 ರಂದು ತೆರೆಗೆ ಬರಲು ಸಿದ್ಧವಾಗಿದೆ. 

'ರಾಬರ್ಟ್‌' ಆಗಿ ಕಾಶಿಗೆ ಹೊರಟ 'ಒಡೆಯ'!

ಶಾನ್ವಿ - ರಕ್ಷಿತ್ ಶೆಟ್ಟಿ ಕಾಂಬಿನೇಶನ್‌ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.  ಶಾನ್ವಿ ಈ ಸಿನಿಮಾದಲ್ಲಿ 'ಲಕ್ಷ್ಮೀ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರದ ಹೆಸರನ್ನೇ ಟ್ವಿಟರ್‌ನಲ್ಲಿ ಇಟ್ಟುಕೊಂಡಿದ್ದಾರೆ. ಟ್ವಿಟರ್ ಖಾತೆಯಲ್ಲಿ 'Lakshmi from Amaravathi' ಎಂದು ಬದಲಾಯಿಸಿಕೊಂಡಿದ್ದಾರೆ. 

ಅಯ್ಯೋ! ರಶ್ಮಿಕಾನ ಬಿಡ್ರಿ, ಈಗ ಲಿಸ್ಟ್‌ಗೆ ಜಾಹ್ನವಿ ಕಪೂರ್ ಸೇರಿಕೊಂಡಿದ್ದಾರೆ!

ಸಿನಿಮಾ ಸೆಲಬ್ರಿಟಿಗಳು ಈ ರೀತಿ ಹೆಸರನ್ನು ಬದಲಾಯಿಸಿಕೊಳ್ಳೋದು ಹೊಸದೇನಲ್ಲ.  ದಬಾಂಗ್- 3 ರಿಲೀಸ್ ಡೇಟ್ ಅನೌನ್ಸ್ ಆದಾಗ ಸಲ್ಮಾನ್ ಖಾನ್ ತಮ್ಮ ಹೆಸರನ್ನು ಚುಲ್‌ ಬುಲ್ ಪಾಂಡೆ ಎಂದು ಬದಲಾಯಿಸಿಕೊಂಡಿದ್ದರು. 

 

ಅವನೇ ಶ್ರೀಮನ್ನಾರಾಯಣ ಡಿ. 27 ರಂದು ತೆರೆಗೆ ಬರಲಿದೆ. ಈಗಾಗಲೇ ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. ಪ್ರಮೋಶನ್‌ಗಾಗಿ ಕ್ಯಾಶ್ ಪ್ರೈಸ್ ಸ್ಪರ್ಧೆ ಏರ್ಪಡಿಸಿದೆ. ರೈಲಿನಲ್ಲಿ ಪೋಸ್ಟರ್ ಪ್ರಮೋಶನ್ ಮಾಡಿದೆ.