ರಕ್ಷಿತ್ ಶೆಟ್ಟಿ- ಶಾನ್ವಿ ಶ್ರೀವಾಸ್ತವ್ 'ಅವನೇ ಶ್ರೀಮನ್ನಾರಾಮಯಣ' ಸಿನಿಮಾದಲ್ಲಿ ಶಾನ್ವಿ- ರಕ್ಷಿತ್ ಶೆಟ್ಟಿ ನಟನೆಯನ್ನು ನೋಡಿದ ಅಭಿಮಾನಿಗಳು ತೆರೆ ಮೇಲೆ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಇಬ್ಬರದ್ದೂ ಕ್ಯೂಟ್ ಪೇರ್ ಎಂದು ಹೇಳುತ್ತಿದ್ದಾರೆ. 

ಹೊರಟ ಸುಂದರಿಗೆ ಮುತ್ತಿನ ಹಾರ, ದಿನರಾತ್ರಿ ದೀಪಿಕಾಗೆ ಕಾಟ ಕೋಡೋರ್ಯಾರ?

 ರಕ್ಷಿತ್ ಶೆಟ್ಟಿ- ಶಾನ್ವಿ ಜೋಡಿ ಅವನೇ ಶ್ರೀಮನ್ನಾರಾಯಣದಲ್ಲಿ ಕಮಾಲ್ ಮಾಡುವುದರಲ್ಲಿ ಅನುಮಾನವೇ ಬೇಡ. ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗುತ್ತೆ ಅಂತ ಹೇಳಲಾಗಿದೆ. ಹಾಗಾಗಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

 

ರಕ್ಷಿತ್- ಶಾನ್ವಿ ಒಳ್ಳೆಯ ಸ್ನೇಹಿತರು.  ಡಿಸಂಬರ್ 08 ರಂದು ಶಾನ್ವಿ ಹುಟ್ಟುಹಬ್ಬಕ್ಕೆ ರಕ್ಷಿತ್ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. 'ಇಷ್ಟು ದಿನ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಕಂಡಂತೆ ನೀನೊಬ್ಬ ಒಳ್ಳೆಯ ಸಹನಟಿ ಎಂದಷ್ಟೇ ಹೇಳಲು ಸಾಧ್ಯವಿಲ್ಲ. ನನ್ನ ಕಷ್ಟ- ಸುಖಗಳಲ್ಲಿ ಎರಡು ವರ್ಷಗಳಲ್ಲಿ ಜೊತೆಗಿದ್ದ ಆತ್ಮೀಯ ಗೆಳತಿ ನೀನು. ನನ್ನ ಜೊತೆ ಸ್ನೇಹದ ಪಯಣದಲ್ಲಿ ಜೊತೆಯಾಗಿದ್ದಕ್ಕೆ ಧನ್ಯವಾದಗಳು. ಹ್ಯಾಪಿ ಬರ್ತಡೇ. ಮಚ್ ಲವ್' ಎಂದಿದ್ದಾರೆ. 

ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.  ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗುಸುಗುಸು ಶುರುವಾಗಿದೆ. ಇಬ್ಬರೂ ಮದುವೆಯಾಗಿ ಬಿಡಿ ಎಂದು ಹೇಳುತ್ತಿದ್ದಾರೆ.