Asianet Suvarna News Asianet Suvarna News

ಅಪರ್ಣಾ ನುಡಿಮುತ್ತುಗಳು ಭಾರೀ ವೈರಲ್ ಆಗ್ತಿವೆ; ಕಾಲೇಜಿನಲ್ಲಿ ಅದೆಂಥ ಮುತ್ತಿನಂಥ ಮಾತು..!

ನಿರೂಪಕಿ ಅಪರ್ಣಾ ವಸ್ತಾರೆ ಈಗ ನಮ್ಮೊಂದಿಗಿಲ್ಲ. ಆದರೆ ಕನ್ನಡ ನಾಡು ಅವರನ್ನು ಯಾವತ್ತೂ ಮರೆಯುವ ಹಾಗಿಲ್ಲ. ಅವರು ಒಮ್ಮೆ ಕಾಲೇಜು ವೇದಿಕೆಯಲ್ಲಿ ಮಕ್ಕಳ ಎದುರು ಮಾತನಾಡಿರುವ ವೀಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾ..

Aparna Vastarey talking in college video gets viral in social media srb
Author
First Published Sep 1, 2024, 7:09 PM IST | Last Updated Sep 1, 2024, 7:09 PM IST

ನಟಿ, ನಿರೂಪಕಿ ಅಪರ್ಣಾ ವಸ್ತಾರೆ (Aparna Vastarey) ಈಗ ನಮ್ಮೊಂದಿಗಿಲ್ಲ. ಆದರೆ ಕನ್ನಡ ನಾಡು ಅವರನ್ನು ಯಾವತ್ತೂ ಮರೆಯುವ ಹಾಗಿಲ್ಲ. ಅವರು ಒಮ್ಮೆ ಕಾಲೇಜು ವೇದಿಕೆಯಲ್ಲಿ ಮಕ್ಕಳ ಎದುರು ಮಾತನಾಡಿರುವ ವೀಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಪರ್ಣಾ ಆಡಿರುವ ಮಾತುಗಳನ್ನು ಬಹಳಷ್ಟು ಜನರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. 

ಅಪರ್ಣಾ ಅವರು 'ಏನೋ ಒಂದು ಹೇಗೋ ಒಂದು ಅಂತ ಎಲ್ರೂ ಬದುಕಬಹುದು, ಯಾರು ಬೇಕಾದ್ರೂ ಬದುಕಬಹುದು. ಆದ್ರೆ ಹೀಗೇ ಬದುಕಬೇಕು ಅಂತ ನಿಮಗೊಂದು ಕನಸು, ನಿಮಗೊಂದು ಚೌಕಟ್ಟು, ನಿಮಗೊಂದು ಸರಿಯಾದ ಮಾರ್ಗ, ಅದು ಸರಿನೋ ತಪ್ಪೋ ಅಂತ ಬೇರೆಯವ್ರು ಹೇಳೋದಲ್ಲ. ನಮಗೆ ನಾವೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕು. ನಮ್ಮೊಳಗೊಬ್ಬ ನಾವಿದ್ದೇವೆ. ನನ್ನೊಳಗೆ ನಾನಿದ್ದೀನಿ. ಅದನ್ನ ಅಂತಃಸಾಕ್ಷಿ, ಆತ್ಮಸಾಕ್ಷಿ, ಅಂತಃಪ್ರಜ್ಞೆ ಅಂತೆಲ್ಲಾ ಹೇಳ್ತೀವಿ. ಅದಕ್ಕೆ ಅತ್ತರ ಸಿಗಬೇಕು. 

ಖಳನಟ ಸುಧೀರ್ ಬಗ್ಗೆ ಫ್ಯಾನ್ಸ್ ಕ್ರೇಜ್ ಹೀಗಿತ್ತು ಎಂದರೆ ಯಾರೂ ನಂಬಲಿಕ್ಕೇ ಅಸಾಧ್ಯ!

ನಮಗೆ ಅನ್ನಿಸಿದ್ದನ್ನ ಘನತೆಯಿಂದ, ಶೃದ್ಧೆಯಿಂದ, ಶಿಸ್ತಿನಿಂದ, ಅಭ್ಯಾಸದಿಂದ, ಕಲಿಕೆಯಿಂದ ನಾನು ಮಾಡೋದಾದ್ರೆ, ಅದಕ್ಕಿಂತ ಯಶಸ್ಸು, ನೆಮ್ಮದಿ, ಸಾಧನೆ ಬೇರೇನೂ ಇಲ್ಲ. ಅಂತಹ ಬದುಕು ನಿಮ್ಮೆಲ್ಲರದ್ದೂ ಆಗಲಿ ಅಂತ ನನ್ನ ಆಶಯ, ನನ್ನ ಕನಸು, ನನ್ನ ಬೇಡಿಕೆ ಹಾಗು ನನ್ನ ವಿನಂತಿ' ಎಂದಿದ್ದಾರೆ ದಿವಂಗತ ನಟಿ, ನಿರೂಪಕಿ ಅಪರ್ಣಾ ವಸ್ತಾರೆ. 

ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಬಹಳಷ್ಟು ಕಾಲ ವೇದಿಕೆಗಳಲ್ಲಿ, ಆಕಾಶವಾಣಿಯಲ್ಲಿ ಹಾಗೂ ಟಿವಿಗಳಲ್ಲಿ ಆಡಿರುವ ಮಾತುಗಳು ಯಾವತ್ತೂ ಇರುತ್ತವೆ. ಅಚ್ಚಗನ್ನಡದ ಸ್ಪಷ್ಟ ಉಚ್ಛಾರಣೆಯ ಆಂಕರ್ ಆಗಿದ್ದ ಅಪರ್ಣಾ ಅವರ ನಿರೂಪಣೆಗೆ ತಲೆದೂಗದವರಿಲ್ಲ. ಮಸಣದ ಹೂವು ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಬಳಿಕ ನಟನೆಗಿಂತ ನಿರೂಪಣೆಯಲ್ಲೇ ಹೆಚ್ಚು ಖ್ಯಾತಿ ಪಡೆದಿದ್ದರು. 

ಅವರಾಡುವ ಶುದ್ಧ ಕನ್ನಡದ ಪದಗಳು ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಯಾವುದಾದರೂ ಕಾರ್ಯಕ್ರಮದಲ್ಲಿ ಅಪರ್ಣಾ ಅವರು ನಿರೂಪಣೆ ಮಾಡುತ್ತಿದ್ದಾರೆ ಎಂದರೆ ಅಲ್ಲಿ ಬೇರೆಯದೇ ಒಂದು ಲೋಕ ಸೃಷ್ಟಿಯಾಗುತ್ತಿತ್ತು. ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು, ಹಣೆಗೆ ಬೊಟ್ಟು ಇಟ್ಟು, ತಲೆ ತುಂಬಾ ಮಲ್ಲಿಗೆ ಅಥವಾ ಕನಕಾಂಬರ ಮುಡಿದು ಬಂದು ಅಪರ್ಣಾ ವೇದಿಕೆಗೆ ಕಾಲಿಡುತ್ತಿದ್ದರು. 

ಹದ್ದುಮೀರದ ಅವರ ಅಲಂಕಾರ, ಶಿಸ್ತುಬದ್ಧ ಎನಿಸುವ ನಿರೂಪಣೆ ಹಾಗೂ ಲಕ್ಷಣವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದ ರೀತಿ ಎಂಥವರೂ ಅವರಿಗೆ ಅಭಿಮಾನಿ ಆಗುವಂತೆ ಮಾಡಿಬಿಡುತ್ತಿದ್ದವು. ಅಂಥ ಅಪರ್ಣಾ ಅವರು ಎರಡು ತಿಂಗಳುಗಳ ಹಿಂದೆ (11 July 2024) ಇಹಲೋಕ ತ್ಯಜಿಸಿಬಿಟ್ಟರು. ಅವರಿಗೆ 57 ವರ್ಷ ವಯಸ್ಸಾಗಿತ್ತು.

ನಾವು ಮಾಡೋ ಪ್ರತಿಯೊಂದು ಕೆಲ್ಸ ನಮ್ ಬಗ್ಗೆ ಪ್ರಪಂಚಕ್ಕೆ ಮೆಸೇಜ್ ಕೊಡುತ್ತೆ; ರಮೇಶ್ ಅರವಿಂದ್!

ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರೂ ಆಪ್ತರ ಹೊರತೂ ಹೊರಜಗತ್ತಿಗೆ ಹೇಳಿಕೊಳ್ಳದ ಅಪರ್ಣಾ 'ನೋವೆಲ್ಲಾ ನನಗೇ ಇರಲಿ..' ಎನ್ನುತ್ತಿದ್ದರಂತೆ. 'ಜಗವೆಲ್ಲ ನಗುತಿರಲಿ.. ಜಗದಳಲು ನನಗಿರಲಿ..' ಎಂಬ ಹಾಡಿನ ಸಾಲಿನಂತೆ ನೋವಿನಿಂದ ನರಳುತ್ತಿದ್ದರೂ ನಗುನಗುತ್ತಲೇ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಪರ್ಣಾ ಸಾವಿಗೆ ಕಂಬನಿ ಮಿಡಿಯದವರಿಲ್ಲ. 

Latest Videos
Follow Us:
Download App:
  • android
  • ios