Asianet Suvarna News Asianet Suvarna News

ಸ್ಯಾಂಡಲ್‌ವುಡ್‌ಗೂ ಬಂತು ನಂದಿ ಅವಾರ್ಡ್: ರಿಷಬ್​ ಶೆಟ್ಟಿಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ!

ತೆಲುಗು ಚಿತ್ರರಂಗದಲ್ಲಿ ನಂದಿ ಫಿಲ್ಮ್ ಅವಾರ್ಡ್ಸ್  ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಗೌರವ ಬೆಲೆ ಇದೆ. ಇದೀಗ ಇದೇ ಹೆಸರಿನಲ್ಲಿ ಸ್ಯಾಂಡಲ್ವುಡ್ನಲ್ಲೂ ನಂದಿ ಪ್ರಶಸ್ತಿ ಕೊಡಲಾಗ್ತಿದೆ. ನಂದಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮ ಕನ್ನಡ ಚಿತ್ರರಂಗದ ಹಿರಿ ಕಿರಿಯ ತಾರೆರನ್ನ ಒಂದೆಡೆ ಸೇರಿಸಿದೆ.
 

Sandalwood also got the Nandi Film Awards Here Is The List Of Winners gvd
Author
First Published Dec 8, 2023, 8:35 PM IST

ತೆಲುಗು ಚಿತ್ರರಂಗದಲ್ಲಿ ನಂದಿ ಫಿಲ್ಮ್ ಅವಾರ್ಡ್ಸ್  ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಗೌರವ ಬೆಲೆ ಇದೆ. ಇದೀಗ ಇದೇ ಹೆಸರಿನಲ್ಲಿ ಸ್ಯಾಂಡಲ್ವುಡ್ನಲ್ಲೂ ನಂದಿ ಪ್ರಶಸ್ತಿ ಕೊಡಲಾಗ್ತಿದೆ. ನಂದಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮ ಕನ್ನಡ ಚಿತ್ರರಂಗದ ಹಿರಿ ಕಿರಿಯ ತಾರೆರನ್ನ ಒಂದೆಡೆ ಸೇರಿಸಿದೆ. ಇದೇ ಫಸ್ಟ್ ಟೈಂ ಸ್ಯಾಂಡಲ್ವುಡ್ನಲ್ಲಿ ಕೊಡಲಾಗ್ತಿರೋ ನಂದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ರು, ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನು ಪ್ರಭಾಕರ್, ಉಮಾಶ್ರೀ, ವಸಿಷ್ಠ ಸಿಂಹ, ಹರಿಪ್ರಿಯಾ, ಗುರುಕಿರಣ್ ಇನ್ನೂ ಹಲವು ನಟ-ನಟಿಯರು ಕಾರ್ಯಕ್ರಮಕ್ಕೆ ಸಾಕ್ಷಿ ಆದ್ರು.  

ಯಾರಿಗೆ ಯಾವ ಪ್ರಶಸ್ತಿ.?
1. ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್-ಲೀಲಾವತಿ.
2. ಜೀವಮಾನ ಸಾಧನೆ ಪ್ರಶಸ್ತಿ - ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
3. ಅತ್ಯುತ್ತಮ ನಿರ್ದೇಶಕ-ರಿಷಬ್ ಶೆಟ್ಟಿ.
4. ಅತ್ಯುತ್ತಮ ನಟ - ರಿಷಬ್ ಶೆಟ್ಟಿ
5.ಅತ್ಯುತ್ತಮ ನಟಿ - ಸಪ್ತಮಿ ಗೌಡ
6.ಬೆಸ್ಟ್ ಡೇಬ್ಯುಟ್ ಆಕ್ಟರ್-ವಿಕ್ರಮ್ ರವಿಚಂದ್ರನ್.
7.ಬೆಸ್ಟ್ ಡೇಬ್ಯುಟ್ ಆಕ್ಟ್ರೆಸ್ - ರೀಷ್ಮಾ ನಾಣಯ್ಯ.
8.ಬೆಸ್ಟ್ ಕಮಿಡಿಯನ್ - ರಂಗಾಯಣ ರಘು.
9.ಬೆಸ್ಟ್ ಕಾಮಿಕ್ ರೋಲ್- ಹೇಮಾದತ್.
10.ಬೆಸ್ಟ್ ಸಪೋರ್ಟಿಂಗ್ ರೋಲ್-ವೀಣಾ ಸುಂದರ್.
11. ಅತ್ಯತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿ-ಗಂಧದಗುಡಿ.
12.ಬೆಸ್ಟ್ ಕ್ರಿಟಿಕ್ಸ್ ಆಕ್ಟರ್-ಸಂಚಾರಿ ವಿಜಯ್.
13.ಅತ್ಯುತ್ತಮ ಸಂಭಾಷಣೆಕಾರ-ಮಾಸ್ತಿ
14.ಅತ್ಯುತ್ತಮ ಚಿತ್ರ-777 ಚಾರ್ಲಿ.
15.ಬೆಸ್ಟ್ ಬಾಯೋಪಿಕ್ ಅವಾರ್ಡ್- ವಿಜಯಾನಂದ ಫಿಲ್ಮ್.

2023ರ ಕನ್ನಡ ಚಿತ್ರರಂಗದ ನಂದಿ ಅವಾರ್ಡ್ನಲ್ಲಿ ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್ ಅನ್ನ ನಟಿ ಲೀಲಾವತಿ ಪಡೆದಿದ್ದಾರೆ. ಜೀವಮಾನ ಸಾಧನೆ ಪ್ರಶಸ್ತಿಯನ್ನ ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್ ಪಾಲಾದ್ರೆ, ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ, ಅತ್ಯುತ್ತಮ ನಟ ಪ್ರಶಸ್ತಿಯನ್ನ ರಿಷಬ್ ಶೆಟ್ಟಿ ಸ್ವೀಕರಿಸಿದ್ರು. ಹಾಗೆ ಅತ್ಯುತ್ತಮ ನಟಿ ಸಪ್ತಮಿ ಗೌಡ, ಬೆಸ್ಟ್ ಡೇಬ್ಯುಟ್ ಆಕ್ಟರ್ ವಿಕ್ರಮ್ ರವಿಚಂದ್ರನ್, ಬೆಸ್ಟ್ ಡೇಬ್ಯುಟ್ ನಟಿ  ರೀಷ್ಮಾ ನಾಣಯ್ಯ, ಬೆಸ್ಟ್ ಕಮಿಡಿಯನ್ ಆಗಿ ರಂಗಾಯಣ ರಘು, ಬೆಸ್ಟ್ ಕಾಮಿಕ್ ರೋಲ್ ಗಾಗಿ ಹೇಮಾದತ್. ಬೆಸ್ಟ್ ಸಪೋರ್ಟಿಂಗ್ ರೋಲ್ ಗಾಗಿ ವೀಣಾ ಸುಂದರ್. ಬಾಚಿ ಕೊಂಡ್ರು. ಇನ್ನು ಅತ್ಯತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿಯನ್ನ ಗಂಧದಗುಡಿ ಚಿತ್ರಕ್ಕೆ ಸಿಕ್ಕರೆ, ಬೆಸ್ಟ್ ಕ್ರಿಟಿಕ್ಸ್ ಆಕ್ಟರ್ ಆಗಿ ದಿವಂಗತ ಸಂಚಾರಿ ವಿಜಯ್ ಪಡೆದಿದ್ದಾರೆ. 

ಮತ್ತೆ ಹಾಟ್‌ ಅವತಾರದಲ್ಲಿ ನಟಿ Jyothi Rai: ದಯವಿಟ್ಟು Bikiniಯಲ್ಲಿ ಕಾಣಿಸಿಕೊಳ್ಳಿ ಎಂದ ಫ್ಯಾನ್!

ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿ ಮಾಸ್ತಿ ಮಾಲಾದ್ರೆ. ಅತ್ಯುತ್ತಮ ಚಿತ್ರವಾಗಿ 777 ಚಾರ್ಲಿ ಹಾಗು ಬೆಸ್ಟ್ ಬಾಯೋಪಿಕ್ ಅವಾರ್ಡ್ ಅನ್ ವಿಜಯಾನಂದ ಸಿನಿಮಾ ಪಡೆದಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕರ್ನಾಟಕ ನಂದಿ ಚಲನಚಿತ್ರ ಪ್ರಶಸ್ತಿ ಇದಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್  ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿ ಸಂಸ್ಥಾಪರಾಗಿದ್ದಾರೆ. ಒಟ್ಟಿನಲ್ಲಿ ಪಕ್ಕದ ತೆಲುಗು ಚಿತ್ರರಂಗದಲ್ಲಿ ಕೊಡೋ ನಂದಿ ಪ್ರಶಸ್ತಿ ಹೆಸರು ಈಗ ಸ್ಯಾಂಡಲ್ವುಡ್ನಲ್ಲು ಶುರುವಾಗಿದ್ದು, ಕನ್ನಡ ಚಿತ್ರರಂಗದ ಕಲಾವಿಧರಿಗೆ ಹೊಸ ಬೂಸ್ಟ್ ಸಿಕ್ಕಂತಾಗಿದೆ. 

Follow Us:
Download App:
  • android
  • ios