ಬೆಂಗಳೂರು, (ಏ.19): ಮಹಾಮಾರಿ ಕೊರೋನಾದಿಂದ ಎಲ್ಲರ ಜೀವನ ಅಸ್ತವ್ಯಸ್ತ ಆಗುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಕೋವಿಡ್​ ತೊಂದರೆ ಕೊಡುತ್ತಿದೆ. 

 ಅಕ್ಷಯ್​ ಕುಮಾರ್​, ಸೋನು ಸೂದ್, ನಿಖಿಲ್ ಕುಮಾರಸ್ವಾಮಿ​ ಸೇರಿದಂತೆ  ಅನೇಕ ಸೆಲೆಬ್ರಿಟಿಗಳಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಆ ಸಾಲಿಗೆ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಸೇರಿಕೊಂಡಿದ್ದಾರೆ.

ಡಿಪ್ರೆಶನ್‌ಗೆ ಒಳಗಾಗಿದ್ದ ನಟಿ ಸಂಜನಾ ಗಲ್ರಾನಿ; ಹೊಟ್ಟೆ ತೋರಿಸಿದ ವಿಡಿಯೋ ವೈರಲ್!

ಹೌದು....ಸಂಜನಾ ಗಲ್ರಾನಿಗೆ ಕೊರೋನಾ ಸೋಂಕು ತಗುಲಿರುವುದು ಇಂದು (ಸೋಮವಾರ) ದೃಢಪಟ್ಟಿದೆ.

ಆದ್ರೆ, ಅವರು ಆಸ್ಪತ್ರೆಗೆ ದಾಖಲಾಗ್ತಾರೋ ಅಥವಾ ಹೋಮ್ ಐಸೋಲೇಷನ್‌ನಲ್ಲಿ ಇರುತ್ತಾರೋ ಎನ್ನುವ ಮಾಹಿತಿ ತಿಳಿದುಬರಬೇಕಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.