ಡಿಂಪಲ್ ಕ್ವೀನ್ ರಚಿತಾ ರಾಮ್ ಶಂಕರ್ ನಾಗ್ ಅವರ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಖುಷಿಯಲ್ಲಿ ಜೋಷ್‌ನಲ್ಲಿ ಕುಣಿದು ಸಂಭ್ರಮಿಸಿದ್ದಾರೆ.

ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಟಿ, ಸಂತೋಷಕ್ಕೆ ಹಾಡು ಸಂತೋಷಕ್ಕೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. ವಿಡಿಯೋ ಸುಂದರವಾಗಿ ಮೂಡಿ ಬಂದಿದೆ.

ಮಂಡ್ಯದ ಪವಾಡ ಬಸಪ್ಪನ ಆಶೀರ್ವಾದ ಪಡೆದ ರಚಿತಾ ರಾಮ್!

ನೀಲಿ ಬಣ್ಣದ ಸಲ್ವಾರ್‌ಗೆ ಹಸಿರು ಬಣ್ಣದ ವೇಲ್ ಹಾಕಿರೋ ರಚಿತಾ ಸಿಂಪಲ್ ಆಗಿ ಡ್ರೆಸ್ ಮಾಡಿರೋದನ್ನು ಕಾಣಬಹುದು. ಕೂದಲನ್ನು ಸಿಂಪಲ್ ಆಗಿ ಬಾಚಿ ಬಿಟ್ಟಿದ್ದಾರೆ.

ನಟಿಯ ವಿಡಿಯೋ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ. ಇನ್ನೂ ಕೆಲವರು ಹುಚ್ಚು ಹಿಡಿದಿದೆಯಾ..? ಹೀಗ್ಯಾಕೆ ಮಾಡ್ತಿದ್ದಿ ಎಂದು ಪ್ರಶ್ನಿಸಿದ್ದಾರೆ.