Asianet Suvarna News Asianet Suvarna News

ಯಾರಿಗೂ ಹೇಳ್ಬೇಡಿ..! ವಸಿಷ್ಠ ಸಿಂಹ ಕೈ ಹಿಡಿದುಕೊಂಡೇ ಓಡಾಡುವ ಹರಿಪ್ರಿಯಾ ಗುಟ್ಟು ರಟ್ಟಾಯ್ತು..!

ನಟಿ ಹರಿಪ್ರಿಯಾ ಹಾಗು ನಟ ವಸಿಷ್ಠ ಸಿಂಹ ಅವರದು ತಾರಾ ಜೋಡಿ. ಇಬ್ಬರೂ ಕನ್ನಡ ಸೇರಿದಂತೆ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರು. ಮದುವೆ ಬಳಿಕವೂ ವಸಿಷ್ಠ ಸಿಂಹ ಅವರು ಸಿನಿಮಾ ನಟನೆಯನ್ನು ಮುಂದುವರೆಸಿದ್ದಾರೆ. ಆದರೆ, ಹರಿಪ್ರಿಯಾ..

Sandalwood actress Haripriya reveals the secret of her personal life in a post srb
Author
First Published Aug 8, 2024, 7:50 PM IST | Last Updated Aug 8, 2024, 9:29 PM IST

ಕನ್ನಡದ ನಟಿ ಹರಿಪ್ರಿಯಾ (Haripriya) ಸೋಷಿಯಲ್ ಮೀಡಿಯಾಗಳಲ್ಲಿ ಕ್ರಿಯಾಶೀಲವಾಗಿರುವ ಸಿನಿಮಾ ತಾರೆ. ಕಳೆದ ವರ್ಷ ನಟ ವಸಿಷ್ಠ ಸಿಂಹ (Vasistha Simha) ಹಾಗೂ ನಟಿ ಹರಿಪ್ರಿಯಾ ಮದುವೆ ಆಗಿದ್ದೂ ಬಹುತೇಕರಿಗೆ ಗೊತ್ತಿದೆ. ಈಗ ಈ ಜೋಡಿ ಅಲ್ಲಿ ಇಲ್ಲಿ ಸುತ್ತಾಡುವ ಫೋಟೊಗಳನ್ನು ಅವರಿಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಅದು ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳ ಮೂಲಕ ಜಗತ್ತನ್ನೆಲ್ಲಾ ಸುತ್ತಾಡುತ್ತದೆ. 

ಇವೆಲ್ಲವೂ ಸಿನಿಮಾ ತಾರೆಯರ ವಿಷಯದಲ್ಲಿ ಸಹಜ ಎಂದೇ ಹೇಳಬಹುದು. ಆದರೆ, ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಯಲ್ಲಿ ಒಂದು ವಿಶೇಷತೆಯಿದೆ. ಅದನ್ನು ಈಗಾಗಲೇ ಹಲವರು ಗಮನಿಸಿರಬಹುದು. ಅದೇನೆಂದರೆ, ಹರಿಪ್ರಿಯಾ ಅವರು ತಮ್ಮ ಪತಿ ವಸಿಷ್ಠ ಸಿಂಹ ಅವರೊಟ್ಟಿಗೆ ಹೋಗುವಾಗ ಯಾವತ್ತೂ ಅವರ ಕೈಯನ್ನು ಹಿಡಿದುಕೊಂಡಿರುತ್ತಾರೆ. ವಸಿಷ್ಠ ಸಿಂಹ ಕೂಡ ಕೈ ಹಿಡಿದುಕೊಳ್ಳುತ್ತಾರೆ. ಅದನ್ನು ಅವರಿಬ್ಬರೂ ಕೈಕೈ ಹಿಡಿದುಕೊಂಡು ಹೋಗುತ್ತಾರೆ ಎಂದೂ ಹೇಳಬಹುದು.

ಟಾಂ ಟಾಂ ಮಾಡದೇ ಘನತೆವೆತ್ತ ಕಾರ್ಯ ಮಾಡಿ ದೇಶದ ಜನತೆ ಮೆಚ್ಚುಗೆ ಪಡೆದ ಡಾರ್ಲಿಂಗ್ ಪ್ರಭಾಸ್! 

ಆದರೆ, ಹರಿಪ್ರಿಯಾ ಅವರೇ ಉದ್ದೇಶ ಪೂರ್ವಕವಾಗಿ ತಮ್ಮ ಗಂಡನ ಕೈ ಹಿಡಿದುಕೊಂಡು ಹೋಗುತ್ತಾರೆ ಎಂತಲೇ ಹೇಳಬೇಕಾಗಿದೆ. ಏಕೆಂದರೆ, ಒಮ್ಮೆ ನಟಿ ಹರಿಪ್ರಿಯಾ ಅವರೇ 'ನಾನು ವಸಿಷ್ಠ ಸಿಂಹ ಅವರ ಕೈ ಹಿಡಿದುಕೊಂಡೇ ಓಡಾಡುತ್ತೇನೆ. ಕಾರಣ, ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ನನ್ನ ಅಪ್ಪನನ್ನು ಕಳೆದುಕೊಂಡೆ. ಹೀಗಾಗಿ ನಾನು ಅಪ್ಪನ ಕೈ ಹಿಡಿದುಕೊಂಡು ಓಡಾಡಬೇಕಾದ ಟೈಮಲ್ಲಿ ಆ ಭಾಗ್ಯವನ್ನು ಅನುಭವಿಸಿಲ್ಲ. 

ಅಪ್ಪನ ಪ್ರೀತಿಯನ್ನೂ ಸಹ ನಾನು ನನ್ನ ಪತಿ ವಸಿಷ್ಠ ಸಿಂಹ ಅವರಲ್ಲಿ ಕಂಡುಕೊಳ್ಳುತ್ತೇನೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಹೌದು, ಹಲವರು ಅಪ್ಪನ ಪ್ರೀತಿ-ಮಮತೆಯನ್ನು ಅನುಭವಿಸಿಲ್ಲದವರು ಗಂಡನಲ್ಲಿ ಅಪ್ಪನ ಪ್ರೀತಿಯ ಬೆಚ್ಚನೆ ಭಾವವನ್ನೂ, ಅಮ್ಮನ ಪ್ರೀತಿಯನ್ನು ಪಡೆಯದ ಕೆಲವರು ಹೆಂಡತಿಯಲ್ಲಿ ಅಮ್ಮನ ಮಮತೆ-ವಾತ್ಸಲ್ಯವನ್ನೂ ಕಂಡುಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅದು ಹಲವರಲ್ಲಿ ಉಂಟಾಗುತ್ತದೆ. ಈ ಸಂಗತಿಯನ್ನು ನಟಿ ಹರಿಪ್ರಿಯಾ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.  

ಕನ್ನಡತಿ ರಶ್ಮಿಕಾ ಮಂದಣ್ಣಗೆ ಮರಾಠಿ ಪ್ರೀತಿ; ಮತ್ತೆ ವಿವಾದಕ್ಕೆ ಗುರಿಯಾಗ್ತಾರಾ ನ್ಯಾಷನಲ್ ಕ್ರಶ್..?!

ನಟಿ ಹರಿಪ್ರಿಯಾ ಹಾಗು ನಟ ವಸಿಷ್ಠ ಸಿಂಹ ಅವರದು ತಾರಾ ಜೋಡಿ. ಇಬ್ಬರೂ ಕನ್ನಡ ಸೇರಿದಂತೆ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರು. ಮದುವೆ ಬಳಿಕವೂ ವಸಿಷ್ಠ ಸಿಂಹ ಅವರು ಸಿನಿಮಾ ನಟನೆಯನ್ನು ಮುಂದುವರೆಸಿದ್ದಾರೆ. ಆದರೆ, ಹರಿಪ್ರಿಯಾ ಅವರು ಮ್ಯಾರೇಜ್ ಬಳಕ ಗ್ಯಾಪ್ ಪಡೆದಿದ್ದರು. ಆದರೆ ಇತ್ತೀಚೆಗೆ ಕಿರುತೆರೆಯಲ್ಲಿ ಲಾಯರ್ ಪಾತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹರಿಪ್ರಿಯಾ-ವಸಿಷ್ಠ ಸಿಂಹ ಅವರನ್ನು ನೋಡಿದವರು ಜೋಡಿ ಅಂದ್ರೆ ಹೀಗಿರ್ಬೆಕು ಅಂತಿದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ!

Latest Videos
Follow Us:
Download App:
  • android
  • ios