ನಿನಗೆ ನನ್ನ ಮೇಲೆ ರೆಸ್ಪೆಕ್ಟ್ ಇದೆ, ನಿನಗೆ ನಾನು ಬೇಕು, ನಿನಗೆ ನನ್ನ ಮೇಲೆ ಪ್ರೀತಿ ಇದೆ ಅಂದ್ರೆ ಮಾತ್ರ ನಾನು ಅದಕ್ಕೆ ವರ್ಕ್‌ಔಟ್ ಮಾಡಿ ನಾನು ಅದನ್ನ ಉಳಿಸ್ಕೋಳ್ಳೋಕೆ ಪ್ರಯತ್ನ ಪಡಬಹುದು. ಅಪೋಸಿಟ್‌ ಕಡೆ ಏನೂ ಇಲ್ದೇ ಇದ್ದಾಗ ಖಂಡಿತ ನಾನು..

ನಟಿ ಅದಿತಿ ಪ್ರಭುದೇವ ಅವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿದೆ. ಸೀರಿಯಲ್ ಹಾಗೂ ಸಿನಿಮಾರಂಗದಲ್ಲಿ ಅದಿತಿ ಪ್ರಭುದೇವ ಅವರು ಸಾಕಷ್ಟು ಹೆಸರು ಮಾಡಿರುವ ನಟಿ. ನಾಲ್ಕೈದು ವರ್ಷ ಸಿನಿಮಾರಂಗದಲ್ಲಿ ಮಿಂಚಿದ ಬಳಿಕ ಅವರು ದಾಂಪತ್ಯಕ್ಕೆ ಕಾಲಿಟ್ಟು ಈಗ ಹೆಣ್ಣುಮಗುವಿನ ತಾಯಿಯೂ ಆಗಿ ತಾಯ್ತನ ಅನುಭವಿಸುತ್ತಿದ್ದಾರೆ., ಅವರು, ರಾಪಿಡ್ ರಶ್ಮಿ ಶೋದಲ್ಲಿ ಭಾಗಿಯಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ, ಅವರ ಮಾತುಗಳು ಇಲ್ಲಿವೆ ನೋಡಿ..

ಸಂಬಂಧಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ನಿಮ್ಮ ನಿಲುವೇನು? ನಿಮಗೆ ಎಷ್ಟು ಅರ್ಥವಾಗಿದೆ? ಎಂಬ ಪ್ರಶ್ನೆಯನ್ನು ನಟಿ ಅದಿತಿ ಪ್ರಭುದೇವ ಅವರಿಗೆ ಕೇಳಲಾಗಿದೆ. ಅದಕ್ಕೆ ಉತ್ತರವಾಗಿ ಅವರು 'ನಾನು ಯಾವ ಮೈಂಡ್‌ಸೆಟ್‌ನಲ್ಲಿ ಇದೀನಿ ಅಂದ್ರೆ, ನನ್ನನ್ನ ನೀನು ಕಾಪಾಡ್ಕೋಬೇಕು ಅಂತ ನಿನ್ನ ಮನಸ್ಥಿತಿ ಇದೆ ಅಂದ್ರೆ, ನಾನು ನಿನ್ನ ಬದುಕಲ್ಲಿ ಬೇಕು ಅಂತ ನಿನ್ನ ಮನಸ್ಥಿತಿ ಇದೆ ಅಂದ್ರೆ ಮಾತ್ರ, ನಾನೂ ಕೆಲಸ ಮಾಡ್ತೀನಿ ಹಾಗಿದ್ರೆ ನನಗೂ ನೀನು ಬೇಕು ಅಂತ..'.

ವೈರಲ್ ವಿಡಿಯೋದಲ್ಲಿ ಪುನೀತ್ ಬಗ್ಗೆ ರವಿಚಂದ್ರನ್ & ಸುದೀಪ್ ಮಾತುಗಳು ಏನಿವೆ ನೋಡಿ!

ಇಲ್ಲ ಅಂದ್ರೆ, ಅದು ಯಾವ ಕೆಲಸ ಆಗಿರ್ಲಿ, ಸಂಬಂಧ ಆಗಿರ್ಲಿ, ನಾನು ಮಾಡೋಕೇ ಹೋಗಲ್ಲ. ಆನೆಸ್ಟ್ ಆಗಿ ಹೇಳ್ತೀನಿ, ನಿಂಗೇ ಬೇಡ ಅಂದ್ರೆ ಫೋರ್ಸ್‌ಫುಲಿ ಏನೂ ಮಾಡ್ಬಾರ್ದು.. ಅದ್ರಲ್ಲೂ ಪ್ರೀತಿ ಮತ್ತೆ ಸಂಬಂಧನಾ ಫೋರ್ಸ್‌ಫುಲಿ ಯಾವ್ದನ್ನೂ ಇಟ್ಕೊಳ್ಳೋಕೆ ಆಗಲ್ಲ.. ಅದು ತಂದೆ-ತಾಯಿಯಿಂದ ಹಿಡಿದು, ಗಂಡನಿಂದ ಹಿಡಿದು, ಅತ್ತೆ-ಮಾವನಿಂದ ಹಿಡಿದು, ಅಣ್ಣತಮ್ಮಂದಿರಿಂದ ಹಿಡಿದು, ಅಕ್ಕತಂಗಿಯರವರೆಗೂ ಎಲ್ಲರಿಗೂ ಸೇಮ್. 

ನಿನಗೆ ನನ್ನ ಮೇಲೆ ರೆಸ್ಪೆಕ್ಟ್ ಇದೆ, ನಿನಗೆ ನಾನು ಬೇಕು, ನಿನಗೆ ನನ್ನ ಮೇಲೆ ಪ್ರೀತಿ ಇದೆ ಅಂದ್ರೆ ಮಾತ್ರ ನಾನು ಅದಕ್ಕೆ ವರ್ಕ್‌ಔಟ್ ಮಾಡಿ ನಾನು ಅದನ್ನ ಉಳಿಸ್ಕೋಳ್ಳೋಕೆ ಪ್ರಯತ್ನ ಪಡಬಹುದು. ಅಪೋಸಿಟ್‌ ಕಡೆ ಏನೂ ಇಲ್ದೇ ಇದ್ದಾಗ ಖಂಡಿತ ನಾನು ಎಷ್ಟೇ ಟ್ರೈ ಮಾಡಿದ್ರೂ ಉಳಿಸ್ಕೊಳ್ಳೋದಕ್ಕಾಗಲ್ಲ. ಹಂಗೆ ಇಲ್ಲ ಅಂದ್ರೆ, ಅದು ಯಾವ್ದೇ ಸಂಬಂಧ ಆದ್ರೂ ಬಿಟ್ಬಿಟ್ಟು ನಿಮ್ ಕೆಲಸ ನೀವು ಮಾಡ್ಕೊಳ್ಳಿ.. 

ಮೊದಲ ಬಾರಿಗೆ ನಟ ದರ್ಶನ್ ಕೇಸ್ ಬಗ್ಗೆ ಬಾಯ್ಬಿಟ್ಟ ರಾಧಿಕಾ ಕುಮಾರಸ್ವಾಮಿ, ಏನ್ ಹೇಳಿದ್ರು ನೋಡಿ!

ಡೋಂಟ್ ಗೆಟ್ ಹರ್ಟ್ ಯುವರ್‌ಸೆಲ್ಫ್.. ಅಥವಾ, ನಿಮಗೆ ಡಿಮೋಟಿವೇಟ್ ಆಗುವಂಥ ಕೆಲಸಗಳನ್ನೂ ಮಾಡ್ಬೆಡಿ, ಸಂಬಂಧಗಳನ್ನೂ ಇಟ್ಕೋಬೇಡಿ.. ' ಎಂದು ನಟಿ ಅದಿತಿ ಪ್ರಭುದೇವ ಅವರು ರಾಪಿಡ್ ರಶ್ಮಿ ಅವರ ಸಂದರ್ಶನದಲ್ಲಿ ಹೇಳಿದ್ದಾರೆ. ಅಂದಹಾಗೆ, ನಟಿ ಅದಿತಿ ಪ್ರಭುದೇವ ಅವರು ಯಶಸ್ ಎಂಬವರನ್ನು ಮದುವೆಯಾಗಿದ್ದು, ಅದಿತಿ-ಯಶಸ್ ದಂಪತಿಗೆ 3 ತಿಂಗಳು ಮೀರಿರುವ ಮಗಳಿದ್ದಾಳೆ. ಸದ್ಯ ನಟಿ ಅದಿತಿ ಪ್ರಭುದೇವ ಅವರು ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್‌ ಆಗಿ ಕೆಲಸ ಮಾಡುತ್ತಿದ್ದಾರೆ. 

"Aditi Prabhudeva’s Approach to Maintaining Relationships & Friendships in Life" #RapidRashmi