KGF2 ನಡುವೆ ಬ್ಯುಸಿ ಇದ್ರೂ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿಗೆ ಟೈಂ ಕೊಡೋದನ್ನು ಮಾತ್ರ ಮರೆಯಲ್ಲ. ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಟ ಮಗಳು ಐರಾ ಜೊತೆ ಫನ್ ಮಾಡಿರೋ ವಿಡಿಯೋ ಈಗ ವೈರಲ್ ಆಗಿದೆ.

ಐರಾ ಈಗ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ನಟಿ ರಾಧಿಕಾ ಪಂಡಿತ್ ಕೂಡಾ ಐರಾ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟ ಯಶ್ ಅಪ್ ಮಾಡಿರೋ ವಿಡಿಯೋ ಹೇಗಿದೆ ನೋಡಿ..

ಸೆಲ್ಫಿ ಕ್ಲಿಕ್ ಮಾಡುತ್ತಿದ್ದ ರಾಧಿಕಾ; ಬೋರಾಗಿ ವಿಡಿಯೋ ಮಾಡಿದ ಯಶ್-ಐರಾ!

ವಿಡಿಯೋ ಶೇರ್ ಮಾಡಿದ ನಟ, ಶೇರಿಂಗ್ ಈಸ್ ಕೇರಿಂಗ್, ಆದ್ರೆ ಐಸ್‌ಕ್ರೀಂ ವಿಚಾರದಲ್ಲಲ್ಲ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಬೌಲ್ ತುಂಬಾ ಐಸ್‌ಕ್ರೀಂ ಹಾಕ್ಕೊಂಡು ತಿಂತಾ ಕೂತಿರೋ ಐರಾ ವಿಡಿಯೋ ಕ್ಯೂಟ್ ಆಗಿದೆ. 

 
 
 
 
 
 
 
 
 
 
 
 
 

Sharing is caring... not when it comes to ICE CREAM 😜 (Getting a dose of my own medicine here 😄)

A post shared by Yash (@thenameisyash) on Oct 25, 2020 at 3:56am PDT

ಐರಾ ಐಸ್‌ ಕ್ರೀಂ ಅಪ್ಪನಿಗೆ ತಿನ್ನಿಸೋ ತರ ಮಾಡಿ ತಾನೇ ತಿನ್ನೋ ಫನ್ನಿ ವಿಡಿಯೋ ಎಲ್ಲರ ಮನ ಸೆಳೆದಿದೆ. 2018 ಡಿಸೆಂಬರ್2ರಂದು ರಾಧಿಕಾ ಮತ್ತು ಯಶ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಈಗ ಐರಾಗೆ ಪುಟ್ಟ ತಮ್ಮ ಯಥರ್ವ್ ಕೂಡಾ ಇದ್ದಾನೆ.