ಹೀಗೆ ಡಾ ರಾಜ್‌ಕುಮಾರ್ ಮೊಮ್ಮಗ, ಯುವ ಚಿತ್ರದ ಹೀರೋ ಯುವ ರಾಜ್‌ಕುಮಾರ್ ಚಿಕ್ಕ ಪ್ರಾಯದಲ್ಲೇ ತಮಗೆ ಜವಾಬ್ದಾರಿ ಬಂದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಸ್ಯಾಂಡಲ್‌ವುಡ್ ನಟರೂ ಆಗಿರುವ ಯುವ ರಾಜ್‌ಕುಮಾರ್‌

ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar)ಮಾತನಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar)ಅವರ ಎರಡನೇ ಮಗನಾಗಿರುವ ಯುವ ರಾಜ್‌ಕುಮಾರ್ ಅವರು ತಾವು ಕಾಲೇಜಿಗೆ ಹೋಗುವಾಗಿನ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತಮಗೆ ಅಷ್ಟು ಚಿಕ್ಕ ವಯಸ್ಸಿಗೆ ಜವಾಬ್ದಾರಿ ಬಂದಿದ್ದು ಹೇಗೆ ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಯುವ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood)ಪದಾರ್ಪಣೆ ಮಾಡಿರುವ ಯುವ ರಾಜ್‌ಕುಮಾರ್ ಅವರ ಭವಿಷ್ಯದ ಯೋಜನೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. 

ಸದ್ಯ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವ ರಾಜ್‌ಕುಮಾರ್ ಅವರು 'ನನ್ ಲೈಫಲ್ಲಿ ಮೇಜರ್ ಟರ್ನಿಂಗ್ ಪಾಯಿಂಟ್ ಅಂದ್ರೆ ನನ್ ಅಪ್ಪಾಜಿಗೆ ಹುಶಾರ್ ತಪ್ಪಿರೋದು.. ಆವಾಗ ಇನ್ನೂ ಓದ್ತಾ ಇದ್ದೆ ನಾನು. ಕಾಲೇಜ್ ಓದ್ತಾ ಇದ್ದೆ, ನನಗೆ ಆಗ ಫ್ಯೂಚರ್ ಬಗ್ಗೆ, ಮನೆ ಪರಿಸ್ಥಿತಿ ಬಗ್ಗೆ ಅಷ್ಟೇನೂ ಕ್ಲೂ ಇರ್ಲಿಲ್ಲ, ಯಾವುದೇ ಸರಿಯಾದ ಯೋಚನೆ ಇರ್ಲಿಲ್ಲ. ಮನೆ ಫೈನಾನ್ಸಿಯಲ್ ಸಿಚ್ಯುವೇಷನ್ ಏನಿದೆ ಅನ್ನೋ ಬಗ್ಗೆ ಯಾವುದೇ ಜ್ಞಾನ ಇರ್ಲಿಲ್ಲ. ಯಾವುದರಲ್ಲೂ ಇನ್ವಾಲ್ವ್‌ಮೆಂಟ್ ಆಗ್ತಾ ಇರ್ಲಿಲ್ಲ. ಯಾವಾಗ ನನ್ ಅಪ್ಪಾಜಿ ಹುಶಾರ್ ತಪ್ಪಿದ್ರೋ ಆಗ ನಮ್ ಪ್ರೊಡಕ್ಷನ್ ಸ್ಟಾರ್ ಆಯ್ತು. 

ಪರಮೇಶ್ವರ್ ಗುಂಡ್ಕಲ್- ಧನಂಜಯ್ ಜೋಡಿ 'ಕೋಟಿ' ಸಿನಿಮಾ ಪೋಸ್ಟರ್ ಯುಗಾದಿ ಹಬ್ಬಕ್ಕೆ ಬಿಡುಗಡೆ!

ನಿಮಗೂ ಎಲ್ರಿಗೂ ಗೊತ್ತು, ನಮ್ ಕುಟುಂಬದ ಮೇಜರ್ ಇನ್‌ಕಮ್ ಅಂದ್ರೆ ಅದು ಸಿನಿಮಾದಿಂದ್ಲೇ.. ಪ್ರೊಡಕ್ಷನ್ ಮಾತ್ರ ನಮ್ ದೊಡ್ಡ ಅರ್ನಿಂಗ್ ಸೋರ್ಸ್. ಅದೇ ನಿಂತೋಯ್ತು.. ಅಪ್ಪಾಜಿಗೆ ಹುಶಾರು ತಪ್ಪಿದ್ದು ಒಂದು ಕಡೆ, ನಮ್ಮ ಅಕೌಂಟ್‌ ಒಬ್ರ ಕಡೆಯಿಂದ ಮಿಸ್‌ಅಪ್ರಾಪ್ರಿಯೇಶನ್ ಆಗಿತ್ತು.. ಹೀಗೆ ಎಲ್ಲಾನೂ ಪ್ರಾಬ್ಲಂಸ್ ಒಮ್ಮೇಲೆ ಬಂತಲ್ಲ, ಆಗ ನಂಗೆ ಎಲ್ಲೋ ಒಂದ್ ಕಡೆ ಜವಾಬ್ದಾರಿ ಬಂತು.. 

ಬೆಂಗಳೂರು ಹೆಚ್‌ಎಎಲ್‌ ಆವರಣದಲ್ಲಿ 'ಟಾಕ್ಸಿಕ್' ಶೂಟಿಂಗ್ ಸೆಟ್; ಜಗತ್ತಿಗೇ ಕೊಡುತ್ತಿರುವ ಮೆಸೇಜ್ ಏನು?

ಹೀಗೆ ಡಾ ರಾಜ್‌ಕುಮಾರ್ (Dr Rajkumar)ಮೊಮ್ಮಗ, ಯುವ ಚಿತ್ರದ ಹೀರೋ ಯುವ ರಾಜ್‌ಕುಮಾರ್ ಚಿಕ್ಕ ಪ್ರಾಯದಲ್ಲೇ ತಮಗೆ ಜವಾಬ್ದಾರಿ ಬಂದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಸ್ಯಾಂಡಲ್‌ವುಡ್ ನಟರೂ ಆಗಿರುವ ಯುವ ರಾಜ್‌ಕುಮಾರ್‌ ಅವರು ಮುಂದೆ ಯಾವ ನಿರ್ದೇಶಕರ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಯುವ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಚೆಲುವೆ ಸಪ್ತಮಿ ಗೌಡ (Kantara Sapthami Gowda)ಯುವ ರಾಜ್‌ಕುಮಾರ್‌ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. 

ದೊಡ್ಮನೆಯ 'ಯುವ' ಸಿನಿಮಾಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದ ಗುಟ್ಟು ರಟ್ಟಾಯ್ತು!