ಕೊರೋನಾ ವೈರಸ್ ಪ್ರಕರಣಗಳು ದಿನಾ ದಿನಾ ಹೆಚ್ಚುತ್ತಿರುವಾಗಲೇ ಜಿಮ್ ಮಾಲೀಕರು ಹಾಗೂ ಕಾರ್ಮಿಕರ ಪರವಾಗಿ ರಾಕಿಂಗ್ ಸ್ಟಾರ್ ಯಶ್ ಧ್ವನಿ ಎತ್ತಿದ್ದಾರೆ. ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗೆಗಳು ಮುಕ್ತ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ ಎಂದು ಟ್ವೀಟ್ ಮಾಡಿದ್ದಾರೆ ನಟ.

ಅಪಘಾತವಾಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯೇ ? ಕಟ್ಟುನಿಟ್ಟಿನ ಸಂಚಾರಕ್ರಮ ಸಾಕಲ್ಲವೇ ? ಹಾಗೆ ಸಾಲ ಸೋಲ ಮಾಡಿ ಜಿಮ್ ನೆಡೆಸುವವರು ಕಷ್ಟ ಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊ.ದಿಗೆ ಜಿಮ್ ಬಳಸಲು ಅನುಮತಿ ನೀಡಿದರೆ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು ಎಂದಿದ್ದಾರೆ ಯಶ್.

2ನೇ ವೈಲ್ಡ್‌ ಕಾರ್ಡ್‌ ಎಂಟ್ರಿ ಬಗ್ಗೆ ಸುಳಿವು ಕೊಟ್ಟ ಸುದೀಪ್; ಪ್ರಭಾವಿ ರಾಜಕಾರಣಿ ಬರ್ತಾರೆ?

ಜಿಮ್ ಮಾಲೀಕರು ಬದುಕಿಕೊಳ್ಳುತ್ತಾರೆ. ರೋಗಕ್ಕೆ ಪರಿಹಾರ ಏನದು ನಿಮಗ್ಯಾರಿಗೂ ಗೊತ್ತಿಲ್ಲ,ಆದರೆ ಹಸಿವೆಗೆ ಪರಿಹಾರ ಗೊತ್ತಿದೆಯಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ನಟ.

ಕೊರೋನಾದಿಂದ ಎಲ್ಲ ಕ್ಷೇತ್ರಗಳು ನಿಧಾನವಾಗಿ ಚೇತರಿಸಿಕೊಂಡರೂ ಜಿಮ್ ಮಾತ್ರ ಕಾರ್ಯ ನಿರ್ವಹಿಸುವುಕ್ಕೆ ನಿಷೇಧ ಮಾಡಲಾಗುತ್ತಿದೆ. ಜಿಮ್ ಬಳಸಲು ತಕರಾರು ಮಾಡಲಾಗುತ್ತಿದೆ. ಆದರೆ ಇತ್ತೀಚಿನ ಮಾರ್ಗಸೂಚಿಯಂತೆ ಕೋವಿಡ್ ನಿಯಮಗಳ ಪಾಲನೆಯೊಂದಿಗೆ 50% ಜಿಮ್ ತೆರೆಯಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಪುನೀತ್ ಮನವಿಗೆ ಸ್ಪಂದಿಸಿದ ಸಿಎಂ: ಸಿನಿಪ್ರಿಯರಿಗೆ ಭರ್ಜರಿ ಸಿಹಿಸುದ್ದಿ

ಇದರಿಂದ ಫಿಟ್ನೆಸ್ ಕಾಪಾಡಿಕೊಳ್ಳುವವರಿಗೆ ಮಾತ್ರವಲ್ಲದೆ, ಜಿಮ್ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ. ಇನ್ನು ಕೊರೋನಾ ಎರಡನೆ ಅಲೆಯೂ ದೇಶದ ಹಲವು ರಾಜ್ಯಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದ್ದು, ದೇಶದಲ್ಲಿ ಈಗಾಗಲೇ ಒಂದು ದಿನದ ಪ್ರಕರಣ 93 ಸಾವಿರದವರೆಗೆ ದಾಖಲಾಗುತ್ತಿದೆ.