Asianet Suvarna News Asianet Suvarna News
breaking news image

ನಟ ರವಿಚಂದ್ರನ್ ಭಾರೀ ಗರಂ, ಹರಿಹಾಯ್ದಿದ್ದು ಯಾಕೆ, ಹೇಳಿದ್ದೇನು ನೋಡಿ!

'ಎಲ್ಲದಕ್ಕೂ ಸಮಯ ಬೇಕು. ಹೆಚ್ಚೆಚ್ಚು ಸಿನಿಮಾ ಮಾಡಲು ಸಾಕಷ್ಟು ಅಂಶಗಳ ಸಹಕಾರ ಬೇಕಾಗುತ್ತದೆ. ಮಾತೆತ್ತಿದರೆ ಮಲಯಾಳಂ ಸಿನಿಮಾ ಅಂತೀರ, ಅಲ್ಲಿನವರ ಕಡೆ ಹೋಗಿ ಸ್ಕ್ರಿಪ್ಟ್‌ ಬರೆಸಿ ಕನ್ನಡದಲ್ಲಿ ಸಿನಿಮಾ ಮಾಡಿ ನೋಡೋಣ. ನಿಮಗೆ ಇಲ್ಲಿ ಕಥೆಗಳು ಸಿಗಲಿಲ್ಲ ಅಂದರೆ..

Sandalwood actor V Ravichandran talks on Sandalwood present crisis and solutionss srb
Author
First Published May 27, 2024, 12:35 PM IST

ಕಳೆದ ಹಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸ್ಟಾರ್‌ ನಟರ ಸಿನಿಮಾಗಳು ತೆರೆಗೆ ಬರುತ್ತಿಲ್ಲ ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಕನ್ನಡ ಚಿತ್ರೋದ್ಯಮವನ್ನೇ ಬಂದ್‌ ಮಾಡುವ ವಿಚಾರವೂ ಮುನ್ನೆಲೆಗೆ ಬಂದಿತ್ತು. ಕರ್ನಾಟಕದಲ್ಲಿನ ಸಿಂಗಲ್ ಥಿಯೇಟರ್‌ಗಳು ನಷ್ಟ ಅನುಭವಿಸುತ್ತಿರುವ ಬಗ್ಗೆಯೂ ಚರ್ಚೆ ನಡೆದಿದೆ. ಜತೆಗೆ, ಸ್ಟಾರ್‌ ನಟರಿಗೆ ವರ್ಷಕ್ಕೆ ಎರಡು-ಮೂರು ಸಿನಿಮಾ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film chamber) ಮನವಿ ಮಾಡಿದೆ. ಇಲ್ಲದಿದ್ದರೆ, ಚಿತ್ರೋದ್ಯಮ ಬಂದ್‌ ಮಾಡುವ ನಿರ್ಧಾರವನ್ನು ಕೂಡ ಮಾಡಬೇಕಾಗಬಹುದು ಎನ್ನಲಾಗಿದೆ. ಈಗ ಇದೇ ವಿಚಾರವಾಗಿ ಹಿರಿಯ ನಟ, ಕ್ರೇಜಿಸ್ಟಾರ್‌ ರವಿಚಂದ್ರನ್‌ (V Ravichandran) ಗರಂ ಆಗಿದ್ದಾರೆ.

ಗುರುರಾಜ್‌ ಕುಲಕರ್ಣಿ (ನಾಡಗೌಡ) ನಿರ್ದೇಶನದ, ರವಿಚಂದ್ರನ್‌ ನಟನೆಯ 'ದಿ ಜಡ್ಜ್‌ಮೆಂಟ್‌ (The Judgement) ಸಿನಿಮಾ ಬಿಡುಗಡೆ ಆಗಿದೆ. ರಾಜ್ಯದಾದ್ಯಂತ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಈ ವೇಳೆ ಮಾತನಾಡಿರುವ ನಟ ರವಿಚಂದ್ರನ್‌, ಇತ್ತೀಚಿನ ಈ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲದಕ್ಕೂ ಮಲಯಾಳಂ ಚಿತ್ರರಂಗವನ್ನೇ ಹೋಲಿಕೆ ಮಾಡುತ್ತಿದ್ದರೆ, ಅಲ್ಲಿನ ಕಥೆಗಳನ್ನು ತಂದು ಇಲ್ಲಿ ಸಿನಿಮಾ ಮಾಡಬೇಕಾಗುತ್ತದೆ. ಸ್ಟಾರ್‌ ನಟರಿಗೆ ಅವರದೇ ಆದ ಬ್ರಾಂಡ್‌ ಇರುತ್ತವೆ. ಅದಕ್ಕೆ ತಕ್ಕದಾಗಿಯೇ ಸಿನಿಮಾ ಮಾಡಬೇಕೇ ಹೊರತು, ವರ್ಷಕ್ಕೆ ಮೂರು ಸಿನಿಮಾ ಮಾಡಲೇಬೇಕು ಎಂಬ ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದು ಎಂದು ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. 

ಪ್ಯಾಂಟ್ ಬಿಚ್ಚಿರುವಾಗಲೇ ಮೇಕಪ್‌ ವ್ಯಾನ್‌ಗೆ ಪರಿಣೀತಿ ಚೋಪ್ರಾ ಬರ್ತಾರೆ; ಹೀಗಂದ್ರಾ ರಣವೀರ್ ಸಿಂಗ್ ?

ಈ ಬಗ್ಗೆ ರವಿಚಂದ್ರನ್ 'ಎಲ್ಲದಕ್ಕೂ ಸಮಯ ಬೇಕು. ಹೆಚ್ಚೆಚ್ಚು ಸಿನಿಮಾ ಮಾಡಲು ಸಾಕಷ್ಟು ಅಂಶಗಳ ಸಹಕಾರ ಬೇಕಾಗುತ್ತದೆ. ಮಾತೆತ್ತಿದರೆ ಮಲಯಾಳಂ ಸಿನಿಮಾ ಅಂತೀರ, ಅಲ್ಲಿನವರ ಕಡೆ ಹೋಗಿ ಸ್ಕ್ರಿಪ್ಟ್‌ ಬರೆಸಿ ಕನ್ನಡದಲ್ಲಿ ಸಿನಿಮಾ ಮಾಡಿ ನೋಡೋಣ. ನಿಮಗೆ ಇಲ್ಲಿ ಕಥೆಗಳು ಸಿಗಲಿಲ್ಲ ಅಂದರೆ, ಬೇರೆ ಕಡೆ ಹೋಗಿ ಹುಡುಕಿ. ಎಲ್ಲಿ ಸಿಗುತ್ತೋ ಅಲ್ಲಿ ಮಾಡಿಸಿಕೊಂಡು ಬನ್ನಿ. ಪ್ರೇಕ್ಷಕ ಒಳ್ಳೆಯ ಸಿನಿಮಾಗೆ ಪ್ರೋತ್ಸಾಹ ಕೊಟ್ಟಿದ್ದಾನೆ. ಕೊಡುತ್ತಲೇ ಬಂದಿದ್ದಾನೆ. ಎಲ್ಲರಿಗೂ ಯಶ್ ಬೇಕು, ದರ್ಶನ್ ಬೇಕು ಎಂದಾದರೆ, ಸಿಗಲಾರರು. ಅದು ಅವರವರ ಇಷ್ಟ ಎನ್ನಬಹುದಾದರೂ ಕಥೆ ಓಕೆ ಆಗಬೇಕಲ್ಲವಾ? ನಾಳೆ ಯಶ್‌ ವರ್ಷಕ್ಕೆ ಮೂರು ಸಿನಿಮಾ, ದರ್ಶನ್‌ ಮೂರು ಸಿನಿಮಾ ಮಾಡಿದ್ರೆ, ಎರಡು ವರ್ಷಕ್ಕೆ ಅವ್ರು ಮನೆಯಲ್ಲಿ ಕುಳಿತಿರಬೇಕಾಗುತ್ತದೆ. 

ಅಭಿಷೇಕ್‌ ಲವ್ ಮಾಡಿದ್ರು, ಐಶೂಗೆ ಮನಸ್ಸಿರಲಿಲ್ಲ; ಹೀಗಿದ್ರೂ ಮ್ಯಾರೇಜ್‌ ಆಗಿರೋ ಮಹಾ ಮ್ಯಾಜಿಕ್ ರಿವೀಲ್!

'ಅವರಿದೆ ಅವರದೇ ಆದ ಬ್ರಾಂಡ್‌, ತಾಕತ್ತು, ನಿರ್ಧಿಷ್ಟ ಬಜೆಟ್‌, ಒಂದು ಪಕ್ಕಾ ಸ್ಟೇಟಸ್‌ ಇರುತ್ತದೆ. ಸಿನಿಮಾ ಸಲುವಾಗಿ ಯಾರನ್ನೂ ಒತ್ತಾಯ ಮಾಡಲಾಗದು. ನೀವು ಇಷ್ಟೇ ಸಿನಿಮಾ ಮಾಡಬೇಕು, ಅಷ್ಟೇ ಸಿನಿಮಾ ಮಾಡಬೇಕು ಎಂಬುದು ಅಸಾಧ್ಯವಾದ ಮಾತು. ಅದು ಅವರವರ ಆಯ್ಕೆ. ಒಬ್ಬ ಹೀರೋ ಅಂದ ಮೇಲೆ ಅವನದೇ ಆದ ಬ್ರಾಂಡ್‌ ಉಳಿಸಿಕೊಳ್ಳಬೇಕಾಗುತ್ತದೆ. ಅವರಿಗೆ ಸ್ಟೋರಿ ಡಿಸೈಡ್‌ ಮಾಡೋದು ಯಾರು? ಕೆಜಿಎಫ್‌ ಆದಮೇಲೆ ಯಶ್‌ ಮೇಲೆ ಬೇರೆಯದೇ ಆದ ನಿರೀಕ್ಷೆಗಳು ಇರುತ್ತವೆ. ಅವರು ಅದೇ ಥರದ ಸಿನಿಮಾ ಮಾಡಬೇಕಾಗುತ್ತದೆ. ಕಾಟೇರ ಬಳಿಕ ದರ್ಶನ್ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಅವರ ಇಮೇಜ್‌, ಬಜೆಟ್‌ ನೋಡಿ ಅವರು ಸಿನಿಮಾ ಮಾಡುತ್ತಾರೆ. 

ಮಗ ಹೈದರಾಬಾದ್‌ನಲ್ಲಿ, ತಾಯಿ ಅಮೆರಿಕಾದಲ್ಲಿ; ನಾಗ ಚೈತನ್ಯ ತಾಯಿ ಇಲ್ಲದ ತಬ್ಬಲಿ!

ಮೊದಲು ಸ್ಯಾಂಡಲ್‌ವುಡ್‌ ಸಮಸ್ಯೆಗಳನ್ನು ಪಟ್ಟಿ ಮಾಡಿ. ಸ್ಟಾರ್ ನಟರೆಲ್ಲ ವರ್ಷಕ್ಕೆ ಮೂರು ಸಿನಿಮಾ ಮಾಡಿ ಎಂಬುದು ಆಗದ ಮಾತು. ಕಥೆ ಓಕೆ ಆದಾಗ ಮಾತ್ರ ಸಿನಿಮಾ ಮಾಡಲು ಸಾಧ್ಯ. ನಮಗೆ ನೀವು ದುಡ್ಡು ಕೊಡಿಸಿದರೆ ನಾವು ನೀವು ಹೇಳಿದಂತೆಯೇ ಸಿನಿಮಾ ಮಾಡ್ತಿವಿ. ಯಾರೂ ಸಹ ಸಿನಿಮಾ ಮಾಡಿ ಅಂತ ಫೋರ್ಸ್‌ ಮಾಡುವುದು ಸರಿಯಲ್ಲ. ಚೇಂಬರ್‌ನವರು ಸಮಸ್ಯೆ ಎಲ್ಲಿದೆ ಎಂಬುದನ್ನು ಅರಿಯಬೇಕಿದೆ.

ಓಂ ಬಿಡುಗಡೆಗೆ ಪೊಲೀಸ್‌ ಇಲಾಖೆಯೇ ಅಡ್ಡಗಾಲು, ಡಾ ರಾಜ್‌ಕುಮಾರ್ ಮಾಡಿದ್ದೇನು?

ಆ ಸಮಸ್ಯೆಗೆ ಪರಿಹಾರ ಏನು ಅಂತ ಹೇಳಬೇಕಿದೆ.  ಮೊದಲು ಸಮಸ್ಯೆಗಳನ್ನು ಪಟ್ಟಿ ಮಾಡಿ. ಸ್ಟ್ರೈಕ್‌ ಮಾಡಿದ್ರೆ ಮತ್ತೆ ಸಮಸ್ಯೆ ಆಗೋದು ನಮಗೆ ತಾನೇ? ಮೊದಲೇ ಕೆಲಸ ಇಲ್ಲ ಅಂತ ಕೂತಿರುವ ನಾವು ಸ್ಟ್ರೈಕ್‌ ಮಾಡಿ ಇನ್ನೆಲ್ಲಿಗೆ ಹೋಗಬೇಕು. ಇದು ಕನ್ನಡ ಸಿನಿಪ್ರೇಕ್ಷಕರಿಗೆ ಹಾಗೂ ಉದ್ಯಮಕ್ಕೂ ಒಳ್ಳೆಯದಲ್ಲ. ಎಂದಿದ್ದಾರೆ ನಟ ವಿ ರವಿಚಂದ್ರನ್.

Latest Videos
Follow Us:
Download App:
  • android
  • ios