ಈಶ್ವರಿ 'ಶಾಂತಿ ಕ್ರಾಂತಿ' ಗಾಸಿಪ್‌ಗೆ ಇತಿಶ್ರೀ ಹಾಡಿದ ರವಿಚಂದ್ರನ್; ವೀರಾಸ್ವಾಮಿ ಹಾಗೆ ಹೇಳ್ಬಿಟಿದ್ರಾ?

ಮಲ್ಟಿ ಸ್ಟಾರ್‌ಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದಿನ ಕಾಲದ ಭಾರತದ ದಿಗ್ಗಜರು ಎನಿಸಿರುವ ನಟನಟಿಯರು ರವಿಚಂದ್ರನ್ ನಿರ್ಮಾಣದ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಟರಾದ ರಜನಿಕಾಂತ್, ನಾಗಾರ್ಜುನ, ರಮೇಶ್ ಅರವಿಂದ್, ಟೈಗರ್ ಪ್ರಭಾಕರ್..

Sandalwood actor V Ravichandran speaks about Shanti Kranti movie making time and loss srb

ನಟ, ನಿರ್ದೇಶಕ ವಿ ರವಿಚಂದ್ರನ್ ಅವರು ವೇದಿಕೆಯೊಂದರಲ್ಲಿ ಮಾತನಾಡುತ್ತಿರುವ ಹಳೆಯ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ರವಿಚಂದ್ರನ್ ಅವರು ತಮ್ಮ ನಾಲ್ಕು ಭಾಷೆಯ 'ಶಾಂತಿ ಕ್ರಾಂತಿ (Shanti Kranti)'ಚಿತ್ರದ ಬಗ್ಗೆ ಮಾತನಾಡಿದ್ದು ಆ ವೀಡಿಯೋದಲ್ಲಿದೆ. ಅದು ತುಂಬಾ ಮುಖ್ಯ ಮಾಹಿತಿಯಾಗಿದ್ದು, ಶಾಂತಿ ಕ್ರಾಂತಿ ಸಿನಿಮಾ ಬಗ್ಗೆ ಇದ್ದ ಎಲ್ಲ ಅಂತೆಕಂತೆಗಳಿಗೆ ಇತಿಶ್ರೀ ಹಾಡುವಂತಿದೆ. ಹಾಗಿದ್ದರೆ, ಆ ವೀಡಿಯೋದಲ್ಲೇನಿದೆ? ಈ ಬಗ್ಗೆ ನಟ ರವಿಚಂದ್ರನ್ ವಿವರವಾಗಿ ಮಾತನಾಡಿದ್ದಾರೆ. 

'1986ರಲ್ಲಿ ನನ್ ವೇಗ ತಡ್ಯೋಕೆ ಆಗಿರ್ಲಿಲ್ಲ, 86ರಲ್ಲಿ 'ಪ್ರೇಮಲೋಕ (Premaloka)' ಸಿನಿಮಾ ನಿರ್ಮಾಣ ಮಾಡಿದೆ, 1987ರಲ್ಲಿ ಅದು ಬಿಡುಗಡೆ ಆಯ್ತು. 1988ರಲ್ಲಿ 'ರಣಧೀರ (Ranadheera)'ರಿಲೀಸ್ ಆಗುತ್ತೆ, ಬಳಿಕ 'ಶಾಂತಿ ಕ್ರಾಂತಿ' ಅಂತ ನಾಲ್ಕು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತೆ. 10 ದಿನ ಶೂಟಿಂಗ್ ಮಾಡ್ತೀನಿ, ನಂಗೆ ಗೊತ್ತಾಗುತ್ತೆ, ಈ ಸಿನಿಮಾ ನಾವ್ ಯಾಕೋ ಸರಿ ಹೋಗ್ತಾ ಇಲ್ಲ, ಇದ್ಯಾಕೋ ಸರಿಯಾಗಿ ಬರ್ತಾ ಇಲ್ಲ ಅಂತ. ಕಥೆ ಯಾಕೋ ಸರಿಹೋಗ್ತಾ ಇಲ್ಲ, ದಾರಿ ತಪ್ತಾ ಇದೆ ಅಂತನೂ ಗೊತ್ತಾಗುತ್ತೆ. 

ವಿಷ್ಣುವರ್ಧನ್‌ಗೆ ಟಾಂಗ್ ಕೊಡಲು 'ದ್ರೋಹಿ' ಮಾಡಿದ್ರು ದ್ವಾರಕೀಶ್; ಯಾಕೆ ಮೂಡಿತ್ತು ವೈಮನಸ್ಯ?

ಆಗ ಅಪ್ಪನ ಹತ್ರ ಹೋಗಿ ' ಅಪ್ಪಾ ಈ ಸಿನಿಮಾ ಬೇಡ, ನಿಲ್ಲಿಸಿಬಿಡೋಣ ಅಂತೀನಿ'. ಆದ್ರೆ ಅಪ್ಪ ಒಂದ್ ಸೆಕೆಂಡ್‌ಗೆ ಥಟ್ ಅಂತ ಕೋಪ ಮಾಡ್ಕೊಂಡ್ಬಿಟ್ರು. ಬಳಿಕ 'ಯಾವತ್ತೂ ಜನಗಳಿಗೆ ಮೋಸ ಮಾಡ್ಬಾರ್ದು. ಸಿನಿಮಾ ಶುರು ಮಾಡಿದೀಯ, ನಾಲ್ಕು ಭಾಷೆ ಸಿನಿಮಾ, ನೀನೇ ಫಸ್ಟ್ ಮಾಡ್ತಾ ಇರೋದು, ನಿನ್ ನಂಬ್ಕೊಂಡು ರಜನಿಕಾಂತ್ ಡೇಟ್ ಕೊಟ್ಟಿದಾರೆ, ನಾಗಾರ್ಜುನ್ ಡೇಟ್ ಕೊಟ್ಟಿದಾರೆ, ಇದು ಈಶ್ವರಿ ಸಂಸ್ಥೆಯ ಪ್ರೆಸ್ಟೀಜ್ ಪ್ರಶ್ನೆ. ಯಾವ್ದೇ ಕಾರಣಕ್ಕೂ ನೀನು ಹೆಜ್ಜೆ ಹಿಂದೆ ಹಾಕೋದಿಲ್ಲ' ಅಂದ್ರು. 

ಎಲ್ಲಿದೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಬೆಟ್ಟ, ನೋಡಿದವರಿಗೆ ನೆನಪಾಗಿ ಹೇಳುವುದೇನು?

ಹೀಗಾಗಿ, ಶಾಂತಿ ಕ್ರಾಂತಿ ಸಿನಿಮಾ ನಾವ್ ಅಂದ್ಕೊಂಡಂಗೆ ಬರಲ್ಲ, ಆ ಸಿನಿಮಾ ಗೆಲ್ಲಲ್ಲ ಅಂತ ಗೊತ್ತಿದ್ದರೂ, ಆವತ್ತು ಆ ಸಿನಿಮಾನ ಮುಗಿಸ್ತೀನಿ ನಾನು. ಅದು ಒಂದ್ ಸಿನಿಮಾದಲ್ಲಿ, 1990-91ರಲ್ಲಿ ಹತ್ತತ್ರ 10 ಕೋಟಿ ಕಳಿತೀನಿ ನಾನು..' ಅಂದಿದ್ದಾರೆ ರವಿಚಂದ್ರನ್. ಹೌದು, ಅಂದು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ, ನಿರ್ಮಾಪಕರೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಈಶ್ವರಿ ಸಂಸ್ಥೆಯ ಮೂಲಕ ನಟ ರವಿಚಂದ್ರನ್ 'ಶಾಂತಿ ಕ್ರಾಂತಿ' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ ಆ ಸಿನಿಮಾ ಜನಮೆಚ್ಚುಗೆ ಗಳಿಸದೇ ಅಟ್ಟರ್ ಪ್ಲಾಫ್ ಆಗಿಬಿಡುತ್ತೆ. ಸ್ವತಃ ರವಿಚಂದ್ರನ್ ಅವರೇ ಹೇಳುವಂತೆ, ಆ ಸಿನಿಮಾದಿಂದ 1989-90ರ ದಶಕದಲ್ಲೇ ರವಿಚಂದ್ರನ್ ಅವರು ಸುಮಾರು 10 ಕೋಟಿ ರೂಪಾಯಿ ಹಣ ಕಳೆದುಕೊಳ್ಳುತ್ತಾರೆ. 

ವೀರ ಯೋಧನಾದ ಸೂಪರ್ ಹೀರೋ, ಅಶೋಕ ಚಕ್ರವರ್ತಿಯ 9 ರಹಸ್ಯಕಥೆ ಹೇಳಲಿರುವ ತೇಜ್ ಸಜ್ಜಾ!

ಅಂದಹಾಗೆ, ಮಲ್ಟಿ ಸ್ಟಾರ್‌ಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದಿನ ಕಾಲದ ಭಾರತದ ದಿಗ್ಗಜರು ಎನಿಸಿರುವ ನಟನಟಿಯರು ರವಿಚಂದ್ರನ್ ನಿರ್ಮಾಣದ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಟರಾದ ರಜನಿಕಾಂತ್, ನಾಗಾರ್ಜುನ, ರಮೇಶ್ ಅರವಿಂದ್, ಟೈಗರ್ ಪ್ರಭಾಕರ್, ಅಂಬರೀಷ್, ನಟಿಯರಾದ ಜೂಹಿ ಚಾವ್ಲಾ, ಖುಷ್ಬೂ ಮೊದಲಾದವರು ಈ ಚಿತ್ರದ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಸಕ್ಸಸ್ ಕಾಣಲಿಲ್ಲ. 

ನಟ ಕುಮಾರ್ ಗೋವಿಂದ್‌ಗೆ 'ಓಂ' ಸಿನಿಮಾ ಕೈ ತಪ್ಪಿಸಿದ್ಯಾರು, 'ಶ್' ಸಿನಿಮಾ ಮಾಡುವಂತಾಗಿದ್ದು ಯಾಕೆ?

Latest Videos
Follow Us:
Download App:
  • android
  • ios