ನಟ ಕುಮಾರ್ ಗೋವಿಂದ್‌ಗೆ 'ಓಂ' ಸಿನಿಮಾ ಕೈ ತಪ್ಪಿಸಿದ್ಯಾರು, 'ಶ್' ಸಿನಿಮಾ ಮಾಡುವಂತಾಗಿದ್ದು ಯಾಕೆ?
ಉಪೇಂದ್ರ ನಿರ್ದೇಶನದ ಓಂ ಹಾಗು ಶ್ ಚಿತ್ರಗಳ ಬಗ್ಗೆ, ಕುಮಾರ್ ಗೋವಿಂದ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಆ ವೀಡಿಯೋದಲ್ಲಿ ಮಾತನಾಡಿದ್ದಾರೆ. ಉಪೇಂದ್ರ ನಿರ್ದೇಶನದ ಈ ಎರಡೂ ಸಿನಿಮಾಗಳು ಅಂದು ಬ್ಲಾಕ್ ಬಸ್ಟರ್..
ನಟ ಉಪೇಂದ್ರ (Real Star Upendra)ಮಾತನಾಡಿರುವ ಹಳೆಯ ಸಂದರ್ಶನವೊಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ (Social Media)ವೈರಲ್ ಆಗುತ್ತಿವೆ. ಉಪೇಂದ್ರ ನಿರ್ದೇಶನದ ಓಂ ಹಾಗು ಶ್ ಚಿತ್ರಗಳ ಬಗ್ಗೆ, ಕುಮಾರ್ ಗೋವಿಂದ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಆ ವೀಡಿಯೋದಲ್ಲಿ ಮಾತನಾಡಿದ್ದಾರೆ. ಉಪೇಂದ್ರ ನಿರ್ದೇಶನದ ಈ ಎರಡೂ ಸಿನಿಮಾಗಳು ಅಂದು ಬ್ಲಾಕ್ ಬಸ್ಟರ್ ದಾಖಲಿಸಿದ್ದವು.
ಆದರೆ, ಶ್ ಚಿತ್ರವು ಲೋ ಬಜೆಟ್ ಹೊಂದಿದ್ದರೆ, ಓಂ ಚಿತ್ರವು ಬಿಗ್ ಬಜೆಟ್ ಹೊಂದಿತ್ತು. ಹಾಗಿದ್ದರೆ, ಈ ಬಗ್ಗೆ ನಟ-ನಿರ್ದೇಶಕ ಉಪೇಂದ್ರ ಏನು ಮಾತನಾಡಿದ್ದಾರೆ? ಈ ಬಗ್ಗೆ ಉಪೇಂದ್ರ 'ಕುಮಾರ್ ಗೋವಿಂದ್ (Kumar Govind)ಅವರ ಪರಿಚಯ ಆಗಿತ್ತು. ಅವರಿಗೆ ಒಂದು ಸಿನಿಮಾ ಮಾಡ್ಬೇಕು ಅಂತ. ನನ್ ಹತ್ರ ಎರಡು ಸ್ಕ್ರಿಪ್ಟ್ ಇತ್ತು. ಅವ್ರಿಗೆ ಓಂ (Om)ಸಿನಿಮಾ ಮಾಡ್ಬೇಕು, ರೌಡಿಸಂ ಸಿನಿಮಾ ಮಾಡ್ಬೇಕು ಅಂತ. ಆದ್ರೆ ನಾನು ಹೇಳಿದೆ, ನೀವು ಹೊಸಬ್ರು , ಓಂ ಸಿನಿಮಾ ನಿಮಗೆ ಅಲ್ಲ, ಅದ್ರಲ್ಲಿ ತುಂಬಾ ವಿಷಯಗಳಿವೆ, ಮೇಲಾಗಿ ಅದು ಬಿಗ್ ಬಜೆಟ್ ಸಿನಿಮಾ.
ಅಂಬರೀಷ್ ಕೈ ತಪ್ಪಿ 'ಬಂಧನ' ಸಿನಿಮಾ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ, ಘಟನೆ ಹಿಂದಿನ ಅಸಲಿಯತ್ತೇನು ?
ನಿಮಗೆ ಬೇರೆ ಚಿತ್ರ ಮಾಡೋಣ. ನೀವು ಹೊಸಬರು ಆಗಿರೋದ್ರಿಂದ ನಿಮ್ ಜತೆ ಬೇರೆ ಪಿಲ್ಲರ್ಸ್ ಇಟ್ಕೊಂಡು ಅಂತೇಳಿ ಕಾಶಿನಾಥ್ ಸರ್, ಸುರೇಶ್ ಹೆಬ್ಳೀಕರ್ ಅವ್ರನ್ನೂ ಹಾಕ್ಕೊಂಡು, ಸಸ್ಪೆನ್ಸ್, ಹಾರರ್ ಹಾಗು ಕಾಮಿಡಿ ಸಬ್ಜೆಕ್ಟ್ ಇರೋ ಸಣ್ಣ ಸಿನಿಮಾ ಮಾಡೋಣ ಅಂತೇಳಿ, ಕುಮಾರ್ ಗೋವಿಂದ್ ಅವ್ರಿಗೆ 'ಶ್' ಚಿತ್ರ ಮಾಡಿದ್ದಾಯ್ತು..' ಎಂದಿದ್ದಾರೆ.
ನಟ ಮೋಹನ್‌ಲಾಲ್ ಭೇಟಿಯಾದ 'ಕಾಂತಾರ' ರಿಷಬ್ ಶೆಟ್ಟಿ; ಸಡನ್ ಭೇಟಿ-ಮಾತುಕತೆ ಮರ್ಮವೇನು?
ಕುಮಾರ್ ಗೋವಿಂದ್ ನಟನೆ, ಉಪೇಂದ್ರ ಡೈರೆಕ್ಷನ್‌ನ 'ಶ್' ಸಿನಿಮಾ ಕಡಿಮೆ ಬಜೆಟ್‌ನಲ್ಲಿ ಸಿದ್ಧವಾಗಿ ಒಳ್ಳೆಯ ಗಳಿಕೆ ಕಂಡಿತ್ತು. ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದ ನಟ ಕುಮಾರ್ ಗೋವಿಂದ್ ಶ್ ಚಿತ್ರದ ಮೂಲಕ ಭಾರೀ ಸಕ್ಸಸ್ ಕಂಡರು. ಅದೇ ರೀತಿ ಅವರು ಮಾಡಬೇಕು ಅಂದುಕೊಂಡಿದ್ದ 'ಓಂ' ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಶ್ ಚಿತ್ರದ 'ಅವನಲ್ಲಿ ಅವಳಿಲ್ಲಿ..' ಹಾಡು ಅಂದು ಹೊಸ ಟ್ರೆಂಡ್ ಸೃಷ್ಟಿಸಿ ಸಂಗೀತ ಪ್ರೇಮಿಗಳ ಮನ ಗೆದ್ದಿತ್ತು.
'ಫಾರೆಸ್ಟ್' ಕಥೆ ಹೇಳೋದಿಕ್ಕೆ ಬಂದರು ಬ್ರಹ್ಮಚಾರಿ ಡೈರೆಕ್ಟರ್, ಚಂದ್ರಮೋಹನ್ ಸಿನಿಮಾದಲ್ಲಿ ಯಾರೆಲ್ಲ ಇದಾರೆ ನೋಡಿ!
ಆ ಚಿತ್ರದ ಮೂಲಕ ನಾಯಕನಟರಾದ ಕುಮಾರ್ ಗೋವಿಂದ್ ಅವರು ಮುಂದೆ ನಟಿ ಸುಧಾರಾಣಿ ಅವರೊಂದಿಗೆ 'ಅನುರಾಹ ಸಂಗಮ' ಸಿನಿಮಾದಲ್ಲಿ ಕೂಡ ನಟಿಸಿದರು. ಆ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಒಟ್ಟಿನಲ್ಲಿ, ಕುಮಾರ್ ಗೋವಿಂದ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಹೀರೋ ಮಾಡಿದ ಖ್ಯಾತಿ ಉಪೇಂದ್ರ ಅವರಿಗೆ ಸಲ್ಲುತ್ತದೆ.
ಸ್ಕ್ರೀನ್ ಮೇಲೆ ಮೆರೆಯಲು ಸಜ್ಜಾಗಿದೆ 'ನಾಲ್ಕನೇ ಆಯಾಮ', ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ!
ಕಾಶೀನಾಥ್ ಗರಡಿಯಲ್ಲಿ ಪಳಗಿದ್ದ ಉಪೇಂದ್ರ ಅವರು ಕಟ್ಟಿಕೊಟ್ಟ ಶ್ ಚಿತ್ರವು ಹೊಸ ರೀತಿಯ ಪ್ರಯತ್ನಕ್ಕೆ ಸಾಕ್ಷಿಯಾಗಿ ವಿಭಿನ್ನ ಸಿನಿಮಾ ಎನಿಸಿದೆ. ಹಾರರ್-ಕಾಮಿಡಿ-ಸಸ್ಪೆನ್ಸ್ ಸಂಗಮದ ಈ ಚಿತ್ರವು ಕಥೆ, ಚಿತ್ರಕಥೆ ಹಾಗು ಸಂಗೀತದ ಸಂಗಮ ಎನಿಸಿ ಕನ್ನಡ ಪ್ರೇಕ್ಷಕರಿಗೆ ಅಚ್ಚುಮೆಚ್ಚು ಎನಿಸಿತು. ಇಂದೂ ಕೂಡ ಆ ಸಿನಿಮಾ ಬಗ್ಗೆ ಮಾತನಾಡುವವರಿದ್ದಾರೆ, ಮತ್ತೆ ಮತ್ತೆ ನೋಡುವವರೂ ಇದ್ದಾರೆ.
ಚುನಾವಣೆಯಲ್ಲಿ ಠೇವಣಿ ಕಳಕೊಂಡ ದ್ವಾರಕೀಶ್‌ರನ್ನು 'ಆಪ್ತಮಿತ್ರ' ವಿಷ್ಣುವರ್ಧನ್ ಗೆಲ್ಲಿಸಿದ್ರು!