ನಾಳೆ, ಜುಲೈ 12ರಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕರ್ನಾಟಕದ ಶಿವಣ್ಣ ಅಭಿಮಾನಿಗಳು ಸಿದ್ಧರಾಗಿದ್ದಾರೆ. 64ರ ವಯಸ್ಸಿನಲ್ಲೂ ಹದಿಹರೆಯದ ಹುಡುರಂತೆ ಚಟುವಟಿಕೆಯಿಂದ ಇರುವ ಶಿವಣ್ಣನ ಜನ್ಮದಿನವು ಈ ಬಾರಿ ಅಭಿಮಾನಿಗಳ ಜೊತೆ ನಡೆಯಲಿದೆ. ಅದಕ್ಕಾಗಿ 'ಶ್ರೀಮುತ್ತು' ಶೃಂಗಾರಗೊಳ್ಳುತ್ತಿದೆ.
ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ 64ನೇ ಜನ್ಮದಿನದ ಸಂಭ್ರಮ: 'ಶ್ರೀಮುತ್ತು' ನಿವಾಸದಲ್ಲಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ!
ಸ್ಯಾಂಡಲ್‌ವುಡ್‌ನ 'ಸೆಂಚುರಿ ಸ್ಟಾರ್', ಅಭಿಮಾನಿಗಳ ಪಾಲಿನ ಮೆಚ್ಚಿನ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಡಾ. ಶಿವರಾಜ್‌ಕುಮಾರ್ (Shivarajkumar) ಅವರ 64ನೇ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಶಿವಣ್ಣನ ಬರ್ತ್‌ಡೇ ಅಂದ್ರೆ ಅದು ಕೇವಲ ಒಂದು ಸಂಭ್ರಮವಲ್ಲ, ಅದೊಂದು ಭಾವನಾತ್ಮಕ ಹಬ್ಬ. ಜುಲೈ 12ರಂದು ಶಿವಣ್ಣನ ಜನ್ಮದಿನವಿದ್ದರೂ, ಅಭಿಮಾನಿಗಳ ಪಾಲಿಗೆ ಹಬ್ಬದ ಅಬ್ಬರ ಜುಲೈ 11ರ ರಾತ್ರಿಯಿಂದಲೇ ಶುರುವಾಗುತ್ತದೆ.
ಮಧ್ಯರಾತ್ರಿ 12ಕ್ಕೆ 'ಶ್ರೀಮುತ್ತು' ಮುಂದೆ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ!
ಜುಲೈ 11ರ ರಾತ್ರಿ ಸರಿಯಾಗಿ 12 ಗಂಟೆಗೆ ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣನ ನಿವಾಸ 'ಶ್ರೀಮುತ್ತು' ಬಳಿ ಪಟಾಕಿಗಳ ಆರ್ಭಟ, ಅಭಿಮಾನಿಗಳ ಶಿಳ್ಳೆ-ಚಪ್ಪಾಳೆಗಳ ನಡುವೆ ಸಂಭ್ರಮ ಮುಗಿಲು ಮುಟ್ಟಲಿದೆ. ಅಭಿಮಾನಿಗಳ ಸಮ್ಮುಖದಲ್ಲಿ ಶಿವಣ್ಣ ಕೇಕ್ ಕಟ್ ಮಾಡಲಿದ್ದಾರೆ.
ಆದರೆ, ಈ ಬಾರಿ ಶಿವಣ್ಣ ಒಂದು ಪ್ರೀತಿಯ ಮನವಿ ಮಾಡಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ. "ಯಾರೂ ಕೇಕ್, ಹೂವಿನ ಹಾರ ಅಥವಾ ದುಬಾರಿ ಉಡುಗೊರೆಗಳನ್ನು ತರಬೇಡಿ, ನಿಮ್ಮ ಪ್ರೀತಿ ಮತ್ತು ಹರಕೆ ನನಗಿದ್ದರೆ ಅಷ್ಟೇ ಸಾಕು" ಎಂದು ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಇದೀಗ ನಟ ಶಿವರಾಜ್‌ಕುಮಾರ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಆಗಲೇ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಂದು ರಾತ್ರಿ ಶಿವಣ್ಣರ ಮನೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಅಮರನಾಥದಲ್ಲಿ ಶಿವಣ್ಣನಿಗಾಗಿ ವಿಶೇಷ ಪ್ರಾರ್ಥನೆ!
ನಟ ಶಿವಣ್ಣನ ಮೇಲಿರುವ ಅಭಿಮಾನ ಗಡಿ ದಾಟಿದೆ ಎನ್ನುವುದಕ್ಕೆ ಒಂದು ವಿಶೇಷ ಉದಾಹರಣೆ ಇಲ್ಲಿದೆ. ಶಿವಣ್ಣನ ಜೊತೆ ಪ್ರತಿದಿನ ಬೆಳಗ್ಗೆ ವಾಕಿಂಗ್ ಮಾಡುವ ಗೆಳೆಯರ ಬಳಗವು ಈ ಬಾರಿ ಶಿವಣ್ಣ ಮತ್ತು ಗೀತಕ್ಕ ಅವರ ಹೆಸರಿನಲ್ಲಿ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಹಿಮಲಿಂಗನ ಸನ್ನಿಧಿಯಲ್ಲಿ ಶಿವಣ್ಣನ ಆರೋಗ್ಯ ಮತ್ತು ಸುಖಕರ ಬದುಕಿಗಾಗಿ ಅವರು ಅಲ್ಲಿಂದಲೇ ವಿಡಿಯೋ ಮಾಡಿ ವಿಶ್ ಮಾಡಿದ್ದಾರೆ. ಇದು ಶಿವಣ್ಣನ ಸರಳ ಹಾಗೂ ಸ್ನೇಹಪರ ವ್ಯಕ್ತಿತ್ವಕ್ಕೆ ಸಂದ ಗೌರವ.
ಒಟ್ಟಾರೆಯಾಗಿ, ನಾಳೆ, ಜುಲೈ 12ರಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕರ್ನಾಟಕದ ಶಿವಣ್ಣ ಅಭಿಮಾನಿಗಳು ಸಿದ್ಧರಾಗಿದ್ದಾರೆ. 64ರ ವಯಸ್ಸಿನಲ್ಲೂ ಹದಿಹರೆಯದ ಹುಡುರಂತೆ ಚಟುವಟಿಕೆಯಿಂದ ಇರುವ ಶಿವಣ್ಣನ ಜನ್ಮದಿನವು ಈ ಬಾರಿ ಅಭಿಮಾನಿಗಳ ಜೊತೆ ನಡೆಯಲಿದೆ. ಅದಕ್ಕಾಗಿ 'ಶ್ರೀಮುತ್ತು' ಶೃಂಗಾರಗೊಳ್ಳುತ್ತಿದೆ.


