ನಮ್ಮ ಮನೆಯಲ್ಲಿ ಅವರವರ ಕೋಣೆಯಲ್ಲಿ ಕುಳಿತು ಊಟ ಮಾಡುವ ಪದ್ಧತಿಯಿಲ್ಲ; ರಾಘವೇಂದ್ರ ರಾಜ್‌ಕುಮಾರ್

ಅಪ್ಪಾಜಿ ನಮಗೆ ಊಟಕ್ಕೆ ಯಾವತ್ತೂ ಕಡಿಮೆ ಮಾಡಿಲ್ಲ. ಮನೆಗೆ ಯಾರೇ ಬಂದರೂ ಅಪ್ಪಾಜಿ 'ಮೊದಲು ಊಟ ಕೊಡಿ, ಆಮೇಲೆ ಮಾತು..' ಎನ್ನುತ್ತಿದ್ದರು. ಮನೆಗೆ ಯಾರೇ ಬಂದರೂ...

Sandalwood actor Raghavendra Rajkumar talks about Dr Rajkumar and Lunch in Home srb

ಇಂದು (24 ಏಪ್ರಿಲ್) ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಗಾಜನೂರಿನಲ್ಲಿ 24 ಏಪ್ರಿಲ್ 1929ರಂದು ಮುತ್ತುರಾಜ್ ಜನನವಾಯಿತು. ಇಂದು ಡಾ ರಾಜ್‌ಕುಮಾರ್ ಅವರ 95ನೇ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ. ಅಣ್ಣಾವ್ರು ಅಗಲಿ ಇಂದಿಗೆ 18 ವರ್ಷಗಳು ಕಳೆದುಹೋಗಿವೆ. ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್ ಸಮಾಧಿಗೆ ಅದ್ದೂರಿ ಪೂಜೆ ನಡೆದಿದೆ. ರಾಜ್ ಪುಣ್ಯಭೂಮಿಗೆ ರಾಜ್ ಕುಟುಂಬ ಪೂಜೆ ಸಲ್ಲಿಸಿದೆ. 'ನಟಸಾರ್ವಭೌಮ'ನ ನೆನಪಿನಲ್ಲಿ ರಾಜವಂಶದ ಫ್ಯಾನ್ಸ್ ಅಲ್ಲಿ ಕಿಕ್ಕಿರಿದು ಸೇರಿದ್ದಾರೆ. ರಾಜ್ ಸಮಾಧಿಗೆ ಅಭಿಮಾನಿಗಳು ಲಗ್ಗೆ ಇಟ್ಟಿದ್ದಾರೆ. 

ಡಾ ರಾಜ್‌ಕುಮಾರ್ ಹುಟ್ಟುಹಬ್ಬದ ಈ ದಿನ ಡಾ ರಾಜ್‌ ಮಗ ಹಾಗೂ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಅಪ್ಪಾಜಿಯ ಬಗ್ಗೆ ಮಾತನಾಡಿದ್ದ ವೀಡಿಯೋ ವೈರಲ್ ಆಗುತ್ತಿದೆ. ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟ ರಾಘವೇಂದ್ರ ರಾಜ್‌ಕುಮಾರ್ 'ಅಪ್ಪಾಜಿ ನಮಗೆ ಊಟಕ್ಕೆ ಯಾವತ್ತೂ ಕಡಿಮೆ ಮಾಡಿಲ್ಲ. ಮನೆಗೆ ಯಾರೇ ಬಂದರೂ ಅಪ್ಪಾಜಿ 'ಮೊದಲು ಊಟ ಕೊಡಿ, ಆಮೇಲೆ ಮಾತು..' ಎನ್ನುತ್ತಿದ್ದರು. ಮನೆಗೆ ಯಾರೇ ಬಂದರೂ 'ಊಟ ಮಾಡ್ತೀರಾ, ಊಟ ಆಗಿದ್ಯಾ ಎಂದು ಯಾವತ್ತೂ ಕೇಳ್ತಾ ಇರ್ಲಿಲ್ಲ. 

ಡಾ ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂಭ್ರಮದಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದೇನು?

ನಮ್ಮ ಅಪ್ಪಾಜಿ ಮನೆಯಲ್ಲಿ ಊಟದ ವಿಷಯದಲ್ಲಿ ಯಾವ ತರಹ ಇರುತ್ತಿದ್ದರು ಎಂದರೆ, ನಾವು ಇಷ್ಟೆಲ್ಲಾ ಕೆಲಸ ಮಾಡುವುದು ಊಟದ ಸಲುವಾಗಿ.. ಅದನ್ನಾದರೂ ಒಟ್ಟಿಗೆ ಮಾಡೋಣ ಎನ್ನುತ್ತಿದ್ದರು, ಕೆಲಸಕ್ಕಾಗಿ ನಾವೆಲ್ಲರೂ ಬೇರೆ ಬೇರೆ ಕಡೆ ಹೋಗಲೇಬೇಕು. ಊಟವನ್ನಾದರು ಒಟ್ಟಿಗೆ ಮಾಡಬೇಕು ಎಂದು ನಮ್ಮನ್ನೆಲ್ಲ ಕರೆದು ಒಟ್ಟಾಗಿ ಕುಳ್ಳಿರಿಸಿಕೊಂಡು ಊಟ ಮಾಡುತ್ತಿದ್ದರು. ಈಗಲೂ ನಮ್ಮ ಮನೆಯಲ್ಲಿ ಅಪ್ಪಾಜಿ ಹೇಳಿಕೊಟ್ಟ ಅ ಪಾಠವನ್ನು ತಪ್ಪದೇ ಪಾಲಿಸುತ್ತೇವೆ. 

ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಡಾ. ರಾಜ್‌ಕುಮಾರ್‌ ತಬ್ಬಿ, ಮುತ್ತಿಟ್ಟಿದ್ದೇಕೆ ಎಂಜಿಆರ್?

ಇಂದಿಗೂ ಕೂಡ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಒಟ್ಟಿಗೇ ಕುಳಿತು ಊಟ ಮಾಡುತ್ತೇವೆ. ಅಪ್ಪು ಇದ್ದಾಗ ವಾರದಲ್ಲಿ ಒಂದು ದಿನ ಅವನು ನಮ್ಮ ಮನೆಯಲ್ಲಿ ಹಾಗು ನಾನು ಅವರ ಮನೆಯಲ್ಲಿ ಊಟ ಮಾಡುವ ಪದ್ಧತಿ ಇಟ್ಟುಕೊಂಡಿದ್ದೆವು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಕೂಡ ಅಷ್ಟೇ, ಮನೆಯವರೆಲ್ಲರೂ ಅವರ ಜತೆ ಕುಳಿತು ಊಟ ಮಾಡಲೇಬೇಕು. ನಮ್ಮ ಮನೆಯಲ್ಲಿ ಅವರವರ ಕೋಣೆಯಲ್ಲಿ ಪ್ರತ್ಯೇಕವಾಗಿ ಕುಳಿತು ಊಟ ಮಾಡುವ ಪದ್ಧತಿ ಆಗಲೂ ಇರಲಿಲ್ಲ, ಈಗಲೂ ಇಲ್ಲ' ಎಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್. 

ಡಾ ರಾಜ್‌ಕುಮಾರ್ 'ಐದು' ಶ್ರೇಷ್ಠ ಸಿನಿಮಾಗಳು; ಇಂದು 'ಬಂಗಾರದ ಮನುಷ್ಯ'ನ ಹುಟ್ಟಿದ ಹಬ್ಬ!

Latest Videos
Follow Us:
Download App:
  • android
  • ios