Asianet Suvarna News Asianet Suvarna News

ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಡಾ. ರಾಜ್‌ಕುಮಾರ್‌ ತಬ್ಬಿ, ಮುತ್ತಿಟ್ಟಿದ್ದೇಕೆ ಎಂಜಿಆರ್?

ಅಂದು ಡಾ ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಗೆ ಧುಮುಕಿದ್ದರು. ಬಳಿಕ, ಡಾ ರಾಜ್ ನೇತೃತ್ವದಲ್ಲಿಯೇ ಗೋಕಾಕ್ ಚಳುವಳಿ ಮುಂದುವರೆಯಿತು. ಮೊದಮೊದಲು ಚಳುವಳಿಗೆ ಸರಿಯಾದ ರೂಪುರೇಷೆ ಇಲ್ಲವೆಂಬಂತೆ ತೋರುತ್ತಿದ್ದರೂ..

Former Tamil Nadu CM MGR came to Bangalore Hugs and Kisses Dr Rajkumar srb
Author
First Published Apr 24, 2024, 4:58 PM IST | Last Updated Apr 24, 2024, 5:03 PM IST

ಗೋಕಾಕ್ ಚಳುವಳಿ ಎಂದರೆ ಮೊದಲು ನೆನಪಾಗುವುದೇ ಡಾ ರಾಜ್‌ಕುಮಾರ್. 1980ರಲ್ಲಿ ಶುರುವಾದ ಗೋಕಾಕ್ ಚಳುವಳಿ (Gokak Movement)ಕನ್ನಡ ಭಾಷೆಯ ಮಟ್ಟಿಗೆ ಮುಖ್ಯವಾದ ಒಂದು ಮೈಲಿಗಲ್ಲು. ಕನ್ನಡ ಭಾಷೆಗೆ ಸರಿಯಾದ ಸ್ಥಾನಮಾನ ಇಲ್ಲದೇ ಸಾಕಷ್ಟು ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಗೋಕಾಕ್ ಚಳುವಳಿ ಶುರುವಾಗಬೇಕಾಯ್ತು. ಅಂದು ಸಣ್ಣದಾಗಿ ಪ್ರಾರಂಭವಾದ ಗೋಕಾಕ್ ಚಳುವಳಿ ಬಳಿಕ ಉಗ್ರರೂಪ ತಾಳಿ ಲಕ್ಷಾಂತರ ಜನರು ಅದರಲ್ಲಿ ಭಾಗಿಯಾಗಿ ಚಳುವಳಿ ಭಾರೀ ಯಶಸ್ವಿಯಾಯಿತು. 

ಅಂದು ಡಾ ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಗೆ ಧುಮುಕಿದ್ದರು. ಬಳಿಕ, ಡಾ ರಾಜ್ ನೇತೃತ್ವದಲ್ಲಿಯೇ ಗೋಕಾಕ್ ಚಳುವಳಿ ಮುಂದುವರೆಯಿತು. ಮೊದಮೊದಲು ಚಳುವಳಿಗೆ ಸರಿಯಾದ ರೂಪುರೇಷೆ ಇಲ್ಲವೆಂಬಂತೆ ತೋರುತ್ತಿದ್ದರೂ ಕಾಲಕಳೆದಂತೆ ಚಳುವಳಿಗೆ ಸ್ಪಷ್ಟ ಉದ್ದೇಶ ಬಂದುಬಿಟ್ಟಿತು. ಡಾ ರಾಜ್‌ಕುಮಾರ್ ನೇತೃತ್ವದ ಗೋಕಾಕ್ ಚಳುವಳಿ ಕನ್ನಡ ಭಾಷೆಯ ಬಗ್ಗೆ ಉಗ್ರರೂಪ ತಳೆಯುತ್ತಿದ್ದಂತೆ , ಅದು ತಮಿಳು  ಭಾಷೆಯ ವಿರುದ್ಧ ನಡೆಯುತ್ತಿರುವ ಚಳುವಳಿ ಎಂಬ ಅಪಪ್ರಚಾರ ಪಡೆಯಿತು. 

ಡಾ ರಾಜ್‌ಕುಮಾರ್ 'ಐದು' ಶ್ರೇಷ್ಠ ಸಿನಿಮಾಗಳು; ಇಂದು 'ಬಂಗಾರದ ಮನುಷ್ಯ'ನ ಹುಟ್ಟಿದ ಹಬ್ಬ!

ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಸೂಕ್ತ ಸ್ಥಾನಮಾನ ದೊರಕಬೇಕೆಂಬ ಆಗ್ರಹವೇ ಗೋಕಾಕ್ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. ಆಡಳಿತದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ, ಪಠ್ಯಕ್ರಮದಲ್ಲಿ ಮೊದಲ ಆದ್ಯತೆ ಸೇರಿದಂತೆ, ಕನ್ನಡ ಭಾಷೆಯನ್ನು ಕರ್ನಾಟಕದಲ್ಲಿ ಮೊದಲ ಭಾಷೆಯಾಗಿ ಪರಿಗಣಿಸಬೇಕೆಂಬ ಬೇಡಿಕೆ ಈ ಗೋಕಾಕ್ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. ಯಾವಾಗ, ಈ ಉದ್ದೇಶದ ಬಗ್ಗೆ ಅಪಪ್ರಚಾರ ಶುರುವಾಗಿ, ಗೋಕಾಕ್ ಚಳುವಳಿ ತಮಿಳು ಭಾಷೆ ಹೇರಿಕೆ ವಿರುದ್ಧ ನಡೆಯುತ್ತಿರುವ  ಹುನ್ನಾರ ಎಂಬ ಅಪಪ್ರಚಾರ ಪಡೆಯಿತೋ, ಆಗ ಡಾ ರಾಜ್‌ಕುಮಾರ್ ಮೇಲೆ ಹಲ್ಲೆಯಾಯಿತು. 

ನಾನು ಒಮ್ಮೆ ಒಂದ್ ಸ್ಟೆಪ್ ಮಾತ್ರ ತಗೊಳ್ಳೋದು; ಮೃಣಾಲ್ ಠಾಕೂರ್ ಮಾತು ಕೇಳಿ ಶಾಕ್ ಆಗ್ಬೇಡಿ!

ಗೋಕಾಕ್ ಚಳುವಳಿ ಕಾರಣದಿಂದ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ಅದೆಷ್ಟೇ ಬೇಸರವಾಗಿದ್ದರೂ ಅದನ್ನು ಡಾ ರಾಜ್‌ಕುಮಾರ್ ಅವರು ಹೊರಗಡೆ ತೋರಿಸಿಕೊಳ್ಳಲೇ ಇಲ್ಲ. ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ಎಲ್ಲೂ ಮಾತನಾಡದೇ ಡಾ ರಾಜ್‌ ಅವರು ಕನ್ನಡ ಭಾಷೆಯ ಮೇಲಿನ ತಮ್ಮ ಅಭಿಮಾನವನ್ನು ಮರೆಯುತ್ತಲೇ ಇದ್ದರು. ಆ ವೇಳೆ ಒಮ್ಮೆ ಕರ್ನಾಟಕಕ್ಕೆ ಬಂದ ತಮಿಳು ನಾಡು ಮಾಜಿ ಮುಖ್ಯಮಂತ್ರಿ, ಹಿರಿಯ ಧುರೀಣ ಎಂಜಿಆರ್‌ ಅವರು ಡಾ ರಾಜ್‌ಕುಮಾರ್ ಅವರನ್ನು ಭೇಟಿಯಾಗಿ ತಬ್ಬಿಕೊಂಡು ಮುತ್ತಿಟ್ಟಿದ್ದರು. 

ಸೂಪರ್ ಹಿಟ್ 'ಹನುಮಾನ್' ಸಿನಿಮಾ ಮಾಡಿದ್ದೇಕೆ; ಭಾರೀ ಸೀಕ್ರೆಟ್‌ ಬಿಚ್ಚಿಟ್ಟ ತೇಜಾ ಸಜ್ಜಾ!

Latest Videos
Follow Us:
Download App:
  • android
  • ios