ನಟ ಕೋಮಲ್‌ ಈಗ ಹೊಸ ಚಿತ್ರದ ಮೂಲಕ ಬರುತ್ತಿದ್ದಾರೆ. ವಿಶೇಷ ಅಂದರೆ ಕಾಮಿಡಿ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಬರ್ಟ್‌ ಸಿನಿಮಾದ ಸಂಭಾಷಣಾಕಾರ ಕೆಎಲ್‌ ರಾಜಶೇಖರ್‌ ಚೊಚ್ಛಲ ನಿರ್ದೇಶನದ ಚಿತ್ರ ಇದು. ಸಿನಿಮಾ ನಿರ್ಮಿಸುತ್ತಿರುವುದು ಕ್ರಿಸ್ಟಲ್‌ಪಾರ್ಕ್ನ ಟಿ ಆರ್‌ ಚಂದ್ರಶೇಖರ್‌.

ಕಾಮಿಡಿ ಕಿಲಾಡಿಗಳು, ಮಜಾಭಾರತ ರಿಯಾಲಿಟಿ ಶೋಗಳಿಗೆ ಬರವಣಿಗೆ ಮಾಡಿದ ಖ್ಯಾತಿ ಕೂಡ ರಾಜಶೇಖರ್‌ ಅವರಿಗೆ ಇದೆ. ಪನ್‌ ಮತ್ತು ಮಾಸ್‌ ಡೈಲಾಗ್‌ಗಳಿಂದ ಫೇಮಸ್‌ ಆಗಿದ್ದ ರಾಜಶೇಖರ್‌ ಈಗ ಕೋಮಲ್‌ ಅವರಿಗೆ ನಗಿಸುವ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಸೆಪ್ಟಂಬರ್‌ ತಿಂಗಳಿನಿಂದ ಚಿತ್ರೀಕರಣ ನಡೆಯಲಿದೆ.

ಕೋಮಲ್‌ ಮದುವೆಯಾದ 20 ದಿನದಲ್ಲಿ ತಾಯಿ ಕಳೆದುಕೊಂಡ ಜಗ್ಗೇಶ್‌; ನೋವಿನ ಕಥೆ!

ರಾಜಶೇಖರ್‌ ಮಾಡಿಕೊಂಡಿದ್ದ ಕತೆ ಚೆನ್ನಾಗಿದೆ. ಮನರಂಜನೆಯೇ ಚಿತ್ರದ ಪ್ರಧಾನ ಅಂಶ. ತುಂಬಾ ದಿನಗಳ ನಂತರ ಮತ್ತೆ ತೆರೆ ಮೇಲೆ ನಗಿಸುವುದಕ್ಕೆ ಈ ಚಿತ್ರದ ಮೂಲಕ ಬರುತ್ತಿದ್ದೇನೆ. ಇದರ ಜತೆಗೆ ಬೇರೆ ರೀತಿಯ ಚಿತ್ರಗಳನ್ನೂ ಮಾಡಲಿದ್ದೇನೆ. ಹೊಸ ಹೊಸ ಕತೆಗಳ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಬಹುದು ನನ್ನ ಆಸೆ ಎಂದಿದ್ದಾರೆ ನಟ ಕೋಮಲ್.

'ಕಾಮಿಡಿ ಕಿಲಾಡಿ'ಯಲ್ಲಿ ಕೋಮಲ್ ಜಗ್ಗೇಶ್ ಕಮಾಲ್!

ಇನ್ನು ಲಾಕ್‌ಡೌನ್‌ನಲ್ಲಿ ನಟ ಕಳೆದ ಒಂದು ವರ್ಷದಿಂದ ಪ್ರತಿ ವಾರ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾ ಬರುತ್ತಿದ್ದ ಮಾಯಸಂದ್ರದಲ್ಲಿರುವ ಭೈರವೇಶ್ವರ ದೇವಸ್ಥಾನವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಹೊಸ ಸಿನಿಮಾಗಾಗಿ ದೇಹ ದಂಡಿಸಿಕೊಳ್ಳುತ್ತಿದ್ದ, ಜಿಮ್ ತರಬೇತುದಾರರಿಂದ ತಯಾರಿ ಮಾಡಿಕೊಳ್ಳುತ್ತಿದ್ದದ್ದೂ ಈಗ ಇಲ್ಲ. ಜಿಮ್ ಗೆ ಹೋಗಲು ಆಗತ್ತಿಲ್ಲ. ಜಿಮ್ ತರಬೇತುದಾರರನ್ನು ಮನೆಗೂ ಕರೆಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಇದ್ದಕ್ಕಿದಂತೆ ಜಿಮ್ ಬಿಡಬೇಕಾಗಿ ಬಂದಿದ್ದು ಇನ್ನೊಂದು ನೋವು ಎಂದು ಇತ್ತೀಚೆಗೆ ಹೇಳಿದ್ದರು.