Asianet Suvarna News Asianet Suvarna News

ಜನ್ಮದಿನಕ್ಕೂ ಮುನ್ನ ಸಿಎಂ ಭೇಟಿ ಮಾಡಿದ ಕಿಚ್ಚ.. ಏನ್ ವಿಶೇಷ?

* ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್
* ಇದೊಂದು ಸೌಹಾರ್ದಯುತ ಭೇಟಿ
* ಕೊರೋನಾ ನಿಯಮದ ಕಾರಣ ಜನ್ಮದಿನ ಆಚರಣೆ ಇಲ್ಲ ಎಂದು ತಿಳಿಸಿರುವ ಸುದೀಪ್

Sandalwood Actor Kiccha Sudeep Meets CM Basavaraj Bommai mah
Author
Bengaluru, First Published Aug 31, 2021, 6:26 PM IST
  • Facebook
  • Twitter
  • Whatsapp

ಬೆಂಗಳೂರು(ಆ. 31) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಟ ಕಿಚ್ಚ' ಸುದೀಪ್ ಅವರು ಭೇಟಿಯಾಗಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಅವರನ್ನು ಭೇಟಿಯಾದ ಸುದೀಪ್ ಮಾತುಕತೆ ನಡೆಸಿದ್ದಾರೆ.

ಬೊಮ್ಮಾಯಿ ಕುಟುಂಬದ ವಿಶೇಷ ನಂಟು ಹೊಂದಿರುವ ಸುದೀಪ್ ಸಿಎಂ ಭೇಟಿ ಮಾಡಿದ್ದಾರೆ.  ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಪಡೆದಾಗ, ಸುದೀಪ್ ಟ್ವೀಟ್ ಮಾಡಿ, ಅಭಿನಂದಿಸಿದ್ದರು. ಮಾಮಾ ಎಂದೇ ಬೊಮ್ಮಾಯಿ ಅವರನ್ನು ಪ್ರೀತಿಯಿಂದ ಕರೆದಿದ್ದರು.

ಡಿಫರೆಂಟ್ ಪೋಟೋ ಶೂಟ್ ನಲ್ಲಿ ಮಿಂಚಿದ ಕಿಚ್ಚ

ನಟ ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2ರಂದು 50ನೇ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಕೊರೋನಾ ಕಾರಣಕ್ಕೆ ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ. ಅಭಿಮಾನಿಗಳು ಇದ್ದಲ್ಲಿಂದಲೇ ಶುಭ ಹಾರೈಸಬೇಕು ಎಂದು ಕೇಳಿಕೊಂಡಿದ್ದಾರೆ.

ಇನ್ನು, ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರದ ಸಣ್ಣ ಝಲಕ್ ಬಿಡುಗಡೆಯಾಗಲಿದೆ. ಸೆ.2ರಂದು ಬೆಳಗ್ಗೆ 11.05ಕ್ಕೆ 'ವಿಕ್ರಾಂತ್ ರೋಣ' ಚಿತ್ರದ 'ದಿ ಡೆಡ್ ಮ್ಯಾನ್ಸ್ ಆಂಥೆಮ್' ರಿಲೀಸ್ ಆಗಲಿದೆ.  ಕೋಟಿಗೊಬ್ಬ 3  ಮತ್ತು ವಿಕ್ರಾಂತ್ ರೋಣ ಸಾಕಷ್ಟು ನಿರೀಕ್ಷೆ ಮೂಡಿಸಿದೆ. 

Follow Us:
Download App:
  • android
  • ios