ಡಾಲಿ ಧನಂಜಯ್ ಮನೆಗೆ ಕೊರೋನಾ ದಾಳಿ ಇಟ್ಟಿತ್ತು. ಮನೆಯಲ್ಲಿದ್ದ 12 ಮಂದಿಗೂ ಕೊರೋನಾ ಪಾಸಿಟಿವ್ ಆಗಿತ್ತು. ಸ್ವತಃ ಧನಂಜಯ್ ಅವರಿಗೂ ಕೊರೋನಾ ಪಾಸಿಟಿವ್ ಬಂದಿತ್ತು. ಕೊರೋನಾ ಗೆದ್ದು ಬಂದಿದ್ದು, ತಮ್ಮ ಹಳ್ಳಿಯಲ್ಲಿ ಒಂದು ತಿಂಗಳು ಕಳೆದಿದ್ದನ್ನು ನಟ ಧನಂಜಯ್ ಅವರೇ ಹೇಳಿಕೊಂಡಿದ್ದಾರೆ.

- ಕಳೆದ ವರ್ಷ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದೆ. ಆದರೆ, ಈ ಬಾರಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಕಾರಣ ಕೊರೋನಾ ಸಂಕಷ್ಟ.

- ಬೆಂಗಳೂರಿನಲ್ಲಿ ಸುಮ್ಮನೆ ಕೂರುವ ಬದಲು ಹುಟ್ಟೂರಾದ ಅರಸೀಕೆರೆಗೆ ಹೋಗಿದ್ದೆ. ಕೊರೋನಾ ಎರಡನೇ ಅಲೆ ಬಂದಾಗ ಹೀಗೆ ಹುಟ್ಟೂರಿಗೆ ಹೋಗಿ ಒಂದು ತಿಂಗಳು ಅಲ್ಲೇ ಇದ್ದೆ. ತುಂಬಾ ದಿನಗಳಿಂದ ಮಿಸ್ ಮಾಡಿಕೊಂಡ ಹುಟ್ಟೂರಿನ ಜೀವನ ಮತ್ತೆ ದಕ್ಕಿದಂತಾಯಿತು.

ಕುಟುಂಬಕ್ಕೆ ಸಮಯ ನೀಡೋದು ಮುಖ್ಯ, ಈ ಪ್ಯಾಂಡಮಿಕ್ ನೋವು ನೀಡುತ್ತಿದೆ: ನಟ ಧನಂಜಯ್ ..

- ಒಂದೇ ತಿಂಗಳಲ್ಲಿ ನಮ್ಮ ಮನೆಯಲ್ಲಿ 12 ಮಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಮೊದಲಿಗೆ ನನಗೆ ಕೊರೋನಾ ಪಾಸಿಟಿವ್ ಅಂತ ಗೊತ್ತಾಯಿತು. ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದರಿಂದ ಕೊರೋನಾ ಬಂದರೂ ಹೆಚ್ಚಿನ ತೊಂದರೆ ಆಗಲಿಲ್ಲ.

- ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಂತೆ ಕೊರೋನಾ ಕೂಡ. ಅದನ್ನು ಮತ್ತಷ್ಟು ಧೈರ್ಯದಿಂದ ಎದುರಿಸಬೇಕು. ವ್ಯಾಕ್ಸಿನ್, ಸಾಮಾಜಿಕ ಅಂತರ, ಹೊರಗೆ ಅನಗತ್ಯವಾಗಿ ಓಡಾಡದಿರುವುದೇ ಇದಕ್ಕೆ ಅತ್ಯುತ್ತಮ ಚಿಕಿತ್ಸೆ.

- ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳು ಬಂದ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಅದೇ ಅರ್ಧ ಗೆದ್ದಂತೆ. ನಾವು ಮಾಡಿದ್ದು ಕೂಡ ಇದನ್ನೇ. ಒಬ್ಬರಿಗೆ ಕೊರೋನಾ ಪಾಸಿಟಿವ್ ಅಂತ ಗೊತ್ತಾದ ಮೇಲೆ ಎಲ್ಲರು ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಂಡ್ವಿ.

ಮನುಷ್ಯ ಬೆಳೀತಾ ಬೆಳೀತಾ ಭ್ರಷ್ಟನಾಗುತ್ತಾನೆ; ನಟ ಧನಂಜಯ್ ಭಾಷಣ ವೈರಲ್!

- ನಾನು ಮನೆಯಲ್ಲಿ ಹೆಚ್ಚು ಕಾಲ ಕಳೆದಿದ್ದು ಆಡಿಯೋ ಬುಕ್‌ಗಳನ್ನು ಕೇಳುವ ಮತ್ತು ಸಿನಿಮಾಗಳನ್ನು ನೋಡುವ ಮೂಲಕ. ಒಂದು ತಿಂಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ನೋಡುವ ಜತೆಗೆ ಆಡಿಯೋ ಬುಕ್‌ಗಳನ್ನು ಕೇಳಿದ ಖುಷಿ ಇದೆ. ಪುಸ್ತಕ ಮತ್ತು ಸಿನಿಮಾ ನಮ್ಮಲ್ಲಿ ಹೊಸ ಆಲೋಚನೆಗಳನ್ನು ಬೆಳೆಸುತ್ತದೆ.

- ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ‘ಟಗರು’ ಹಾಗೂ ‘ಭೈರವಗೀತ’ ಸಿನಿಮಾ ನೋಡಿ ನನ್ನ ಅಲ್ಲೂ ಅರ್ಜುನ್ ನಟನೆಯ ‘ಪುಷ್ಟ’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾಗಳನ್ನು ನೋಡಿ ಇದರಲ್ಲಿ ಇರುವುದು ಧನಂಜಯ್ ಅವರೇನಾ ಅಂತ ಕೇಳಿದ್ದು ನಿರ್ದೇಶಕ ಸುಕುಮಾರ್. ಈ ಸಿನಿಮಾಗಳಲ್ಲಿ ನನ್ನ ನಟನೆ, ಬಾಡಿ ಲ್ಯಾಂಗ್ವೇಜ್ ನೋಡಿಯೇ ಅವರು ಥ್ರಿಲ್ಲಾಗಿದ್ದರು.