ಕುಟುಂಬಕ್ಕೆ ಸಮಯ ನೀಡೋದು ಮುಖ್ಯ, ಈ ಪ್ಯಾಂಡಮಿಕ್ ನೋವು ನೀಡುತ್ತಿದೆ: ನಟ ಧನಂಜಯ್
ಚಿತ್ರೀಕರಣ ರದ್ದಾಗಿರುವ ಕಾರಣ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿರುವ ನಟ ಧನಂಜಯ್, ಕೊರೋನಾ ಪ್ಯಾಂಡಮಿಕ್ ಮಾನಸಿಕವಾಗಿ ತೊಂದರೆ ನೀಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗದ ಬಹು ಬೇಡಿಕೆಯ ವಿಲನ್ ಕಮ್ ನಟ ಡಾಲಿ ಧನಂಜಯ್ ಇದೀಗ ಕುಟುಂಬದ ಜೊತೆ ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಸಮಯ ಕಳೆಯುತ್ತಲೇ, ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಕಳೆದ ಲಾಕ್‌ಡೌನ್‌ನಲ್ಲಿ ಆಹಾರ ಕಿಟ್ ವಿತರಣೆ ಮಾಡುತ್ತಿದ್ದ ಡಾಲಿ ಈಗೇನು ಮಾಡುತ್ತಿದ್ದಾರೆ ಗೊತ್ತಾ?
'ಈ ಸಮಯದಲ್ಲಿ ಕುಟುಂಬದ ಜೊತೆಗಿರುವುದು ಮುಖ್ಯ. ಈ ಸಮಯದಲ್ಲಿ ಒಬ್ಬೊರಿಗೊಬ್ಬರು ಎಮೋಷನಲ್ ಸಪೋರ್ಟ್ ಆಗಿ ನಿಂತು ಕೊಳ್ಳಬೇಕು. ತುಂಬಾ ತಿಂಗಳಿಂದ ಫ್ಯಾಮಿಲಿಗೆ ಸಮಯ ನೀಡಲು ಆಗಿರಲಿಲ್ಲ. ಈ ಸಲ ನಾನು ಇವರ ಜೊತೆ ಇರಲೇ ಬೇಕು ಎಂದು ನಿರ್ಧರಿಸಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಯಾರು ಏನು ಮಾಡಲೂ ಅಗುತ್ತಿಲ್ಲ. ಎಷ್ಟೇ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ಎಲ್ಲಾ ಸ್ಟ್ರಾಂಗ್ ಆಗಿ ನಿಂತರೆ, ಮಾತ್ರ ಗೆಲ್ಲಬಹುದು,' ಎಂದು ಧನಂಜಯ್ ಮಾತನಾಡಿದ್ದಾರೆ.
'ಸದ್ಯಕ್ಕೆ ಸಿನಿಮಾಗಳ ಬಗ್ಗೆ ಚಿಂತಿಸುತ್ತಿಲ್ಲ. ಇಡೀ ಪ್ಯಾಂಡಮಿಕ್ ಮನಸ್ಸಿನ ಸ್ಥಿತಿ ಕೆಡಸಿದೆ. ನಮ್ಮ ರಾಜ್ಯದಲ್ಲಿ ಆಗುತ್ತಿರುವ ಸಾವುಗಳನ್ನು ನೋಡಿ ಏನೂ ಮಾಡಲು ಆಗುತ್ತಿಲ್ಲ ಎಂಬ ಬೇಸರವಿದೆ. ಈ ಸಂದರ್ಭದಲ್ಲಾದರೂ ಜನರ Science ಮಹತ್ವ ಏನು ಎಂದು ತಿಳಿದುಕೊಳ್ಳಲಿ. ವ್ಯಾಕ್ಸಿನ್ ತೆಗೆದುಕೊಳ್ಳಿ. ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ತಪ್ಪದೇ ಪಾಲಿಸಿ,' ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣ ಪ್ರೊಜೆಕ್ಟರ್ ನೀಡುವ ಮೂಲಕ ನೆರವಾದ ಧನಂಜಯ್!
ಕಳೆದ ತಿಂಗಳು ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಚಿತ್ರೀಕರಣದಲ್ಲಿ ಧನಂಜಯ್ ಭಾಗಿಯಾಗಿದ್ದರು. ಸದ್ಯ ಧನಂಜಯ್ ಕೈಯಲ್ಲಿ ರತ್ನನ್ ಪ್ರಪಂಚ, ಬಡವ ರಾಸ್ಕಲ್, ಶಿವಪ್ಪ ಹಾಗೂ ಹೆಡ್‌ಬುಷ್ ಸಿನಿಮಾಗಳಿವೆ.