ಡಾಲಿ ಧನಂಜಯ್ ಮದುವೆಗೆ ಇವ್ರೆಲ್ಲಾ ಹೋಗಿಲ್ಲ, ಏನೇನು ಕಾರಣ ಅಂತ ಒಮ್ಮೆ ನೋಡ್ಬಿಡಿ..!
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಧನಂಜಯ್ ಮದುವೆಗೆ ಬಂದಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಂದಿಲ್ಲ. ರಕ್ಷಿತ್ ಶೆಟ್ಟಿ ಬಂದಿಲ್ಲ, ಕಿಚ್ಚ ಸುದೀಪ್ ಬಂದಿಲ್ಲ, ವಿಜಯ್ ರಾಘವೇಂದ್ರ, ರಾಘವೇಂದ್ರ ರಾಜ್‌ಕುಮಾರ್, ಸುಮಲತಾ ಅಂಬರೀಷ್, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಶ್ಮಿಕಾ ಮಂದಣ್ಣ...

ನಟ ಡಾಲಿ ಧನಂಜಯ್ (Dolly Dhananjay) ಮದುವೆ ಅತ್ಯಂತ ಅದ್ದೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಈ ಮದುವೆಗೆ ಜರ್ಮನಿ ಡೈರೆಕ್ಟರ್, ಸ್ಯಾಂಡಲ್‌ವುಡ್ ಶಿವಣ್ಣ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿ ಹಾಕಿದ್ದಾರೆ. ಆದರೆ, ಸಿನಿರಂಗದ ಕೆಲವು ಸ್ಟಾರ್‌ಗಳು ಮಾತ್ರ ಮದುವೆಗೆ ಬಂದಿಲ್ಲ. ಯಾಕೆ ಬಂದಿಲ್ಲ, ಅದಕ್ಕೆ ಕಾರಣವೇನಿರಬಹುದು ಎಂದು ಹಲವರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಯಾಕೆ ಬಂದಿಲ್ಲ ಅನ್ನೋದಕ್ಕೆ ಜೆನ್ಯೂನ್ ಕಾರಣವಿದೆ.. ಏನು ಅಂತ ನೋಡಿ..
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಧನಂಜಯ್ ಮದುವೆಗೆ ಬಂದಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಂದಿಲ್ಲ. ರಕ್ಷಿತ್ ಶೆಟ್ಟಿ ಬಂದಿಲ್ಲ, ಕಿಚ್ಚ ಸುದೀಪ್ ಬಂದಿಲ್ಲ, ವಿಜಯ್ ರಾಘವೇಂದ್ರ, ರಾಘವೇಂದ್ರ ರಾಜ್‌ಕುಮಾರ್, ಸುಮಲತಾ ಅಂಬರೀಷ್, ರಿಷಬ್ ಶೆಟ್ಟಿ, ಅಂಬರೀಷ್, ರಾಜ್ ಬಿ ಶೆಟ್ಟಿ, ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಅಮೃತಾ ಅಯ್ಯಂಗಾರ್, ದಿನಕರ್ ತೂಗುದೀಪ ಹಾಗೂ ದರ್ಶನ್ ತೂಗುದೀಪ ನಟ ಧನಂಜಯ್ ಮದುವೆಗೆ ಹೋಗಿಲ್ಲ. ಇನ್ನೂ ಅನೇಕರು ಹೋಗಿಲ್ಲ..
ಕೆಲವರು ಮದುವೆಗೆ ಹೋಗದೇ ಇರೋದಕ್ಕೆ ಕಾರಣ ರಿವೀಲ್ ಆಗಿದೆ. ನಟ ಯಶ್ ಅವರು ಟಾಕ್ಸಿಕ್ ಚಿತ್ರೀಕರಣಕ್ಕೆ ಜಾರ್ಜಿಯಾ ದೇಶಕ್ಕೆ ಹೋಗಿದ್ದಾರೆ. ಹೀಗಾಗಿ ಅವರು ಮದುವೆಗೆ ಬಂದಿಲ್ಲ. ಕಿಚ್ಚ ಸುದೀಪ್ ಅವರು ಕೆಸಿಸಿ ಕ್ರಿಕೆಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ರಿಷಬ್ ಶೆಟ್ಟಿ ವ್ಯಾಲೆಂಟೈನ್ ಡೇಗೆ ಅವರು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ನಟಿ ರಚಿತಾ ರಾಮ್, ಮತ್ತೊಬ್ಬರು ಸಂಬಂಧಿಕರ ಮದುವೆ ಇದ್ದ ಕಾರಣ ರಚಿತಾ ರಾಮ್ ಧನಂಜಯ್ ಮದುವೆಗೆ ಹೋಗಿಲ್ಲ.
ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?
ದಿನಕರ್ ತೂಗುದೀಪ ಅವರು ಬಂದಿಲ್ಲ, ನಟ ದರ್ಶನ್ ಅವರಿಗೆ ನಟ ಧನಂಜಯ್ ಮದುವೆ ಆಮಂತ್ರಣ ಪತ್ರ ಕೊಟ್ಟಿಲ್ಲ. ಇದೇ ಕಾರಣವೋ ಏನೋ ಗೊತ್ತಿಲ್ಲ, ಆದ್ರೆ ದಿನಕರ್ ಅವರು ಮದುವೆಗೆ ಹೋಗಿಲ್ಲ.. ನಟ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿಗೆ ಆಮಂತ್ರಣ ಹೋಗಿದೆಯೋ ಗೊತ್ತಿಲ್ಲ. ನಟಿ ರಶ್ಮಿಕಾ ಮಂದಣ್ಣ ಅವ್ರಿಗೆ ಆಮಂತ್ರಣ ನೀಡಲಾಗಿತ್ತು, ಆದ್ರೆ ಅವರ ಕಾಲಿಗೆ ಏಟು ಆಗಿರುವ ಕಾರಣಕ್ಕೆ ಅವರು ಮದುವೆ ಅಟೆಂಡ್ ಮಾಡಿಲ್ಲ ಎನ್ನಲಾಗುತ್ತಿದೆ.
ಇನ್ನು ನಟ ಧನಂಜಯ್ ಅವರ ಬೆಸ್ಟ್ ಫ್ರಂಡ್ಸ್‌ನಲ್ಲಿ ಒಬ್ಬರಾಗಿದ್ದ ನಟಿ ಅಮೃತಾ ಅಯ್ಯಂಗಾರ್ ನಟ ಧನಂಜಯ್-ಧನ್ಯತಾ ಮದುವೆಗೆ ಬಂದಿಲ್ಲ. ಸುಮಲತಾ ಅಂಬರೀಷ್ ಯಾಕೆ ಹೋಗಿಲ್ಲ ಅನ್ನೀ ಕಾರಣ ರಿವೀಲ್ ಆಗಿಲ್ಲ. ಇನ್ನು ನಟ ದರ್ಶನ್‌ಗೆ ಕೊನೆಗೂ ನಟ ಧನಂಜಯ್ ಅವರು ಮದುವೆ ಆಮಂತ್ರಣ ಕೊಟ್ಟಿಲ್ಲ ಎನ್ನಲಾಗಿದೆ. ಕರೆಯದೇ ದರ್ಶನ್ ಬರಲು ಸಾಧ್ಯವೇ ಇಲ್ಲ ಅನ್ನೋದು ಎಲ್ಲರಿಗೂ ಅರ್ಥವಾಗುತ್ತೆ.
ಬಾಲ್ಯ ವಿವಾಹದಿಂದ ಹೊರಗೆ ಬಂದ ಸರಿತಾ, ಮತ್ತೆ ಸಮಸ್ಯೆ ಸುಳಿಯಲ್ಲಿ... ಯಾಕೆ ಹೀಗೆಲ್ಲಾ?
ನಿಜವಾಗಿ ಹೇಳಬೇಕು ಎಂದರೆ, ಮದುವೆಗೆ ಯಾರಿಗೆ ಸಾಧ್ಯವೋ ಅವರು ಹೋಗಿದ್ದಾರೆ, ಮಿಕ್ಕವರು ಹೋಗಿಲ್ಲ ಅಷ್ಟೇ ಅಂಥ ಅರ್ಥ ಮಾಡಿಕೊಂಡುಬಿಟ್ಟರೆ ಸಾಕು. ಏಕೆಂದರೆ, ಕರೆಯವುದು ಅವರ ಧರ್ಮ, ಹೋಗುವುದು ಬಿಡುವುದು ಅವರವರ ಸ್ವಾತಂತ್ರ್ಯ ಎನ್ನುವವರೂ ಇದ್ದಾರೆ. ಹೋಗಲಿ ಬಿಡಿ, ಹೋದವರು ಹೋದರು ಇಲ್ಲದವರು ಇಲ್ಲ, ಅಂತೂ ಮದುವೆ ಆಗಿದೆ..!