ಬೈಕ್‌ನಲ್ಲಿ ಬಂದು ಅಡ್ಡ ಹಾಕಿ ದುಡ್ಡು ಕೀಳಲು ಬಂದ ಕಿಡಿಗೇಡಿಗಳು. ಹಣ ಕೊಡೋದಿಲ್ಲ ಅಂತ ಹೇಳಿದ್ದಕ್ಕೆ ಗಲಾಟೆ ಮಾಡಿದ್ರು. ನಟ ಚೇತನ್ ಚಂದ್ರ ಅವರಿಗೆ ಮುಖಕ್ಕೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ. 

ಕಗ್ಗಲಿಪುರದಲ್ಲಿ ಸ್ಯಾಂಡಲ್‌ವುಡ್‌ ನಟ ಚೇತನ್ ಚಂದ್ರ (Chetan Chandra) ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಇಂದು ಅಮ್ಮಂದಿರ ದಿನವಾದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಸ್ವತಃ ನಟ ಚೇತನ್ ಚಂದ್ರ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

'ಬೈಕ್‌ನಲ್ಲಿ ಬಂದು ಅಡ್ಡ ಹಾಕಿ ದುಡ್ಡು ಕೀಳಲು ಬಂದ ಕಿಡಿಗೇಡಿಗಳು. ಹಣ ಕೊಡೋದಿಲ್ಲ ಅಂತ ಹೇಳಿದ್ದಕ್ಕೆ ಗಲಾಟೆ ಮಾಡಿದ್ರು. ಬಳಿಕ ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬಂದು ಕಾರಿಗೆ ಬೈಕ್ ಅಡ್ಡಹಾಕಿ, ನನಗೆ ಮುಖಕ್ಕೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ' ಎಂದಿದ್ದಾರೆ ನಟ ಚೇತನ್ ಚಂದ್ರ. ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ವೀಡಿಯೋ ಮಾಡಿ ನಟ ಚೇತನ್ ಚಂದ್ರ ಅವರು ನಡೆದ ಘಟನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. 

ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!

 ಪಿಯುಸಿ, ರಾಜಧಾನಿ, ಕುಂಭ ರಾಶಿ, ಪ್ರಭುತ್ವ ಹಾಗೂ ಜಾತ್ರೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಹಾಗು ವಿದೇಶಗಳಲ್ಲಿ ಅವರು ಹೊಟೆಲ್ ಬಿಸಿನೆಸ್ ಕೂಡ ನಡೆಸುತ್ತಿದ್ದಾರೆ. ಕೆಲವು ಕಿರುತೆರೆ ಶೋದಲ್ಲಿ ಕೂಡ ಕಾಣಿಸಿಕೊಂಡಿರುವ ನಟ ಚೇತನ್ ಚಂದ್ರ ಅವರು ಇಂದು ಅಮ್ಮಂದಿರ ದಿನದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. 

ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿದ್ದ ನಟಿ ಮೊನಿಷಾ ಸತ್ತಿದ್ದು ಹೇಗೆ? ಬೆಂಗಳೂರು ನಂಟು ಏನಿತ್ತು?

ಇಂದು 'ಅಮ್ಮಂದಿರ ದಿನಾಚರಣೆ' ಸಲುವಾಗಿ ಅಮ್ಮನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ಕಗ್ಗಲಿಪುರದ ಬಳಿ ಬಂದಾಗ ಯಾರೂ ಆಗುಂತಕ ಕಿಡಿಗೇಡಿಗಳು ನನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ ನಟ ಚೇತನ್ ಚಂದ್ರ. ಇದೀಗ ಅವರು ಫಸ್ಟ್ ಏಡ್‌ಗಾಗಿ ಆಸ್ಪತ್ರೆಗೆ ತೆರಳಿ, ಟ್ರೀಟ್ಮೆಂಟ್ ತೆಗೆದುಕೊಳ್ಳಲಿದ್ದು, ಈಗಾಗಲೇ ಕೇಸ್ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಕಿಯಾರಾ ಹಾಡಿ ಹೊಗಳಿದ ಮೃಣಾಲ್ ಠಾಕೂರ್, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ನಾ ಕೇಳ್ಬೇಡಿ!

View post on Instagram